6 ತಿಂಗಳ ಮಗು ನಿಗೂಢ ಸಾವು
ನಗರದ ಪಟೇಗಾರಪಾಳ್ಯದಲ್ಲಿ 6 ತಿಂಗಳ ಹೆಣ್ಣು ಮಗುವೊಂದು ನಿಗೂಢವಾಗಿ ಸಾವಿಗೀಡಾಗಿದೆ...

ಬೆಂಗಳೂರು: ನಗರದ ಪಟೇಗಾರಪಾಳ್ಯದಲ್ಲಿ 6 ತಿಂಗಳ ಹೆಣ್ಣು ಮಗುವೊಂದು ನಿಗೂಢವಾಗಿ ಸಾವಿಗೀಡಾಗಿದೆ.
ವಿಜಯ್ ಕುಮಾರ್ ಮತ್ತು ಲಕ್ಷ್ಮೀ ದಂಪತಿಯ ಆರು ತಿಂಗಳ ಮಗು ಶನಿವಾರ ಸಂಜೆ ಕಾಣೆಯಾಗಿತ್ತು. ಮನೆಯ ಸುತ್ತಮುತ್ತ ಹುಡುಕಾಡಿದಾಗ 100 ಮೀಟರ್ ದೂರದ ಲಕ್ಷ್ಮೀ ಅವರ ತಾಯಿಯ ಮನೆಯ ಸಂಪ್ ನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.
ಯಾರೋ ಮಗುವನ್ನು ಸಂಪ್ ನಲ್ಲಿ ಹಾಕಿ ಕೊಂದಿದ್ದಾರೆ ಎಂದು ಹೇಳಲಾಗಿದೆ. ಆದರೆ, ಲಕ್ಷ್ಮೀ ಅವರ ತಾಯಿಯ ಮನೆಯನ್ನು ಈ ಹಿಂದೆಯೇ ಬಾಡಿಗೆಗೆ ಕೊಡಲಾಗಿದೆ. ಹಲವು ತಿಂಗಳ ಹಿಂದೆ ಲಕ್ಷ್ಮೀ ಅವರ ತಾಯಿ ತೀರಿಕೊಂಡಿದ್ದರು. ಅಂದಿನಿಂದ ಲಕ್ಷ್ಮೀ ಮಾನಸಿಕ ಅಸ್ವಸ್ಥರಾಗಿದ್ದರು. ಬಹುಶಃ ಲಕ್ಷ್ಮೀ ಅವರೇ ಈ ಕೃತ್ಯ ಮಾಡಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಲಕ್ಷ್ಮೀ ಈ ಆರೋಪವನ್ನು ನಿರಾಕರಿಸಿದ್ದಾರೆ. ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


