ವಿವಾಹ ಬೇಡ ಎಂದಿದ್ದಕ್ಕೆ ವಿಷ ಸೇವಿಸಿದ ಪ್ರೇಮಿಗಳು
ಪಾಲಕರು ಮದುವೆ ಈಗಲೇ ಬೇಡ ಎಂದು ಹೇಳಿದ್ದಕ್ಕೆ ಬೇಸರಗೊಂಡ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ...

ಬೆಂಗಳೂರು: ಪಾಲಕರು ಮದುವೆ ಈಗಲೇ ಬೇಡ ಎಂದು ಹೇಳಿದ್ದಕ್ಕೆ ಬೇಸರಗೊಂಡ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ.
ಪೀಣ್ಯ ಸಮೀಪದ ಅಂಧ್ರಹಳ್ಳಿ ನಿವಾಸಿ ಆನಂದ ಎಂಬುವರ ಪುತ್ರ ಭರತ್(21) ಹಾಗೂ ಮರಿಯಪ್ಪನಪಾಳ್ಯ ಪಾಳ್ಯ ನಿವಾಸಿ ಸೋನು(19) ಆತ್ಮಹತ್ಯೆಗೆ ಶರಣಾದವರು. ಮಂಗಳವಾರ (ಅ.6) ರಾತ್ರಿ ರಾಜಾಜಿನಗರ ರಾಘವೇಂದ್ರ ಸ್ವಾಮಿ ದೇವಸ್ಥಾನದ ಬಳಿ ವಿಷ ಸೇವಿಸಿದ್ದ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಬೆಳಗ್ಗೆ ಪ್ರತ್ಯೇಕ ಆಸ್ಪತ್ರೆಗಳಲ್ಲಿ ಕೊನೆಯುಸಿರೆಳೆದಿದ್ದಾರೆ. ಭರತ್ ಪಿಯು ವ್ಯಾಸಂಗ ಮಾಡಿದ್ದ. ಸೋನು ಡಿಪ್ಲೊಮಾ ವ್ಯಾಸಂಗ ಪೂರ್ಣಗೊಳಿಸಿದ್ದಳು.
ಮರಿಯಪ್ಪನಪಾಳ್ಯದಲ್ಲಿ ವಾಸವಿದ್ದ ಭರತ್ ಹಾಗೂ ಸೋನು ಕಳೆದ 12 ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು. ಸದರನ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಪರಿಚಯವಾಗಿತ್ತು. ಆತ್ಮೀಯ ಸ್ನೇಹಿತರಾಗಿದ್ದ ಇವರ ನಡುವೆ 6 ವರ್ಷಗಳ ಹಿಂದೆ ಪ್ರೀತಿ ಅಂಕುರವಾಗಿತ್ತು. ಒಬ್ಬರೂ ಒಂದೇ ಸಮುದಾಯದವರಾಗಿದ್ದು ಇದಕ್ಕೆ ಪಾಲಕರ ವಿರೋಧ ಇರುವುದಿಲ್ಲ, ತಾವು ಮದುವೆ ಮಾಡಿಕೊಳ್ಳಬಹುದು ಎಂದು ಭಾವಿಸಿದ್ದರು. ಭರತ್, ಖಾಸಗಿ ಕಂಪನಿಯಲ್ಲಿ ಸಿಸ್ಟಮ್ ಆಡ್ಮಿನ್ ಆಗಿ ಕೆಲಸ ಮಾಡುತ್ತಿದ್ದ. ಆದರೆ, ಕೆಲ ಕಾರಣಗಳಿಂದ ಕೆಲ ತಿಂಗಳುಗಳ ಹಿಂದೆ ಕೆಲಸ ಬಿಟ್ಟಿದ್ದ ಎಂದು ಪೊಲೀಸರು ತಿಳಿಸಿದರು.
ತಾನು ಯುವತಿಯನ್ನು ಪ್ರೀತಿಸುತ್ತಿದ್ದು ಆಕೆಯನ್ನು ಮದುವೆಯಾಗುತ್ತೇನೆ ಎಂದು ಪಾಲಕರಿಗೆ ಹೇಳಿದ್ದ. ಆದರೆ, ಇನ್ನೂ ಚಿಕ್ಕ ವಯಸ್ಸಾಗಿದ್ದು, ಈಗಲೇ ಮದುವೆ ಬೇಡ. ನಿಮ್ಮ ಕಾಲ ನೀವು ನಿಂತುಕೊಂಡ ಬಳಿಕ ಮದುವೆ ಮಾಡಿಕೊಳ್ಳುವಂತೆ ಎಂದು ಪಾಲಕರು ಹೇಳಿದ್ದರು. ಎನ್ನಲಾಗಿದೆ. ಇನ್ನು ಸೋನು ಮನೆಯಲ್ಲೂ ಇದೇ ಅಭಿಪ್ರಾಯ ಬಂದಿತ್ತು ಎನ್ನಲಾಗಿದೆ. ಪಾಲಕರ ಮಾತಿಗೆ ಒಪ್ಪದ ಭರತ್, ಮದುವೆ ಮಾಡಿಕೊಳ್ಳುವುದಾಗಿ ಹೇಳಿದ ಕಾರಣ ಮನೆಯಲ್ಲಿ ಜಗಳವಾಗಿತ್ತು.
.
ಪರಸ್ಪರ ಮಾತನಾಡಿಕೊಂಡ ಭರತ್ ಹಾಗೂ ಸೋನು, ಮಂಗಳವಾರ (ಅ.6) ರಾತ್ರಿ ರಾಜಾಜಿನಗರ ರಾಘವೇಂದ್ರ ಸ್ವಾಮಿ ದೇವಸ್ಥಾನದ ಬಳಿ ವಿಷ ಸೇವಿಸಿದ್ದರು. ಇಬ್ಬರ ಒದ್ದಾಡ ಗಮನಿಸಿದ ಟಿಟಿ ವಾಹನದ ಚಾಲಕರೊಬ್ಬರು ಸಮೀಪದ ಸುಗುಣ ಆಸ್ಪತ್ರೆಗೆ ದಾಖಲಿಸಿದ್ದರು. ಇಬ್ಬರ ಸ್ಥಿತಿ ಗಂಭೀರವಾಗಿದ್ದ ಕಾರಣ ಸೋನುಳನ್ನು ಮಣಿಪಾಲ್ ಆಸ್ಪತ್ರೆಗೆ ಹಾಗೂ ಭರತ್‍ನನ್ನು ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಬೆಳಗ್ಗೆ 3 ಗಂಟೆ ಸುಮಾರಿಗೆ ಸೋನು ಮೃತಪಟ್ಟಿದ್ದಾಳೆ. 7.30ರ ಸುಮಾರಿಗೆ ಭರತ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ರಾಜಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


