ಮುಲಾಮನ ಮೇಲೆ ಗೂಂಡಾ ಕಾಯ್ದೆ
ಕುಖ್ಯಾತ ರೌಡಿ ಲೋಕೇಶ ಅಲಿಯಾಸ್ ಮುಲಾಮನನ್ನು(48) ಗೂಂಡಾ ಕಾಯ್ದೆ ಅನ್ವಯ ಬಂಧಿಸಿರುವ ನಗರ ಪೊಲೀಸರು ನ್ಯಾಯಾಲಯದ ಮುಂದೆ...

ಬೆಂಗಳೂರು: ಕುಖ್ಯಾತ ರೌಡಿ ಲೋಕೇಶ ಅಲಿಯಾಸ್ ಮುಲಾಮನನ್ನು(48) ಗೂಂಡಾ ಕಾಯ್ದೆ ಅನ್ವಯ ಬಂಧಿಸಿರುವ ನಗರ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ರಾಜರಾಜೇಶ್ವರಿ ನಗರ ಬಿಇಎಂಎಲ್ ಬಡಾವಣೆ ನಿವಾಸಿಯಾಗಿರುವ ಮುಲಾಮ ವಿರುದ್ಧ ಕೊಲೆ, ಕೊಲೆ ಯತ್ನ, ಬೆದರಿಕೆ, ಶಸ್ತ್ರಾಸ್ತ್ರ ಕಾಯ್ದೆ, ದರೋಡೆ, ಸಾರ್ವಜನಿಕರ ಆಸ್ತಿ ಕಬಳಿಸುವ ಯತ್ನ, ದೊಂಬಿ ಹೀಗೆ ಒಟ್ಟು 19 ಗಂಭೀರ ಪ್ರಕರಣಗಳು ದಾಖಲಾಗಿವೆ. 18ನೇ ವಯಸ್ಸಿಗೆ ಅಪರಾಧ ಕೃತ್ಯಗಳನ್ನು ಆರಂಭಿಸಿದ್ದ ಮುಲಾಮನ ವಿರುದ್ಧ 1985ರಲ್ಲೇ ರಾಜಾಜಿನಗರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿದೆ.
ಅಲ್ಲದೇ ರಾಜಗೋಪಾಲನಗರ, ಕಾಮಾಕ್ಷಿ ಪಾಳ್ಯ ಮತ್ತು ರಾಜರಾಜೇಶ್ವರಿ ನಗರ ಠಾಣೆಯ ರೌಡಿಪಟ್ಟಿಯಲ್ಲೂ ಈತನ ಹೆಸರಿದೆ. 7ನೇ ತರಗತಿಗೆ ವ್ಯಾಸಂಗ ಅರ್ಧಕ್ಕೆ ನಿಲ್ಲಿಸಿ, ವೆಲ್ಡರ್
ಕೆಲಸ ಮಾಡಿಕೊಂಡಿದ್ದ ಮುಲಾಮ. ಆದರೆ, ತನ್ನದೇ ತಂಡ ಕಟ್ಟಿಕೊಂಡು ಬೆಂಗಳೂರಿನ ಅನೇಕ ಠಾಣಾ ವ್ಯಾಪ್ತಿಗಳಲ್ಲಿ ಕೊಲೆ, ಕೊಲೆ ಯತ್ನ, ದೊಂಬಿ, ಹೊಡೆದಾಟ, ಅಪಹರಣ, ಸಾರ್ವಜನಿಕರ ಆಸ್ತಿ ಕಬಳಿಸುವ ಪ್ರಯತ್ನ, ಅಕ್ರಮ ಶಸ್ತ್ರಾಸ್ತ್ರ ಹೊಂದಿರುವುದು ಸೇರಿದಂತೆ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕುಖ್ಯಾತ ರೌಡಿ ಬಲರಾ ಮನೊಂದಿಗೆ ಗುರುತಿಸಿಕೊಂಡಿದ್ದ ಮುಲಾಮ, ಬಲರಾಮನ ಮರಣದ ನಂತರ ತನ್ನ ಸ್ವಂತ ತಂಡವನ್ನು ರಚಿಸಿಕೊಂಡಿದ್ದ.
ವಿವಾದಿತ ಜಾಗವೇ ಟಾರ್ಗೆಟ್: ವೆಲ್ಡರ್ ಕೆಲಸ ಮಾಡಿಕೊಂಡಿದ್ದ ಮುಲಾಮ ನಗರದಲ್ಲಿ ರಿಯಲ್ ಎಸ್ಟೇಟ್ ಅವ್ಯವಹಾರಗಳಲ್ಲಿಯೂ ಭಾಗಿಯಾಗಿ ಅಪಾರ ಸಂಪತ್ತನ್ನು ಗಳಿಸಿದ್ದಾನೆ. ರಾಜರಾಜೇಶ್ವರಿ ನಗರದಲ್ಲಿ ಕೋಟ್ಯಂತರ ಬೆಲೆ ಬಾಳುವ ಬಹುಮಹಡಿ ಬಂಗಲೆಯಲ್ಲಿ ವಾಸಿಸುತ್ತಿದ್ದಾನೆ. ವಿವಾದಿತ ಸ್ಥಳಗಳನ್ನು ಕಬಳಿಸಿಕೊಂಡು ಅಕ್ರಮ ಆಸ್ತಿ ಗಳಿಸಿರುವ ಈತನ ವಿರುದ್ಧ ಜಾರಿ ನಿರ್ದೇಶನಾಲಯದಲ್ಲೂ ಪ್ರಕರಣವಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಏನಿವೆ ಪ್ರಕರಣಗಳು?:
3 ಕೊಲೆ, 3 ಕೊಲೆ ಯತ್ನ, 5 ದರೋಡೆ, 2 ಶಸ್ತ್ರಾಸ್ತ್ರ ಕಾಯ್ದೆ, 2 ಆಸ್ತಿ ಕಬಳಿಸುವ ಸಂಚು, 4 ಅಪಹರಣ ಮತ್ತು ಹಲ್ಲೆ ಸೇರಿದಂತೆ ಒಟ್ಟು 19 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 2 ಹಲ್ಲೆ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಒಂದು ಕೊಲೆ ಯತ್ನ, ಒಂದು ಆಸ್ತಿ ಕಬಳಿಸುವ ಸಂಚು ಸೇರಿದಂತೆ 4 ಪ್ರಕರಣಗಳು ತನಿಖೆಯಲ್ಲಿವೆ. ಉಳಿದ ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


