ಚರ್ಚೆಯಿಲ್ಲದೇ ವಿಧೇಯಕಗಳಿಗೆ ಒಪ್ಪಿಗೆ
ಘೋಷಣೆ, ಗದ್ದಲ, ವಾಕ್ಸಮರಗಳ ನಡುವೆಯೇ ಕರ್ನಾಟಕ ಪಂಚಾಯತ್ ರಾಜ್ (2ನೇ ತಿದ್ದುಪಡಿ) ವಿಧೇಯಕ ಸೇರಿದಂತೆ ಒಟ್ಟಾರೆ 4 ವಿಧೇಯಕಗಳ ಬಗ್ಗೆ ಚರ್ಚೆ ನಡೆಯದೇ ಮೇಲ್ಮನೆಯಲ್ಲಿ ಅಂಗೀಕಾರವಾದವು...

ವಿಧಾನಪರಿಷತ್: ಘೋಷಣೆ, ಗದ್ದಲ, ವಾಕ್ಸಮರಗಳ ನಡುವೆಯೇ ಕರ್ನಾಟಕ ಪಂಚಾಯತ್ ರಾಜ್ (2ನೇ ತಿದ್ದುಪಡಿ) ವಿಧೇಯಕ ಸೇರಿದಂತೆ ಒಟ್ಟಾರೆ 4 ವಿಧೇಯಕಗಳ ಬಗ್ಗೆ ಚರ್ಚೆ ನಡೆಯದೇ ಮೇಲ್ಮನೆಯಲ್ಲಿ ಅಂಗೀಕಾರವಾದವು.
ಸಚಿವ ಆಂಜನೇಯ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಧರಣಿ ನಡೆಸುತ್ತಿರುವಾಗಲೇ ವಿಧೇಯಕಗಳು ಅನುಮೋದನೆಗೊಂಡವು. ಜೆಡಿಎಸ್ ಸದಸ್ಯರು ಮೂಕ ಪ್ರೇಕ್ಷಕರಂತೆ ವೀಕ್ಷಿಸುತ್ತಿದ್ದರು. ಚರ್ಚಿಸಲು ಅವಕಾಶ ಕೊಡಿ ಎಂಬ ಜೆಡಿಎಸ್ ಬೇಡಿಕೆಗೆ ಆಡಳಿತ ಪಕ್ಷ ಸೊಪ್ಪು ಹಾಕಲಿಲ್ಲ.
ಸಚಿವ ಆಂಜನೇಯ ಕಮಿಷನ್ ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದು, ರಾಜಿನಾಮೆ ನೀಡಬೇಕು. ಭ್ರಷ್ಟ ಸಚಿವರನ್ನು ರಕ್ಷಿಸುತ್ತಿರುವ ಸಿಎಂ ಸಹ ರಾಜಿನಾಮೆ ನೀಡಬೇಕೆಂದು ಬಿಜೆಪಿ ಧರಣಿ ನಡೆಸಿತು. ಧರಣಿ ನಡುವೆ ಚರ್ಚೆಗೆ ಅವಕಾಶ ನೀಡದೆ ಕರ್ನಾಟಕ ಪಂಚಾಯತ್ ರಾಜ್ (2 ನೇ ತಿದ್ದುಪಡಿ)ವಿಧೇಯಕ, ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) (ತಿದ್ದುಪಡಿ) ವಿಧೇಯಕ, 2015, ಕರ್ನಾಟಕ ಅರಣ್ಯ (ತಿದ್ದುಪಡಿ) ವಿಧೇಯಕ, 2015, ಕರ್ನಾಟಕ ಧನ ವಿನಿಯೋಗ(ಸಂಖ್ಯೆ:5) ವಿಧೇಯಕಗಳು ಅಂಗೀಕೃತಗೊಂಡಿವೆ. ಕರ್ನಾಟಕ ಜಲಸಾರಿಗೆ ಮಂಡಳಿ ವಿಧೇಯಕವನ್ನು ವಾಪಸ್ ಪಡೆಯಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


