ಮೇಲ್ಸೇತುವೆಗೆ ಬಸ್ ಡಿಕ್ಕಿ
ಯಲಹಂಕ ಸಮೀಪದ ಅಳ್ಳಾಳಸಂದ್ರ ಜಂಕ್ಷನ್ ಬಳಿ ಕಾರನ್ನು ಹಿಂದಿಕ್ಕುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಏರ್ ಪೋರ್ಟ್ ಮೇಲ್ಸೆತುವೆ ಪಿಲ್ಲರ್‍ಗೆ ಡಿಕ್ಕಿ ಹೊಡೆದಿದ್ದು 15ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿವೆ...
ಬೆಂಗಳೂರು: ಯಲಹಂಕ ಸಮೀಪದ ಅಳ್ಳಾಳಸಂದ್ರ ಜಂಕ್ಷನ್ ಬಳಿ ಕಾರನ್ನು ಹಿಂದಿಕ್ಕುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಏರ್ ಪೋರ್ಟ್ ಮೇಲ್ಸೆತುವೆ ಪಿಲ್ಲರ್‍ಗೆ ಡಿಕ್ಕಿ ಹೊಡೆದಿದ್ದು 15ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿವೆ.
ಇದಕ್ಕೂ ಮೊದಲು ಬಸ್ ಕಾರಿಗೂ ಡಿಕ್ಕಿ ಹೊಡೆದಿದೆ. ಅದರಲ್ಲಿದ್ದ ನಾಲ್ವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಬಸ್‍ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೆ.ಆರ್ ಮಾರುಕಟ್ಟೆಯಿಂದ ಖಾಸಗಿ ಬಸ್ ದೇವಹನಳ್ಳಿ ಕಡೆಗೆ ತೆರಳುತ್ತಿತ್ತು.
ಭಾನುವಾರ ರಸ್ತೆ ಖಾಲಿ ಇದ್ದ ಕಾರಣ ಚಾಲಕ ವೇಗವಾಗಿ ಬಸ್ ಚಲಾಯಿಸುತ್ತಿದ್ದ. ಅಳ್ಳಾಳಸಂದ್ರ ಜಂಕ್ಷನ್ನಿನಲ್ಲಿ ಕಾರೊಂದು `ಯು' ತಿರುವು ತೆಗೆದುಕೊಳ್ಳುತ್ತಿತ್ತು. ಆದರೆ, ನೇರವಾಗಿ ಹೋಗಬೇಕಿದ್ದ ಬಸ್ ಚಾಲಕ ಕಾರನ್ನು ರಸ್ತೆಯ ಬಲ ಭಾಗದಿಂದ ಹಿಂದಿಕ್ಕಲು ಯತ್ನಿಸಿದ್ದಾನೆ. ಈ ವೇಳೆ ಕಾರಿಗೆ ಡಿಕ್ಕಿ ಹೊಡೆದ ಬಸ್ ಮುಂದಕ್ಕೆ ಚಲಿಸಿ ಮೇಲ್ಸೆತುವೆ ಪಿಲ್ಲರ್‍ಗೆ ಡಿಕ್ಕಿ ಹೊಡೆದಿದೆ. ಘಟನೆ ಹಿನ್ನೆಲೆಯಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೊದೊಯ್ಡು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

