ಜಿಲ್ಲಾ ಸುದ್ದಿ

ಹತ್ಯೆ ಮಾಡಿ, ಬೀಗ ಹಾಕಿ ಪರಾರಿ!

ಪರಪ್ಪನ ಅಗ್ರಹಾರದ ಮನೆಯೊಂದರಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿ, ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ...

ಹತ್ಯೆ ಮಾಡಿ, ಬೀಗ ಹಾಕಿ ಪರಾರಿ!
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಪರಪ್ಪನ ಅಗ್ರಹಾರದ ಮನೆಯೊಂದರಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿ, ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೊದಲು ಮಡಿವಾಳದ ನಿವಾಸಿ, ಈಗ ಕೋಲಾರದಲ್ಲಿ ವಾಸಿಸುತ್ತಿದ್ದ ಕಾರು ಚಾಲಕ ಅಬ್ದುಲ್ ಖಾದರ್ (40) ಮೃತ ವ್ಯಕ್ತಿ. ಒಂದೆರಡು ದಿನಗಳ ಹಿಂದೆಯೇಈ ಕೊಲೆ ನಡೆದಿರಬಹುದು ಎಂದು ಶಂಕಿಸಿರುವ ಪೊಲೀಸರು, ಬುಧವಾರ ಪ್ರಕರಣ ಬೆಳಕಿಗೆ ಬಂದಿದೆ ಎಂದಿದ್ದಾರೆ. ಅಲ್ಲದೆ, ಕೊಲೆ ಘಟನೆ ನಡೆದಿರುವ ಮನೆಯಲ್ಲಿದ್ದ ವ್ಯಕ್ತಿ ಕೂಡ ನಾಪತ್ತೆಯಾಗಿದ್ದಾನೆ. ಆತನೇ ಕೊಲೆ ಮಾಡಿರಬಹು ದು ಎಂಬ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿದ್ದ ವ್ಯಕ್ತಿ ನಾಪತ್ತೆಯಾಗಿದ್ದೇಕೆ?: ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಪರಪ್ಪನ ಅಗ್ರಹಾರದ ಎಇಸಿಎಸ್ ಬಡಾವಣೆಯ ಮನೆಯೊಂದರಲ್ಲಿ ಹತ್ಯೆ ನಡೆದಿದೆ. ಈ ಮನೆಯಲ್ಲಿ ಆಟೋ ಚಾಲಕ ಸಮೀರ್ (20) ಮತ್ತು ಈತನ ತಾಯಿ ಪರ್ವಿನ್ ಇಬ್ಬರೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲದೆ ಪರ್ವಿನ್‍ಗೆ ಪುತ್ರಿಯೂ ಇದ್ದು, ಆಕೆ ವಿವಾಹದ ನಂತರ ಮಂಗಮ್ಮನಪಾಳ್ಯದಲ್ಲಿ ವಾಸಿಸುತ್ತಿದ್ದರು. ಎರಡು ದಿನಗಳ ಹಿಂದೆ ಪರ್ವಿನ್ ಅವರು ತಮ್ಮ ಪುತ್ರಿ ವಾಸವಿದ್ದ ಮಂಗಮ್ಮನಪಾಳ್ಯದ ಮನೆಗೆ ತೆರಳಿದ್ದರು. ಈ ವೇಳೆ ಸಮೀರ್  ಒಬ್ಬರೆ ಪರಪ್ಪನ ಬಡಾವಣೆಯ ಮನೆಯಲ್ಲಿ ದ್ದಾಗ, ಅವರನ್ನು ಕಾಣಲು ಮನೆಯ ಮಾಲೀಕ ಅನ್ವರ್ ಆಗಮಿಸಿದ್ದಾರೆ. ಆಗಮನೆಗೆ ಬೀಗ ಹಾಕಲಾಗಿತ್ತು. ಅಲ್ಲದೆ, ಬೀಗ  ಹಾಗೂ ಬಾಗಿಲ ಮೇಲೆ ರಕ್ತದ ಕಲೆಗಳಾಗಿದ್ದವು. ಇದರಿಂದ ಅನುಮಾನ ಗೊಂಡ ಮಾಲೀಕ ಅನ್ವರ್ ಅವರು ತಕ್ಷಣ ಸಮೀರ್‍ನ ತಾಯಿ ಪರ್ವಿನ್‍ಗೆ ಕರೆ ಮಾಡಿದ್ದಾರೆ. ಇದರಿಂದ ಗಾಬರಿಗೊಂಡ ಪರ್ವಿನ್  ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ, ಅವರ ಬಳಿ ಮನೆಯ ಬೀಗದ ಕೈ ಇರಲಿಲ್ಲ. ಹೀಗಾಗಿ ಬಾಗಿಲನ್ನು ಒಡೆದು ತೆಗೆದು ನೋಡಿದಾಗ ಅಬ್ದುಲ್ ಖಾದರ್ ಶವವಾಗಿ ಬಿದ್ದಿರುವುದು ಕಂಡುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಆದರೆ, ಮನೆಯಲ್ಲಿದ್ದ ಸಮೀರ್ ನಾಪತ್ತೆಯಾಗಿದ್ದಾನೆ. ಮೊಬೈಲ್ ಸಹ ಸ್ವಿಚ್ ಆಫ್  ಆಗಿದ್ದು, ಆತನ ಬಗ್ಗೆ ಯಾವುದೇ  ಸುಳಿವು ಸಿಕ್ಕಿಲ್ಲ. ಅಲ್ಲದೆ ಮೃತರ ಬಗ್ಗೆಯೂ ಮಾಹಿತಿ ಇಲ್ಲ. ಹಾಗಾಗಿ ಆತನೇ ಹತ್ಯೆ ಮಾಡಿರಬಹುದು ಎಂಬ ಶಂಕೆಯಿದೆ. ನಾಪತ್ತೆಯಾಗಿರುವ ಸಮೀರ್‍ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆ ಭಾಗದಲ್ಲಿ ಶೆಡ್‍ಗಳು ಹಾಗೂ ಸಣ್ಣ ಮನೆಗಳು ಹೆಚ್ಚಾಗಿವೆ. ಹಾಗಾಗಿ ಅಲ್ಲಿ ಸಿಸಿಟಿವಿಗಳೂ ಇಲ್ಲ. ಹಾಗಾಗಿ ಸಮೀರ್ ಪತ್ತೆಯಾದ ನಂತರ ಹತ್ಯೆ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಕ್ಕೆ ಮಾರಕಾಸ್ತ್ರಗಳಿಂದ ಇರಿದಿದ್ದು, ಹಳೆ ವೈಷಮ್ಯವೇ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.