ರೋಲ್ಡ್ ಗೋಲ್ಡ್ ಕದ್ದರು! ಮಾಂಗಲ್ಯ ಸರದಲ್ಲಿತ್ತು ಕೇವಲ ಏಳು ಗ್ರಾಂ ಚಿನ್ನ
ಸರಗಳ್ಳರು ಬುಧವಾರ ಬೆಳಗ್ಗೆ ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಮಹಿಳೆಯೊಬ್ಬರ ಸರ ಕಸಿದು ಪರಾರಿಯಾಗಿರುವ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ...

ಬೆಂಗಳೂರು: ಮತ್ತೆ ತಮ್ಮ ಕೈಚಳಕ ಮುಂದುವರಿಸಿರುವ ಸರಗಳ್ಳರು ಬುಧವಾರ ಬೆಳಗ್ಗೆ ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಮಹಿಳೆಯೊಬ್ಬರ ಸರ ಕಸಿದು ಪರಾರಿಯಾಗಿರುವ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಾಗರಭಾವಿ ಮುಖ್ಯರಸ್ತೆಯ ಮಾರುತಿ ನಗರ ನಿವಾಸಿ ದಿವ್ಯಾ (26) ಸರ ಕಳೆದುಕೊಂಡವರು. ಬೆಳಗ್ಗೆ ರಂಗೋಲಿ ಹಾಕಿ ಮನೆ ಒಳಗೆ ಹೋಗಲು ತಿರುಗುತ್ತಿದ್ದಂತೆ ತಿರುಗುತ್ತಿದ್ದಂತೆ ಹಿಂದಿನಿಂದ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಹಿಳೆಯ ಕುತ್ತಿಗೆಯಲ್ಲಿದ್ದ ಎಗರಿಸಿ ಪರಾರಿಯಾಗಿದ್ದಾರೆ.
ಕಿತ್ತಿದ್ದು ರೋಲ್ಡ್ ಗೋಲ್ಡ್ ಚೈನ್!
ಕಳ್ಳರು ಕಸಿದುಕೊಂಡ ಸರ ರೋಲ್ಡ್ ಗೋಲ್ಡ್ ಎಂದು ದಿವ್ಯಾ ತಿಳಿಸಿದ್ದಾರೆ.ನಗರದಲ್ಲಿ ಚಿನ್ನದ ಸರ ಅಪಹರಣ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಚಿನ್ನದ ಮಾಂಗಲ್ಯಕ್ಕೆ ರೋಲ್ಡ್ ಗೋಲ್ಡ್ ಚೈನ್ ಅಳವಡಿಸಿದ್ದೆ. ಆದರೆ ಕತ್ತಿನಲ್ಲಿರುವುದು ಚಿನ್ನದ ಸರವೆಂದು ಭಾವಿಸಿದ ಕಳ್ಳರು ಬೆಳಗ್ಗೆ ರಂಗೋಲಿ ಹಾಕುವಾಗ ಹಿಂದಿನಿಂದ ಬಂದು ಕಸಿದು ಪರಾರಿಯಾದರು. ಅದರಲ್ಲಿ 7 ಗ್ರಾಂ ಚಿನ್ನ ಇತ್ತು ಎಂದು ಹೇಳಿದ್ದಾರೆ.
ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರಗಳ್ಳರು ಬೈಕ್‍ನಲ್ಲಿ ಬಂದು ಸರ ಅಪಹರಣದ ಮಾಡಿದ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಶೀಘ್ರದಲ್ಲೇ ಅವರನ್ನು ಪತ್ತೆ ಮಾಡಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


