ಜಿಲ್ಲಾ ಸುದ್ದಿ

ಬೆಂಗಳೂರಿನಲ್ಲಿ ಯುವಕರ ಮೇಲೆ ಯುವಕರಿಂದ ಸಾಮೂಹಿಕ ಲೈಂಗಿಕ ದೌರ್ಜನ್ಯ

ಇತ್ತೀಚೆಗಷ್ಟೇ ಟಿಟಿ ವಾಹನದಲ್ಲಿ ಬಿಪಿಓ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ನಗರದಲ್ಲಿ ಮತ್ತೊಂದು ವಿಕೃತ...

ಬೆಂಗಳೂರಿನಲ್ಲಿ ಯುವಕರ ಮೇಲೆ ಯುವಕರಿಂದ ಸಾಮೂಹಿಕ ಲೈಂಗಿಕ ದೌರ್ಜನ್ಯ
ಲೈಂಗಿಕ ದೌರ್ಜನ್ಯ
Published On :
ಬೆಂಗಳೂರು: ಇತ್ತೀಚೆಗಷ್ಟೇ ಟಿಟಿ ವಾಹನದಲ್ಲಿ ಬಿಪಿಓ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ನಗರದಲ್ಲಿ ಮತ್ತೊಂದು ವಿಕೃತ ಸಾಮೂಹಿಕ ಅತ್ಯಾಚಾರ ಪ್ರಕರಣ ವರದಿಯಾಗಿದೆ.
ಮೈಕೋ ಲೇಔಟ್​ ಠಾಣಾ ವ್ಯಾಪ್ತಿಯಲ್ಲಿ ಕಾಲ್​ ಸೆಂಟರ್​ ಯುವಕರ ಮೇಲೆ ಮತ್ತೊಂದು ಯುವಕರ ಗುಂಪು ಗ್ಯಾಂಗ್ ರೇಪ್​ ನಡೆಸಿರುವ ವಿಲಕ್ಷಣ ಘಟನೆ ನಡೆದಿದೆ.
ಕಾರಿನಲ್ಲಿ ಬಂದ ಮೂವರು ಕಾಮುಕರು ಕಾಲ್ ಸೆಂಟರ್ ಉದ್ಯೋಗಿಗಳಿದ್ದ ಟಿಟಿ ತಡೆದು ಒಳಗಿದ್ದ ಇಬ್ಬರು ಯುವಕರ ಮೇಲೆ ವಿಕೃತಕಾಮ ತೀರಿಸಿಕೊಂಡಿದ್ದಾರೆ. 
ಸೆಪ್ಟೆಂಬರ್ 29ರಂದು ಮೈಕೋ ಲೇಔಟ್‌ನ 16ನೇ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರ ಎಸಗಿದ ಕಾಮಾಂಧರು ಬಳಿಕ ಕಾಲ್ ಸೆಂಟರ್​ ಉದ್ಯೋಗಿಗಳ ಬಳಿಯಿದ್ದ ಮೊಬೈಲ್, ಲ್ಯಾಪ್ ಟಾಪ್ ದೋಚಿ ಪರಾರಿಯಾಗಿದ್ದಾರೆ. ಮೈಕೋ ಲೇಔಟ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.