ಅಮಾಯಕರ ಬಂಧನವಿಲ್ಲ: ಪರಮೇಶ್ವರ್
ಟಿಪ್ಪು ಜಯಂತಿ ಸಂದರ್ಭ ನಗರದಲ್ಲಿ ನಡೆದ ಗಲಭೆ ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲು ಈಗಾಗಲೇ ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರಿಗೆ ಸರ್ಕಾರ ಆದೇಶ..

ಬೆಂಗಳೂರು: ಟಿಪ್ಪು ಜಯಂತಿ ಸಂದರ್ಭ ನಗರದಲ್ಲಿ ನಡೆದ ಗಲಭೆ ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲು ಈಗಾಗಲೇ ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರಿಗೆ ಸರ್ಕಾರ ಆದೇಶ ಮಾಡಿದ್ದು, ಶೀಘ್ರ ವರದಿ ನೀಡಲು ಸೂಚಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್ ಮಡಿಕೇರಿಯಲ್ಲಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸುವುದಿಲ್ಲ ಎಂದರು. ಬಂದ್ ಯಶಸ್ವಿಯಲ್ಲ, ಬಲವಂತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರಗಳು ಮಾಡಿರುವುದು ಯಶಸ್ವಿ ಬಂದ್ ಅಲ್ಲ. ಬಲಾತ್ಕಾರ ಮಾಡಿ ಭಯ ಹುಟ್ಟಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಮಂಗಳೂರಿನಲ್ಲಿ ತಿರುಗೇಟು ನೀಡಿದ್ದಾರೆ. ಬಂದ್‍ಗೆ ಕರೆ ಕೊಡುವ ಪಕ್ಷ, ಸಂಘಟನೆಗಳೇ ಬಂದ್‍ನಿಂದಾಗುವ ಎಲ್ಲ ಕಷ್ಟ, ನಷ್ಟಗಳನ್ನು ಭರಿಸಿಕೊಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಮುಖ್ಯಮಂತ್ರಿ, ಗೃಹ ಇಲಾಖೆ , ಕಾನೂನು ಸಚಿವರು ಏನು ಮಾಡ್ತಿದ್ದಾರೆ? ಬಂದ್ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲವೇ? ಎಂದು ಅವರು ಪ್ರಶ್ನಿಸಿದರು. ಮತೀಯ ಸಂಘಟನೆ ನಿಷೇಧಿಸಿ ಮಡಿಕೇರಿ ಪ್ರಕರಣದಲ್ಲಿ ಈಗಾಗಲೇ ಅಮಾಯಕರ ಮೇಲೆ ಮೊಕದ್ದಮೆ ದಾಖಲಿಸುತ್ತಿರುವ ಕುರಿತು ಆರೋಪಗಳು ಕೇಳಿಬಂದಿವೆ. ಜಿಲ್ಲೆಯಲ್ಲಿ ಕೆಎಫ್ಡಿ, ಎಸ್‍ಡಿಪಿಐ, ಪಿಎಫ್ಐ, ಟಿಪ್ಪು ಅಭಿಮಾನಿಗಳ ಸಂಘದ ಹೆಸರಿನಡಿ ಕೆಲವು ಯುವಕರು ಮತೀಯ ಗಲಭೆಯನ್ನು ಸೃಷ್ಟಿಸುತ್ತಿದ್ದು, ತಕ್ಷಣವೇ ಇವರನ್ನು ಬಂಧಿಸಬೇಕೆಂದು ವಿಧಾನಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೋಮವಾರಪೇಟೆಯಲ್ಲಿ ಆಗ್ರಹಿಸಿದರು.
ಅವರು ಗಲಭೆಯಲ್ಲಿ ಮೃತಪಟ್ಟ ದೇವಪ್ಪಂಡ ಕುಟ್ಟಪ್ಪ ಅವರ ಕುಟುಂಬಕ್ಕೆ ರು.1 ಲಕ್ಷ ಚೆಕ್ ನೀಡಿ ಮಾತನಾಡಿದರು. ಮುತಾಲಿಕ್ ಬಿಡುಗಡೆ ಮಾಡಿ ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಅವರನ್ನು ಬಿಡುಗಡೆ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಮಹೇಶ್ ಕೊಪ್ಪದ ಮಂಗಳೂರಿನಲ್ಲಿ ಎಚ್ಚರಿಕೆ ನೀಡಿದ್ದಾರೆ. ಮುಂದಿನ ವರ್ಷಗಳಲ್ಲಿ ಟಿಪ್ಪು ಜಯಂತಿಗೆ ಸೇನೆ ಅವಕಾಶ ನೀಡಲ್ಲ ಎಂದು ಹೇಳಿದ್ದಾರೆ.
ಸಾಹಿತಿ ದೇವನೂರು ಮಹಾದೇವ ಪ್ರಶಸ್ತಿ ವಾಪಸ್ ಮಾಡಿದ್ದಾರೆ. ಅವರಿಗೆ ಸೆಲ್ಯೂಟ್ ಹೊಡಿತೇನೆ. ಅದು ಜಾಗೃತಿ, ಅದೇ ಪ್ರಜ್ಞೆ. ಕತ್ತಲನ್ನು ಹೋಗಲಾಡಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಅವರಿಗೆ ಎಷ್ಟು ನೋವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಂಡು ಸರಿಯಾದ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಧರ್ಮ.
-ಜನಾರ್ದನ ಪೂಜಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


