ಮೆಟ್ರೋ ಸುರಂಗ: 'ಮಾರ್ಗರಿಟಾ' ಮಾರ್ಗ ಪರಿಪೂರ್ಣ
ನಗರದ ಮೆಜಸ್ಟಿಕ್ ನಿಂದ ಸಂಪಿಗೆ ರಸ್ತೆವರೆಗಿನ ನಮ್ಮ ಮೆಟ್ರೋ ಸುರಂಗ ಕೊರೆಯುವ ಕಾರ್ಯವನ್ನು ಮಾರ್ಗರಿಟಾ(ಸುರಂಗ ಕೊರೆಯುವ ಯಂತ್ರ-ಟಿಬಿಎಂ) ಪೂರ್ಣಗೊಳಿಸಿತು.

ಬೆಂಗಳೂರು: ನಗರದ ಮೆಜಸ್ಟಿಕ್ ನಿಂದ ಸಂಪಿಗೆ ರಸ್ತೆವರೆಗಿನ ನಮ್ಮ ಮೆಟ್ರೋ ಸುರಂಗ ಕೊರೆಯುವ ಕಾರ್ಯವನ್ನು ಮಾರ್ಗರಿಟಾ(ಸುರಂಗ ಕೊರೆಯುವ ಯಂತ್ರ-ಟಿಬಿಎಂ) ಪೂರ್ಣಗೊಳಿಸಿತು. ಈ ಮೂಲಕ ಉತ್ತರ ಕಾರಿಡಾರ್ ಹಾಗೂ ಅತಿ ಉದ್ದ ಸುರಂಗ ಕಾರಿಡಾರ್ ನ ಹಾಗೂ ಅತಿ ಉದ್ದದ ಸುರಂಗ ಮಾರ್ಗ ಕೊರೆಯುವ ಕೆಲಸವನ್ನು ಮಾರ್ಗರಿಟಾ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಸಂಜೆ ಸುಮಾರು 4 ಗಂಟೆಯಿಂದಲೇ ಮೆಟ್ರೋ ಸಿಬ್ಬಂದಿ ಜಕ್ಕರಾಯನ ಕೆರೆ ಬಳಿ(ಟಿಬಿಎಂ ಹೊರಬರುವ ಸ್ಥಳ) ಕಾತುರರಾಗಿ ಕಾಯುತ್ತಿದ್ದರು. ಸುಮಾರು ಮುಕ್ಕಾಲು ಗಂಟೆ ನಂತರ `ಮಾರ್ಗರಿಟಾ' ಯಂತ್ರ ಭೂಮಿ ಸೀಳಿ ಹೊರಬಂತು. ಈ ವೇಳೆ ಮೆಟ್ರೊ ಅಧಿಕಾರಿಗಳು ಮತ್ತು ಸಿಬ್ಬಂದಿ ಹರ್ಷೋದ್ಗಾರ ತೆಗೆದರು. ಮೆಜೆಸ್ಟಿಕ್‍ನಿಂದ ಒಟ್ಟು ಸಂಪಿಗೆ ರಸ್ತೆ ವರೆಗಿನ ಈ ಸುರಂಗ ಮಾರ್ಗ 960 ಮೀಟರ್ ಆಗಿದ್ದು, ಇದನ್ನು ಪೂರ್ಣಗೊಳಿಸಲು `ಮಾರ್ಗರಿಟಾ' ತೆಗೆದುಕೊಂಡ ಕಾಲವಕಾಶ ಬರೋಬ್ಬರಿ ಒಂದು ವರ್ಷ ಒಂದು ತಿಂಗಳು. ಇನ್ನು ಹಳಿ ಹಾಕಬೇಕಷ್ಟೆ...: ಸುರಂಗ ಕೊರೆಯುವ ಕಾರ್ಯ ಪೂರ್ಣವಾಗುವುದರೊಂದಿಗೆ, ಮೆಜೆಸ್ಟಿಕ್‍ನಿಂದ ಪೀಣ್ಯಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಕ್ಕೆ ಬಹುತೇಕ ಯಶಸ್ಸು ಸಿಕ್ಕಿದೆ. ಇನ್ನು ಹಳಿ ಹಾಕುವ ಕಾರ್ಯ ಮಾತ್ರ ಬಾಕಿ ಉಳಿದಿದೆ. ಈ ಕಾರ್ಯ ಚುರುಕುಗೊಳಿಸಲಾ-ಗುವುದು ಎಂದು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ತಿಳಿಸಿದ್ದಾರೆ. `ಮಾರ್ಗರಿಟಾ' ಯಶಸ್ವಿಯಾಗಿ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸುರಂಗ ಮಾರ್ಗ ಸುಮಾರು 1 ಕಿ.ಮೀ. ಇದೆ. ಇದು ಅತಿ ಉದ್ದವಾದ ಮಾರ್ಗ. ಈ ಮಾರ್ಗ ಪೂರ್ಣಗೊಂಡಿರುವುದರಿಂದ ಪೀಣ್ಯಕ್ಕೆ ಸಂಪರ್ಕ ಕಲ್ಪಿಸುವುದು ಸುಲಭವಾಗಿದೆ.
ಇದಕ್ಕೆ ಎದುರಾಗಿ ಚಿಕ್ಕಪೇಟೆಯಿಂದ ಮೆಜೆಸ್ಟಿಕ್‍ಗೆ ಬರುತ್ತಿರುವ ಕಾವೇರಿ ಟಿಬಿಎಂ ಯಂತ್ರ ಮೆಜೆಸ್ಟಿಕ್‍ಗೆ ಇನ್ನೂ 200 ಮೀ. ದೂರದಲ್ಲಿದೆ. ಅದು ಮುಗಿದರೆ 4 ಕಿ.ಮೀ. (ಚಿಕ್ಕಪೇಟೆ-ಸಂಪಿಗೆ ರಸ್ತೆ) ಮುಕ್ತಾಯವಾದಂತಾಗುತ್ತದೆ. ಆದರೆ, ವಿವಿಧ ಕಾರಣಗಳಿಂದ ಕಾವೇರಿ ಕೊರೆತ ಕುಂಠಿತವಾಗಿದೆ. ಆದರೂ ಹಳಿ ಹಾಕಿ, ಎಲ್ಲಾ ಕೆಲಸ ಶೀಘ್ರದಲ್ಲಿ ಮುಗಿಸಿದರೆ ಪೀಣ್ಯಕ್ಕೆ ಮೆಜೆಸ್ಟಿಕ್‍ನಿಂದ ಸಂಪರ್ಕ ಕಲ್ಪಿಸುವುದು ಸುಲಭವಾಗುತ್ತದೆ. ಮಾರ್ಚ್ ವೇಳೆಗೆ ರೈಲು ಸಂಚಾರ ಆರಂಭಿಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


