ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳೆಯರ ಮೇಲೆ ಹಲ್ಲೆ
ಕೂದಲು ವ್ಯಾಪಾರಕ್ಕೆ ಹೋಗಿದ್ದ ಇಬ್ಬರು ಮಹಿಳೆಯರನ್ನು ಕಳ್ಳರೆಂದು ಭಾವಿಸಿ, ಠಾಣೆಗೆ ಕರೆ-ದೊಯ್ದು ಅವರ ಮೇಲೆ ಮಹಿಳಾ ಪೇದೆ ಸೇರಿ ಮೂವರು...

ದಾವಣಗೆರೆ: ಕೂದಲು ವ್ಯಾಪಾರಕ್ಕೆ ಹೋಗಿದ್ದ ಇಬ್ಬರು ಮಹಿಳೆಯರನ್ನು ಕಳ್ಳರೆಂದು ಭಾವಿಸಿ, ಠಾಣೆಗೆ ಕರೆ-ದೊಯ್ದು ಅವರ ಮೇಲೆ ಮಹಿಳಾ ಪೇದೆ ಸೇರಿ ಮೂವರು ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಕೊಂಡಜ್ಜಿ ರಸ್ತೆಯ ಹೊಸ ಕ್ಯಾಂಪ್ ನಿವಾಸಿಗಳಾದ ಇಂದಿರಾ, ಉಮಾ ಹಲ್ಲೆಗೊಳಗಾದ ಮಹಿಳೆಯರು. ತಾಲೂಕಿನ ಅಣ್ಣಾಪುರ ಕ್ರಾಸ್ ಬಳಿ ಕೂದಲು ವ್ಯಾಪಾರ ಮಾಡುತ್ತಾ, ಬಾಚಣಿಕೆ, ಹೇರ್ ಪಿನ್ಗಳನ್ನು ಮಾರಾಟ ಮಾಡ ಲೆಂದು ತೆರಳಿದ್ದ ಇವರು,ಮುಂದಿನ ಊರಿಗೆ ಹೋಗುವ ಸಿದ್ಧತೆಯಲ್ಲಿದ್ದರು. ಇವರನ್ನು ಕಂಡ ಕೆಲವರು ಅನುಮಾನಗೊಂಡು ಮಾಯಕೊಂಡ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಸೂಕ್ತವಾಗಿ ವಿಚಾರಣೆ ನಡೆಸದ ಪೊಲೀಸರು ಇಬ್ಬರನ್ನೂ ಕಳ್ಳತನಕ್ಕೆ ಹೊಂಚು ಹಾಕಿದ್ದಾರೆ ತೀರ್ಮಾನಿಸಿ ಠಾಣೆಗೆ ಕರೆದೊಯ್ದರು.
ಆಮೇಲೆ ಏನೇನಾಯ್ತು?: ಠಾಣೆಯಲ್ಲಿ ತಮ್ಮಿಬ್ಬರ ಮೇಲೂ ಮಹಿಳಾ ಪೇದೆಯೊಬ್ಬರು ಲಾಠಿಯಿಂದ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.
ಇಬ್ಬರು ಪುರುಷ ಪೇದೆಗಳೂ ಬೂಟುಗಾಲು, ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ನಂತರ ಠಾಣೆ ಆವರಣ ಹಾಗೂ ಪೊಲೀಸ್ ವಸತಿ ಗೃಹಗಳ ಸುತ್ತಮುತ್ತ ಕಸ ಗುಡಿಸುವಂತೆ ಆದೇಶಿಸಿದ್ದಾರೆ. ಠಾಣೆ, ವಸತಿಗೃಹದ ಶೌಚಾಲಯಗಳನ್ನೂ ಸ್ವಚ್ಛ ಮಾಡಿಸಿ ದರ್ಪ ಮೆರೆದಿದ್ದಾರೆ ಎಂದು ನೊಂದ ಮಹಿಳೆ ಇಂದಿರಾ ದೂರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


