ಜಿಲ್ಲಾ ಸುದ್ದಿ

ಉದ್ಯಾನದಲ್ಲಿ ಸಂಗೀತ, ನೃತ್ಯದ ಸಂಗಮ

ಪ್ರತಿ ಭಾನುವಾರ ನಗರದ ಕಬ್ಬನ್ ಉದ್ಯಾ ನದಲ್ಲಿ ಸಂಗೀತ, ನೃತ್ಯಗಳ ಸಂಗಮ. ಪ್ರತಿ ವಾರವೂ ವಿಶೇಷ ಕಾರ್ಯಕ್ರಮಗಳು ವಾಯುವಿಹಾರಿಗಳಿಗೆ...

ಉದ್ಯಾನದಲ್ಲಿ ಸಂಗೀತ, ನೃತ್ಯದ ಸಂಗಮ
ಕಬ್ಬನ್ ಉದ್ಯಾ ನದಲ್ಲಿ ಸಂಗೀತ, ನೃತ್ಯಗಳ ಸಂಗಮ (ಕೃಪೆ : ಕೆಪಿಎನ್ )
Published On :
ಬೆಂಗಳೂರು: ಪ್ರತಿ ಭಾನುವಾರ ನಗರದ ಕಬ್ಬನ್ ಉದ್ಯಾ ನದಲ್ಲಿ ಸಂಗೀತ, ನೃತ್ಯಗಳ ಸಂಗಮ. ಪ್ರತಿ ವಾರವೂ ವಿಶೇಷ ಕಾರ್ಯಕ್ರಮಗಳು ವಾಯುವಿಹಾರಿಗಳಿಗೆ ಮುದನೀಡುತ್ತಿವೆ. ಈ ವಾರವೂ ಉದ್ಯಾನದಲ್ಲಿ ಉದಯ ರಾಗ ಕಾರ್ಯಕ್ರಮದಲ್ಲಿ ಗಂಗಾಧರ ಸ್ವಾಮಿ ಮತ್ತು ತಂಡದವರಿಂದ ಭಕ್ತಿಗೀತೆ ಹಾಗೂ ಜನಪದಗೀತೆಗಳ ಗಾಯನ ನಡೆಯಿತು.ಬೆಳಗ್ಗೆ 7ರಿಂದ ಯೂನಿವರ್ಸ್ ಆರ್ಟ್  ಫೌಂಡೇಶನ್ ಸಹಯೋಗದಲ್ಲಿ ಆರತಿ ವಿಜಯಕುಮಾರ್ ಅವರಿಂದ ಭರತನಾಟ್ಯ,ದಿ ಸಂಸ್ಕೃತಿ ಟೆಂಪಲ್ ಆಫ್  ಆರ್ಟ್ ವತಿಯಿಂದ ನೃತ್ಯ ಪ್ರದರ್ಶನ ಮತ್ತು ಗುರುನಾಗಶ್ರೀ ಅವರಿಂದ ಜಾನಪದ ನೃತ್ಯ ಕಾರ್ಯಕ್ರಮ ಉದ್ಯಾನಕ್ಕೆ ಮೆರುಗು ನೀಡಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಅಕ್ಷಯ ಫೌಂಡೇಶನ್ ವತಿಯಿಂದ ಕನ್ನಡ ಪ್ರಾಧ್ಯಾಪಕ ರವಿಕುಮಾರ್ ನಿಹಾ ಅವರಿಂದ ಶಾಂತಕವಿಯ ಕನ್ನಡ ಪರಿಕಲ್ಪನೆ ಕುರಿತು ವಿಶೇಷ ಉಪನ್ಯಾಸ, ಇದರೊಂದಿಗೆ ರೇಷ್ಮೆ ಇಲಾಖೆಯಿಂದ ರೇಷ್ಮೆಗೂಡಿನಿಂದ ಮಾಡಿದ ವಿವಿಧ ವಿನ್ಯಾಸದ ಹಾರಗಳು, ಅಲಂಕಾರಿಕ ಮತ್ತು ಇತರೆ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಆಯೋಜನೆಗೊಂಡಿತ್ತು.
ಬೆಳಗ್ಗೆ 9ರಿಂದ 12ರವರೆಗೆ ತಾರಸಿ, ಕೈತೋಟ ಬಗ್ಗೆ ತೋಟಗಾರಿಕೆ ಉಪ ನಿರ್ದೇಶಕರು ಪ್ರಾತ್ಯಕ್ಷಿಕೆ ಮತ್ತು ತರಬೇತಿ ನೀಡಿದರು. ಉದ್ಯಾನದ ಆವರಣದಲ್ಲಿ ದಿಲನರ್ಸರಿ ಮೆನ್ ಕೋಆಪರೇಟಿವ್ಸೊ ಟೈಟಿಯಿಂದ ವಿವಿಧ ಅಲಂಕಾರಿಕ ಗಿಡಗಳು ಮತ್ತು ಉದ್ಯಾನ ಸಲಕರಣೆ ಮಾರಾಟ ಕಾರ್ಯಕ್ರಮ ಉಪಯುಕ್ತವಾಗಿತ್ತು. ಉದ್ಯಾನದ ಸಂಧ್ಯಾರಾಗದಲ್ಲಿ ಕುಮಾರ್ ಎಚ್.ಎಸ್ ಮತ್ತು ತಂಡದಿಂದ ಜನಪದ, ಭಕ್ತಿಗೀತೆ ಮತ್ತು ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಕಬ್ಬನ್ ಉದ್ಯಾನದಲ್ಲಿ ಗೋಗ್ರೀನ್ ಸಂಸ್ಥೆಯಿಂದ ನಡೆದ ಮಧುಮೇಹ ಜಾಗೃತಿ ಸೈಕಲ್ ಜಾಥಾ ನಡೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.