ನಾಯಿ ಕೊಲೆ ಮಾಡಿದ್ದ ಇಬ್ಬರ ಬಂಧನ, ಬಿಡುಗಡೆ
ಕೈ ಕಚ್ಚಿದ ಕೋಪಕ್ಕೆ ಸಾಕು ನಾಯಿಯನ್ನು ಕೊಂದ ಆರೋಪದಡಿ ಈಶಾನ್ಯ ಭಾರತದ ಇಬ್ಬರು ಯುವಕರನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ...

ಬೆಂಗಳೂರು: ಕೈ ಕಚ್ಚಿದ ಕೋಪಕ್ಕೆ ಸಾಕು ನಾಯಿಯನ್ನು ಕೊಂದ ಆರೋಪದಡಿ ಈಶಾನ್ಯ ಭಾರತದ ಇಬ್ಬರು ಯುವಕರನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ಪುರ ಸಮೀಪದ ಭಟ್ಟರಹಳ್ಳಿಯ ಸುಭಾಷ್ ನಗರದಲ್ಲಿ ವಾಸವಾಗಿದ್ದ ಮಣಿಪುರ ಮೂಲದ ವಿದ್ಯಾರ್ಥಿಗಳು 6 ತಿಂಗಳಿಂದ ನಾಯಿ ಸಾಕಿಕೊಂಡಿದ್ದರು. ಆದರೆ, ಇತ್ತೀಚೆಗೆ ಅದು ತಮ್ಮನ್ನು ಕಚ್ಚಿದೆ ಎಂದು ಕೊಂದು ಶವವನ್ನು ಸಮೀಪದ ಕೆರೆದಂಡೆಯೊಂದರಲ್ಲಿ ಬಿಸಾಡಿದ್ದರು. ಇದನ್ನು ಗಮನಿಸಿದನೆರೆಮನೆಯ ಯುವಕನೊಬ್ಬ ಪ್ರಾಣಿ ದಯಾ ಸಂಘ ಹಾಗೂಕೆ.ಆರ್.ಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ನಾಯಿ ಕೊಂದ ಆರೋಪದ ಮೇಲೆ ಯುವಕರ ವಿರುದ್ಧ ಐಪಿಸಿ ಕಲಂ 428 ಅನ್ವಯ ಪ್ರಕರಣ ದಾಖಲಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಕೆ.ಆರ್.ಪುರ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


