ಹೋಟೆಲ್ ಸಿಬ್ಬಂದಿ ಕತ್ತು ಕುಯ್ದು ಕೊಲೆ
ನಗರದ ಕಪಾಲಿ ಚಿತ್ರಮಂದಿರ ಬಳಿ ಇರುವ ಕೋಳಿ ಮನೆ ಹೋಟೆಲ್‍ನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾರ್ಮಿಕನೊಬ್ಬ ಸಹ ಕಾರ್ಮಿಕನನ್ನು ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾನೆ...

ಬೆಂಗಳೂರು: ನಗರದ ಕಪಾಲಿ ಚಿತ್ರಮಂದಿರ ಬಳಿ ಇರುವ ಕೋಳಿ ಮನೆ ಹೋಟೆಲ್‍ನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾರ್ಮಿಕನೊಬ್ಬ ಸಹ ಕಾರ್ಮಿಕನನ್ನು ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಕೆ.ಆರ್.ಪೇಟೆ ಮೂಲದ ನಂಜೇಗೌಡ(62) ಕೊಲೆಯಾದವರು. ಕೃತ್ಯ ಎಸಗಿದ ಆರೋಪಿ ರಮೇಶ್(25) ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀನಿವಾಸ್ ಎಂಬುವರ ಮಾಲೀಕತ್ವದ ಕೋಳಿ ಮನೆ ಹೋಟೆಲ್‍ಗೆ ಕೃಷ್ಣಪ್ಪ ಎಂಬುವರು ಕ್ಯಾಷಿಯರ್ ಆಗಿದ್ದರು. ನಂಜೇಗೌಡ ಹಾಗೂ ರವಿ ಎಂಬುವರು ಸಪ್ಲೈಯರ್ ಕಂ ಕ್ಲೀನರ್ ಆಗಿದ್ದರು. 4 ವರ್ಷದಿಂದ ಹೋಟೆಲ್‍ನಲ್ಲಿ ಕೆಲಸಕ್ಕಿದ್ದ ನಂಜೇಗೌಡ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಹೋಟೆಲ್‍ನಲ್ಲಿ ಕೆಲಸ ಮಾಡಿ, ಬಳಿಕ ಹೊಟೇಲ್ ಮುಂಭಾಗದಲ್ಲೇ ಬಜ್ಜಿ ಬೊಂಡ ಮಾಡಿ ಮಾರಾಟ ಮಾಡುತ್ತಿದ್ದ.
ರವಿ ಹಾಗೂ ನಂಜೇಗೌಡ ಇಬ್ಬರು ರಾತ್ರಿ ಹೋಟೆಲ್‍ನಲ್ಲಿ ತಂಗುತ್ತಿದ್ದರು. ಮೂರು ದಿನಗಳ ಹಿಂದಷ್ಟೇ ಆರೋಪಿ ರಮೇಶ್ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡಿದ್ದ. ಆತ ಕೂಡಾ ರಾತ್ರಿ ಅಲ್ಲೇ ಮಲಗುತ್ತಿದ್ದ. ಆದರೆ, ರಮೇಶ್ ಹಾಗೂ ನಂಜೇಗೌಡರ ನಡುವೆ ಮೂರು ದಿನಗಳಿಂದ ಸಣ್ಣ ಪುಟ್ಟ ವಿಚಾರಕ್ಕೆ ಪ್ರತಿನಿತ್ಯ ಜಗಳವಾಗುತ್ತಿತ್ತು. ಇದರಿಂದಾಗಿ ರಮೇಶ್ ಕುಪಿತಗೊಂಡಿದ್ದ.
ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ರವಿ ಶೌಚಾಲಯಕ್ಕೆ ತೆರಳಿದ್ದ. ಈ ವೇಳೆ ಎಚ್ಚರಗೊಂಡ ರಮೇಶ್, ಈರುಳ್ಳಿ ಕತ್ತರಿಸುವ ಚಾಕುವಿನಿಂದ ಮಲಗಿದ್ದ ನಂಜೇಗೌಡನ ಕತ್ತು ಕೊಯ್ದು ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ನಂಜೇಗೌಡರನ್ನು ಕಂಡ ರವಿ, ಕೂಗಿಕೊಂಡು ಹೊರ ಬಂದಿದ್ದು, ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಲೀಕರಿಗೆ ತಿಳಿಸಿದ್ದಾನೆ. ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಡಿಸಿಪಿ ಲಾಬೂರಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


