ಗರುಡಾಚಾರ್ ಪಾಳ್ಯ ರಸ್ತೆ ದುರವಸ್ಥೆ
ಗರುಡಾಚಾರ್ ಪಾಳ್ಯದಿಂದ ಮಾರತ್‍ಹಳ್ಳಿ ಮತ್ತು ಕುಂದಲಹಳ್ಳಿ ಕಡೆ ತೆರಳುವ ಮುಖ್ಯ ರಸ್ತೆಯ ಹದಗೆಟ್ಟ ಸ್ಥಿತಿ ಸ್ಥಳೀಯ ಜನರಿಗೆ ಸಂಕಷ್ಟ ತಂದೊಡ್ಡಿದೆ...

ಕೆ.ಆರ್.ಪುರ: ಗರುಡಾಚಾರ್ ಪಾಳ್ಯದಿಂದ ಮಾರತ್‍ಹಳ್ಳಿ ಮತ್ತು ಕುಂದಲಹಳ್ಳಿ ಕಡೆ ತೆರಳುವ ಮುಖ್ಯ ರಸ್ತೆಯ ಹದಗೆಟ್ಟ ಸ್ಥಿತಿ ಸ್ಥಳೀಯ ಜನರಿಗೆ ಸಂಕಷ್ಟ ತಂದೊಡ್ಡಿದೆ.
ಇಲ್ಲಿನ ಪಾಲಿಕೆ ಸದಸ್ಯ ನಿತಿನ್ ಪುರುಷೋತ್ತಮ್ ಅವರ ಮನೆಯ ಮುಂದೆ ಹಾದುಹೋಗುವ ರಸ್ತೆ ಇದಾಗಿದ್ದು, ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಮಳೆ ಬಂದಾಗ ಕೆಸರು ತುಂಬಿ
ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇದರಿಂದ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗಿದೆ. ರಸ್ತೆಯ ಬಳಿ ಸರ್ಕಾರಿ ಶಾಲೆಯಿದ್ದು, ನಿತ್ಯ ಮಕ್ಕಳು ಇದೇ ದಾರಿಯಲ್ಲಿ ಬರಬೇಕಾಗಿದೆ.
ಹರಿದುಬರುವ ಕೆಸರು ಶಾಲೆ ಮುಂದೆ ನಿಲ್ಲುವುದರಿಂದ ಶಿಕ್ಷಕರ ಪಾಠಪ್ರವಚನಗಳಿಗೂ ತೊಂದರೆಯಾಗಿದೆ. ಸ್ಥಳೀಯ ಬ್ರಿಗೇಡ್ ಅಪಾರ್ಟ್‍ಮೆಂಟ್ ಸೇರಿದಂತೆ ಕೆಲವು ಖಾಸಗಿ ಬಹುಮಹಡಿ ಕಟ್ಟಡಗಳು ಅವೈಜ್ಞಾನಿಕವಾಗಿ ಒಳಚರಂಡಿ ಸಂಪರ್ಕ ಕಲ್ಪಿಸಿಕೊಂಡಿವೆ. ಹೀಗಾಗಿ ಪ್ರತಿ ಬಾರಿ ಮಳೆಯಾದಾಗ ಸಮಸ್ಯೆಯಾಗುತ್ತದೆ ಎಂಬುದು ಸ್ಥಳೀಯರ ಆರೋಪ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


