ಜಿಲ್ಲಾ ಸುದ್ದಿ

ರಸ್ತೆಗಿಳಿದ ಬಯೋ ಬಸ್

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇದೇ ಮೊದಲ ಬಾರಿಗೆ ಹತ್ತು ಬಯೋ ಡೀಸೆಲ್ ಚಾಲಿತ ಬಯೋ ಬಸ್ ಗಳ ಸೇವೆ ಆರಂಭಿಸಿದ್ದು, ಈ ಬಸ್ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ವಿಧಾನಸೌಧ ಆವರಣದಲ್ಲಿ ಚಾಲನೆ ನೀಡಿದರು...

ರಸ್ತೆಗಿಳಿದ ಬಯೋ ಬಸ್
ಬಯೋ ಡೀಸೆಲ್ ಚಾಲಿತ ಬಯೋ ಬಸ್ ಗಳ ಸೇವೆಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Published On :

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇದೇ ಮೊದಲ ಬಾರಿಗೆ ಹತ್ತು ಬಯೋ ಡೀಸೆಲ್ ಚಾಲಿತ ಬಯೋ ಬಸ್ ಗಳ ಸೇವೆ ಆರಂಭಿಸಿದ್ದು, ಈ ಬಸ್ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ವಿಧಾನಸೌಧ ಆವರಣದಲ್ಲಿ ಚಾಲನೆ ನೀಡಿದರು.

ಕೆಎಸ್ ಆರ್ ಟಿಸಿ ಸದ್ಯ 8200ಬಸ್ ಗಳನ್ನು ಹೊಂದಿದೆ. ಬಯೋ ಡೀಸೆಲ್ ಬಳಕೆಯಿಂದಾಗಿ ಇಂಧನ ವೆಚ್ಚದಲ್ಲಿ ಪ್ರತಿ ಲೀಟರ್ ಗೆ ಆಂಜಾರು ರು.5 ಉಳಿತಾಯವಾಗಲಿದೆ. ಬಯೋ ಡೀಸೆಲ್ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತವಾಗಿ, ಬೆಂಗಳೂರು ಕೇಂದ್ರ ವಿಭಾಗದ ಘಟಕ - 5 ನ 10 ಬಸ್ ಗಳಲ್ಲಿ ಬಯೋ ಡೀಸೆಲ್ ಬಳಸಾಲುತ್ತಿದೆ. ಮುಂದಿನ ದಿನಗಳಲ್ಲಿ ಒಂದು ಘಟಕದ 106 ಬಸ್ ಗಳು ಹಾಗೂ ವಿಭಾಗ ಮಟ್ಟದ 1500 ಬಸ್ ಗಳಿಗೆ ಬಯೋಡೀಸೆಲ್ ಬಳಸಲು ಉದ್ದೇಶಿಸಲಾಗಿದೆ. ಬಯೋಡೀಸೆಲ್ ಶೇ.20 ಮತ್ತು ಪೆಟ್ರೋ ಡೀಸೆಲ್ ಶೇ.80 ರಷ್ಟು ಪ್ರಮಾಣದ ಸಂಯೋಜನೆಯೇ ಬಯೋಡೀಸೆಲ್.

ಪ್ರತಿ ದಿನ ಕೆಎಸ್ ಆರ್ ಟಿಸಿಯಲ್ಲಿ ಅಂದಾಜು 587000 ಲೀಟರ್ ಡೀಸೆಲ್ ಬಳಸುತ್ತಿದ್ದು, ಶೇ.20 ಬಯೋಡೀಸೆಲ್ ಬಳಸಿದ್ದಲ್ಲಿ ರು.587000 ಹಣ ಉಳಿತಾಯವಾಗಲಿದೆ. ಇದರಿಂದ ವಾರ್ಷಿಕ ಅಂದಾಜು 21.50 ಕೋಟಿ ಹಣ ಉಳಿಯಲಿವೆ. ಈ ಪ್ರಕ್ರಿಯೆಯನ್ನು ರಾಜ್ಯದ ಎಲ್ಲಾ ನಾಲ್ಕು ನಿಗಮಗಳಲ್ಲಿ ಜಾರಿಗೆ ತಂದರೆ, ವಾರ್ಷಿಕ 55 ಕೋಟಿ ಹಣ ಉಳಿತಾಯವಾಗುವ ಸಾಧ್ಯತೆಗಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.