ಕ್ರಿಕೆಟ್ ಬೆಟ್ಟಿಂಗ್: 6 ಜನರ ಬಂಧನ
ಐಪಿಎಲ್ ಕ್ರಿಕೆಟ್ ಟೂರ್ನಿ ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ನಗರದಲ್ಲಿ ಬೆಟ್ಟಿಂಗ್ ಭರಾಟೆ ತೀವ್ರವಾಗಿದ್ದು, ನಗರದ ನಾಲ್ಕು ಕಡೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ 6 ಜನರನ್ನು ಬಂಧಿಸಿ ರು.4.93 ಲಕ್ಷ ನಗದು, 13 ಮೊಬೈಲ್ ಫೋನ್, 4 ಟಿವಿ, 1 ಲ್ಯಾಪ್‍ಟ್ಯಾಪ್ ವಶಪಡಿಸಿಕೊಂಡಿದ್ದಾರೆ...

ಬೆಂಗಳೂರು: ಐಪಿಎಲ್ ಕ್ರಿಕೆಟ್ ಟೂರ್ನಿ ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ನಗರದಲ್ಲಿ ಬೆಟ್ಟಿಂಗ್ ಭರಾಟೆ ತೀವ್ರವಾಗಿದ್ದು, ನಗರದ ನಾಲ್ಕು ಕಡೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ 6 ಜನರನ್ನು ಬಂಧಿಸಿ ರು.4.93 ಲಕ್ಷ ನಗದು, 13 ಮೊಬೈಲ್ ಫೋನ್, 4 ಟಿವಿ, 1 ಲ್ಯಾಪ್‍ಟ್ಯಾಪ್ ವಶಪಡಿಸಿಕೊಂಡಿದ್ದಾರೆ.
ಬುಧವಾರ ಆರ್‍ಸಿಬಿ ಹಾಗೂ ರಾಜಸ್ಥಾನ ನಡುವಿನ ಪಂದ್ಯಕ್ಕೆ ಬೆಟ್ಟಿಂಗ್ ನಡೆಸುತ್ತಿದ್ದ ರಾಜರಾಜೇಶ್ವರಿ ನಗರದ ಐಡಿಯಲ್ ಹೋಂ ಸೊಸೈಟಿಯಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು ರಾಕೇಶ್(39)ನನ್ನು ಬಂಧಿಸಿ ರು.3.15 ಲಕ್ಷ ನಗದು, 1 ಟಿವಿ ಹಾಗೂ 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಜಕ್ಕೂರು ಮುಖ್ಯ ರಸ್ತೆಯ ಅಪಾರ್ಟ್ ಮೆಂಟ್‍ನ ಫ್ಲ್ಯಾಟ್ ಮೇಲೆ ದಾಳಿ ನಡೆಸಿ ವಿಜಯ್(40) ಬಂಧಿಸಿದ್ದಾರೆ. ಈತನಿಂದ ರು.1.16 ಲಕ್ಷ ನಗದು, 1 ಲ್ಯಾಪ್ ಟಾಪ್, 1 ಟಿವಿ, 2 ಮೊಬೈಲ್ ಫೋನ್, ಬೆಟ್ಟಿಂಗ್ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ವೈಯ್ಯಾಲಿಕಾವಲ್: ಪ್ಯಾಲೆಸ್ ಗುಟ್ಟಹಳ್ಳಿಯಲ್ಲಿರುವ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿ ಆರ್.ಅಶೋಕ್ ಕುಮಾರ್(46)ನನ್ನು ಬಂಧಿಸಿ, ರು.45 ಸಾವಿರ ನಗದು, 1 ಟಿವಿ, 1 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಯಲಹಂಕ ಉಪನಗರ: ಅನಂತಪುರ ಎಸ್.ಎನ್ ಹಳ್ಳಿ ಅಪಾರ್ಟ್ ಮೆಂಟ್‍ನ ಫ್ಲ್ಯಾಟ್ ಮೇಲೆ ದಾಳಿ ನಡೆಸಿ ಮನೋಜ್(39), ನಂಜಪ್ಪ(36), ಬಾಲಕೃಷ್ಣ(45)ನನ್ನು ಬಂ„ಸಲಾಗಿದೆ. ಇವರಿಂದ ರು.17,700 ನಗದು, 1 ಟಿವಿ, 8 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಸಿಸಿಬಿ ದಾಳಿ ವೇಳೆ ವೇಶ್ಯಾವಾಟಿಕೆ ಪ್ರಕರಣವೂ ಬೆಳಕಿಗೆ ಬಂದಿದೆ. ಬ್ರಿಗೇಡ್ ಗಾರ್ಡನ್ ಲೇಡಿಸ್ ಸರ್ವಿಸ್ ಬಾರ್ ನಲ್ಲಿ ಕೆಲಸ ಮಾಡುವ ಯುವತಿ ಸಿಸಿಬಿ ಪೊಲೀಸರ ವಶಕ್ಕೆ ಸಿಕ್ಕಿದ್ದಾಳೆ.
ಬ್ರಿಗೇಡ್ ಗಾರ್ಡನ್ ಲೇಡಿಸ್ ಸರ್ವಿಸ್ ಬಾರ್ ಮಾಲೀಕ ಮನೋಹರ್, ಮ್ಯಾನೇಜರ್ ಕುಮಾರ್, ಮುಂಬೈನಿಂದ ಯುವತಿಯರನ್ನು ಕೆಲಸಕ್ಕೆ ಕರೆತರುವ ರಾಜು ಎಂಬುವರು ಯುವತಿಯನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ. ಆರೋಪಿ ಮನೋಜ್ ಜತೆ ಸಲುಗೆಯಿಂದ ಇರುವಂತೆ ಬಲವಂತ ಮಾಡುತ್ತಿದ್ದರು ಎನ್ನುವ ವಿಚಾರ ವಿಚಾರಣೆ ವೇಳೆ ಯುವತಿ ಹೇಳಿಕೆ ನೀಡಿದ್ದಾಳೆ.
ವೇಶ್ಯಾವಾಟಿಕೆಗೆ ಬಾರ್‍ನ ಮಹಿಳಾ ಉದ್ಯೋಗಿಗಳನ್ನು ದೂಡುತ್ತಿದ್ದ ಆರೋಪಿ ಬ್ರಿಗೇಡ್ ಗಾರ್ಡನ್ ಮಾಲೀಕ ಮನೋಹರ್ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆದಿದೆ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


