ಜಿಲ್ಲಾ ಸುದ್ದಿ

ಚಿನ್ನ ಕದಿಯೋಕೆ ಸ್ಕಾರ್ಪಿಯೋದಲ್ಲಿ ಬರ್ತಿದ್ದವನ ಸೆರೆ!

ಗಿರವಿ ಅಂಗಡಿಯಲ್ಲಿ ಆಭರಣ ಮಾರಾಟಕ್ಕೆ ಯತ್ನಿಸುತ್ತಿದ್ದ ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಪೊಲೀಸರು ಬಂಧಿಸುವ ಮೂಲಕ ಕಳೆದ...

ಚಿನ್ನ ಕದಿಯೋಕೆ ಸ್ಕಾರ್ಪಿಯೋದಲ್ಲಿ ಬರ್ತಿದ್ದವನ ಸೆರೆ!
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಗಿರವಿ ಅಂಗಡಿಯಲ್ಲಿ ಆಭರಣ ಮಾರಾಟಕ್ಕೆ ಯತ್ನಿಸುತ್ತಿದ್ದ ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಪೊಲೀಸರು ಬಂಧಿಸುವ ಮೂಲಕ ಕಳೆದ ತಿಂಗಳು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯ ದವನಂ ಜುವೆಲರ್ಸ್ ನಲ್ಲಿ ನಡೆದಿದ್ದ ಕಳ್ಳತ ನ ಪ್ರಕರಣವನ್ನೂ ಬೇಧಿಸಿದ್ದಾರೆ. ಆನೇಕಲ್ ತಾಲೂಕು ಬನ್ನೇರುಘಟ್ಟ ರಸ್ತೆ ಸಿ.ಕೆ.ಪಾಳ್ಯ ನಿವಾಸಿ ಆನಂದ (28) ಬಂಧಿತ. ಈತನಿಂದ 1 ಸ್ಕಾರ್ಪಿಯೋ ಕಾರು, ರು.60 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಸೆ.8ರಂದು ಸ್ಕಾರ್ಪಿಂಯೋ ವಾಹನದಲ್ಲಿ ಹೊಸೂರು ರಸ್ತೆಯ ಗಿರವಿ ಅಂಗಡಿಯೊಂದರ ಬಳಿ ಬಂದಿದ್ದ ಆನಂದ, ಕದ್ದ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ. ಈ ಬಗ್ಗೆ ಬಾತ್ಮಿದಾರರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಯನ್ನು ಹಿಡಿದು ವಿಚಾರಣೆ ನಡೆಸಿದಾಗ ಆತನ ಬಳಿ ಅಪಾರ ಚಿನ್ನಾಭರಣ ಸಿಕ್ಕಿದೆ. ಈ ಬಗ್ಗೆ ದಾಖಲೆಗಳು ಕೇಳಿದಾಗ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಠಾಣೆಯಲ್ಲಿ ವಿಚಾರಿಸಿದಾಗ ಆನಂದ ವೃತ್ತಿಪರ ಕಳ್ಳ ಎನ್ನುವುದು ಗೊತ್ತಾಗಿದೆ. ಆನಂದ ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಹೊಸೂರು ಪೆÇಲೀಸರ ಕೈಗೆ ಸಿಕ್ಕಿ ಬಿದ್ದಿದ. ಸೇಲಂ ಜೈಲಿನಲ್ಲಿ 7 ತಿಂಗಳು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದವನಂ ಪ್ರಕರಣ ಬಯಲಿಗೆ: ವಿಚಾರಣೆ ವೇಳೆ ಆರೋಪಿ ದವನಂ ಆಭರಣ ಮಳಿಗೆಯಲ್ಲಿ ಕಳ್ಳತನ ಮಾಡಿರುವ ವಿಚಾರವನ್ನೂ ಬಾಯ್ಬಿಟ್ಟಿದ್ದಾನೆ. ಆ.7ರ ತಡರಾತ್ರಿ ಕಟ್ಟಡದ ಶೀಟ್ ಕತ್ತರಿಸಿ ಭದ್ರತಾ ಕಪಾಟು ಕೊಠಡಿಗೆ ನುಗ್ಗಿ ಒಂದೂವರೆ ಕೆಜಿ ಚಿನ್ನದ ಬಿಸ್ಕೆಟ್, 200 ಗ್ರಾಂ ಚಿನ್ನದ ನಾಣ್ಯ, 50 ಗ್ರಾಂ ಚಿನ್ನದ ಡಾಲರ್, 60 ಗ್ರಾಂ ಉಂಗುರ, 220 ಗ್ರಾಂ ಸರ ಕಳವು ಮಾಡಿದ್ದ. ಕೃತ್ಯಕ್ಕೆ ಮುನ್ನ ಮಳಿಗೆಯಲ್ಲಿ ಅಳವಡಿಸಿದ್ದ 4 ಸಿಸಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿ, ಡಿವಿಆರ್ ಗಳ ನ್ನೂ ಕದ್ದೊಯ್ದಿದ್ದ. ಬಳಿಕ ಅದಕ್ಕೆ ಹೊಂದಿಕೊಂಡಂತೆ ಇರುವ ಎರಡು ಬಟ್ಟೆ ಮಳಿಗೆಗಳ ಬಾಗಿಲು ಮುರಿದು ರು.25 ಸಾವಿರ ನಗದು ದೋಚಿದ್ದ. ಬೆಂಗಳೂರು ತುಮಕೂರು, ಮೈಸೂರು, ಮಂಡ್ಯ, ರಾಮ ನಗರ ಮುಂತಾ-ದೆಡೆ ಕಳ್ಳತನ ಮಾಡಿದ್ದ ಆನಂದ, ಹಗಲಿನಲ್ಲಿ ಸಭ್ಯಸ್ಥನಂತೆ ತಿರುಗಾಡುತ್ತಿದ್ದ. ಮಧ್ಯರಾತ್ರಿ ಚಾವಣಿ ಮೂಲಕ ಒಳ ಪ್ರವೇಶಿಸಿ ಕಳವು ಮಾಡುತ್ತಿದ್ದ.
7 ತಿಂಗಳು ಜೈಲು
ತಮಿಳುನಾಡಿನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಹೊಸೂರು ಟೌನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ವಿಚಾರಣೆ ವೇಳೆ 10 ಪ್ರಕರಣಗಳು ಬೆಳಕಿಗೆ ಬಂದಿದ್ದವು. ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಿದ್ದರು. 7 ತಿಂಗಳು ಜೈಲಿನಲ್ಲಿದ್ದ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಪುನಃ ತನ್ನ ಚಾಳಿಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.