ಜಿಲ್ಲಾ ಸುದ್ದಿ

ಪ್ರತ್ಯೇಕ ಘಟನೆ; ಪ್ರಾಣಿ ದಾಳಿಗೆ ಇಬ್ಬರು ಬಲಿ

: ಪ್ರತ್ಯೇಕ ಕಡೆ ಬುಧವಾರ ಕರಡಿ ಹಾಗೂ ಚಿರತೆ ದಾಳಿಗೆ ಇಬ್ಬರು ಮೃತಪಟ್ಟಿದ್ದರೆ, ಕಾಡಾನೆ ದಾಳಿಗೆ ಕಾರ್ಮಿಕರೊಬ್ಬರಿಗೆ ಗಾಯವಾಗಿದೆ. ಇನ್ನು ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ...

ಪ್ರತ್ಯೇಕ ಘಟನೆ; ಪ್ರಾಣಿ ದಾಳಿಗೆ ಇಬ್ಬರು ಬಲಿ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಪ್ರತ್ಯೇಕ ಕಡೆ ಬುಧವಾರ ಕರಡಿ ಹಾಗೂ ಚಿರತೆ ದಾಳಿಗೆ ಇಬ್ಬರು ಮೃತಪಟ್ಟಿದ್ದರೆ, ಕಾಡಾನೆ ದಾಳಿಗೆ ಕಾರ್ಮಿಕರೊಬ್ಬರಿಗೆ ಗಾಯವಾಗಿದೆ. ಇನ್ನು ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ.

ಕರಡಿ ದಾಳಿ: ಹೊಸದುರ್ಗ ತಾಲೂಕಿನ ತಣಿಗೆಕಲ್ಲು ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಧರಣೇಶಪ್ಪ ಎಂಬುವರ ಮೇಲೆ ಮೂರು ಕರಡಿಗಳು ದಾಳಿ ನಡೆಸಿ ಕೊಂದು ಹಾಕಿವೆ. ಗ್ರಾಮಸ್ಥರು ಓಡಿಸಲು ಮುಂದಾದರೂ ಒಂದು ಕರಡಿ ಶವದ ಮುಂದೆಯೇ ಇತ್ತು. ಕೊನೆಗೆ ಗ್ರಾಮಸ್ಥರು ಬಡಿದುಕೊಂದಿದ್ದಾರೆ.

ಕೊಂದ ಚಿರತೆ: ಸಂಡೂರು ತಾಲೂಕಿನ ಸಿದ್ದಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಆಡು ಮೇಯಿಸುತ್ತಿದ್ದ ಕರಡಿ ಭರಮಲಿಂಗಪ್ಪ (70) ಎಂಬುವರ ಮೇಲೆ ಚಿರತೆ ದಾಳಿ ನಡೆಸಿ ಕೊಂದಿದೆ. ಆಡು ಮೇಯಿಸುತ್ತಾ ಊಟಕ್ಕೆ ಕುಳಿತಿದ್ದಾಗ ದಾಳಿ ನಡೆಸಿದೆ. ಸಕಲೇಶಪುರ ತಾಲೂಕಿನ ದಬ್ಬಳ್ಳಿಯಲ್ಲಿ ಕುಮಾರ್ (42) ಎಂಬುವರ ಮೇಲೆ ಕಾಡಾನೆ ದಾಳಿ ನಡೆಸಿ ಗಾಯಗೊಳಿಸಿದೆ. ಅವರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಡಗು ಜಿಲ್ಲೆಯ ಸಿದ್ದಾಪುರದ ಚೆಟ್ಟಳ್ಳಿಯಲ್ಲಿ ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.