ಜಿಲ್ಲಾ ಸುದ್ದಿ

ಹನಿಯಾ ಹೊಳೆಯಾ ಮಳೆ

ನಗರದಲ್ಲಿ ಶುಕ್ರವಾರ ಸಂಜೆಯಿಂದಲೇ ಸುರಿದ ಭಾರಿ ಮಳೆಗೆ ಜನ ತತ್ತರಿಸಿದರು. ಸಂಜೆಗೆ ಸಣ್ಣದಾಗಿ ಆರಂಭವಾಗಿ ಕ್ರಮೇಣ ಜೋರಾಗಿ ಸುರಿದಿದ್ದರಿಂದ...

ಹನಿಯಾ ಹೊಳೆಯಾ ಮಳೆ
ಶುಕ್ರವಾರ ರಾತ್ರಿ ಬೆಂಗಳೂರು ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದ ರಸ್ತೆಯಲ್ಲೆಲ್ಲಾ ನೀರು ತುಂಬಿಕೊಂಡಿತ್ತು.
Published On :

ಬೆಂಗಳೂರು: ನಗರದಲ್ಲಿ ಶುಕ್ರವಾರ ಸಂಜೆಯಿಂದಲೇ ಸುರಿದ ಭಾರಿ ಮಳೆಗೆ ಜನ  ತತ್ತರಿಸಿದರು. ಸಂಜೆಗೆ ಸಣ್ಣದಾಗಿ ಆರಂಭವಾಗಿ ಕ್ರಮೇಣ ಜೋರಾಗಿ ಸುರಿದಿದ್ದರಿಂದ  ಸವಾರರು ಪರದಾಡಿದರು.

ಒಂದು ವಾರದಿಂದ ನಗರದಲ್ಲಿ ಮೋಡಕವಿದ ವಾತಾವರಣವಿತ್ತು, ಜತೆಗೆ ಜಿಟಿ ಮಳೆ ಆಗುತ್ತಿತ್ತು.  ಆದರೆ ಶುಕ್ರವಾರ ಬೆಳಿಗ್ಗೆ ಮಾತ್ರ ಕೆಲವು ದಿನಗಳ ಬಳಿಕ ಬಿಸಿಲಿನ ವಾತಾವರಣವಿತ್ತು. ಆದರೆ,  ಬೆಳಗ್ಗೆ ಇದ್ದಕ್ಕಿದ್ದಂತೆ ಮಳೆ ಸುರಿಯಿತು. ಭಾರೀ ಮಳೆ ಸುರಿದ ಪರಿಣಾಮ ಮೆಜೆಸ್ಟಿಕ್  ಸುತ್ತಮುತ್ತ, ಕೆ.ಆರ್.ರಸ್ತೆ, ಕೆ.ಜಿ.ರಸ್ತೆ, ಜೆ.ಸಿ.ರಸ್ತೆ, ಪುಲಿಕೇಶಿ ನಗರ, ವಾಟಾಳ್ ನಾಗರಾಜ್ ರಸ್ತೆ, ಗೂಡ್‍ಶೆಡ್  ರಸ್ತೆ, ಕಾಟನ್ ಪೇಟೆ ರಸ್ತೆ, ಕೆಂಪೇಗೌಡ ಏರ್‍ಪೋರ್ಟ್ ರಸ್ತೆ ಸೇರಿದಂತೆ ಬಹುತೇಕ ಪ್ರಮುಖ  ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದ ಏರ್‍ಪೋರ್ಟ್ ನಿಂದ ಮನೆಗೆ ಹೋಗುತ್ತಿದ್ದ  ಹಾಗೂ ಮನೆಯಿಂದ ಏರ್ ಪೋರ್ಟ್ ಗೆ  ಹೋಗುತ್ತಿದ್ದ ನೂರಾರು ಪ್ರಯಾಣಿಕರು ಪರದಾಡಿದರು.  ಮತ್ತೊಂದೆಡೆ ನಗರದ ರಸ್ತೆಗಳೆಲ್ಲ ಗುಂಡಿಮಯವಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ  ಮತ್ತಷ್ಟು ಕಿರಿಕಿರಿ ಉಂಟಾಗಿತ್ತು. ರಾತ್ರಿಯಾದರೂ ಸಂಚಾರ ಪೊಲೀಸರು ವಾಹನ ದಟ್ಟಣೆ  ಯಂತ್ರಿಸಲು ಹರಸಾಹಸಪಡುತ್ತಿದ್ದುದು ಸಾಮಾನ್ಯವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.