ಮೇಲೆ ಮಳೆ ಹನಿ, ಒಳಗೆ ನಗೆ ಹನಿ
ಹೊರಗೆ ಚುಮು ಚುಮು ಚಳಿ, ತುಂತುರು ಮಳೆ, ಮೋಡಕವಿದ ವಾತಾವರಣ. ಆದರೆ, ಆಡಿಟೋರಿಯಂ ಒಳಗೆ ಪ್ರೇಕ್ಷಕರ ನಗುವಿನ ಅಲೆ. ದೈನಂದಿನ ಜಂಜಾಟಗಳಿಂದ ಮುಕ್ತಿ ಹೊಂದಿದ ಭಾವ ಪ್ರೇಕ್ಷಕರ ಮೊಗದಲ್ಲಿ ಕಾಣುತಿತ್ತು. ವೇದಿಕೆಯಲ್ಲಿ ಸಿಡಿಯುತ್ತಿದ್ದ ಪ್ರತಿಯೊಂದು...

ಬೆಂಗಳೂರು: ಹೊರಗೆ ಚುಮು ಚುಮು ಚಳಿ, ತುಂತುರು ಮಳೆ, ಮೋಡಕವಿದ ವಾತಾವರಣ. ಆದರೆ, ಆಡಿಟೋರಿಯಂ ಒಳಗೆ ಪ್ರೇಕ್ಷಕರ ನಗುವಿನ ಅಲೆ. ದೈನಂದಿನ ಜಂಜಾಟಗಳಿಂದ ಮುಕ್ತಿ ಹೊಂದಿದ ಭಾವ ಪ್ರೇಕ್ಷಕರ ಮೊಗದಲ್ಲಿ ಕಾಣುತಿತ್ತು.
ವೇದಿಕೆಯಲ್ಲಿ ಸಿಡಿಯುತ್ತಿದ್ದ ಪ್ರತಿಯೊಂದು ಹಾಸ್ಯ ಚಟಾಕಿಗೂ ನಗು, ಕರತಾಡನದಿಂದಲೇ ಪ್ರತಿಕ್ರಿಯಿಸುತ್ತಿದ್ದರು. ಅಂತರಂಗ ಸಂಸ್ಥೆ ಜೆ.ಪಿ.ನಗರದ ಆರ್.ವಿ.ಡೆಂಟಲ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ `ನಗುವಿಗೇಕೆ ರೇಷನ್?' ಹಾಸ್ಯಮೇಳದಲ್ಲಿ ಪ್ರೇಕ್ಷಕರ ನಗೆ ಬುಗ್ಗೆ ಉಕ್ಕಿ ಹರಿಯಿತು.
ಎಸ್.ಷಡಕ್ಷರಿ, ಎಂಎಸ್. ನರಸಿಂಹಮೂರ್ತಿ, ಪ್ರೊ.ಕೃಷ್ಣೇಗೌಡ, ವೈ.ವಿ.ಗುಂಡೂರಾವ್, ಸಂಧ್ಯಾ ಶೆಣೈ ಹಾಗೂ ಅಚ್ಯುತರಾವ್ ಪದಕಿ ಅವರು ತಮ್ಮ ನವಿರಾದ ಹಾಸ್ಯಗಳ ಮೂಲಕ ಸಭಾಂಗಣದ ದೊಡ್ಡ ಪ್ರೇಕ್ಷಕ ಸಮೂಹವನ್ನು ನಗುವಿನ ಲೋಕಕ್ಕೆ ಕರೆದೊಯ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


