ವಿಮೆ, ಪಿಂಚಣಿಗೆ ನೋಂದಣಿ ಶುರು
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ವಿಮೆ ಮತ್ತು ಪಿಂಚಣಿ ಯೋಜನೆಗಳಿಗೆ ನೋಂದಣಿ ಕಾರ್ಯ ರಾಜ್ಯಾದ್ಯಂತ ಆರಂಭವಾಗಿದೆ.

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ವಿಮೆ ಮತ್ತು ಪಿಂಚಣಿ ಯೋಜನೆಗಳಿಗೆ ನೋಂದಣಿ ಕಾರ್ಯ ರಾಜ್ಯಾದ್ಯಂತ ಆರಂಭವಾಗಿದೆ.
ರಾಜ್ಯದಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳ 8500 ಶಾಖೆಗಳಲ್ಲಿ ಆಂದೋಲನ ರೀತಿಯಲ್ಲಿ ಪ್ರಕ್ರಿಯೆ ಆರಂಭವಾಗಿದೆ. ಬ್ಯಾಂಕ್ ಸಿಬ್ಬಂದಿ ಗ್ರಾಹಕರನ್ನು ಯೋಜನೆಗೆ ನೋಂದಾಯಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಯೋಜನೆಯ ಅಧಿಕೃತ ಉದ್ಘಾಟನೆ ಮೇ 9ರಂದು ಕೋಲ್ಕತಾದಲ್ಲಿ ನಡೆಯಲಿದ್ದು, ಅಂದೇ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು.
ಯೋಜನೆ ಅನುಷ್ಠಾನ ಪೂರ್ವತಯಾರಿ ಕುರಿತು ಮಾಹಿತಿ ನೀಡಿದ ರಾಜ್ಯ ಬ್ಯಾಂಕರ್ಸ್ ಗಳಳ ಸಮಿತಿಯ ಮುಖ್ಯ ವ್ಯವಸ್ಥಾಪಕ ಸುರೇಶ್, `ನೂತನವಾಗಿ ಜಾರಿಗೆ ಬರುತ್ತಿರುವ ಜೀವ ಅಪಘಾತ ವಿಮೆ ಹಾಗೂ ಪಿಂಚಣಿ ಯೋಜನೆಗೆ ನೋಂದಣಿ ಕಾರ್ಯ ಭರದಿಂದ ನಡೆಯುತ್ತಿದೆ. ಬ್ಯಾಂಕಿನ ಗ್ರಾಹಕರು ತಮ್ಮ ಶಾಖೆಗಳಿಗೆ ತೆರಳಿ ಯೋಜನೆಗೆ ನೊಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಈ ಯೋಜನೆಯ ಕುರಿತಾಗಿ ಅಧಿಕಾರಿಗಳ ಸಭೆ ನಡೆದಿದ್ದು, ಬ್ಯಾಂಕುಗಳು ಯೋಜನೆ ಅನುಷ್ಠಾನದಲ್ಲಿ ನಿರ್ವಹಿಸಬೇಕಾದ ಪಾತ್ರದ ಬಗ್ಗೆ ಮಾರ್ಗದರ್ಶನ ಮಾಡಲಾಗಿದೆ. ಜನಧನದಿಂದ ಇದೀಗ ಜನ ಸುರಕ್ಷಾ ಯೋಜನೆಗೆ ವಿಸ್ತರಣೆಗೊಳ್ಳುತ್ತಿದ್ದು, ಬ್ಯಾಂಕ್ ಉಳಿತಾಯ ಖಾತೆ ಹೊಂದಿದ ಅರ್ಹರು ಯೋಜನೆಯ ಲಾಭಪಡೆದುಕೊಳ್ಳಬೇಕು ಎಂದರು.
ಬ್ಯಾಂಕುಗಳ ಭರಾಟೆ: ಯೋಜನೆಗೆ ಖಾತೆದಾರರನ್ನು ನೊಂದಾಯಿಸಲು ಬ್ಯಾಂಕುಗಳು ಕಾರ್ಯೋನ್ಮುಖವಾಗಿವೆ. ಗ್ರಾಹಕರ ಮೊಬೈಲ್‍ಗಳಿಗೆ ಎಸ್‍ಎಂಎಸ್ ಕಳುಹಿಸುವುದು ಸೇರಿದಂತೆ ಜಾಹಿರಾತಿನ ಮೂಲಕ ಮಾಹಿತಿ ತಲುಪಿಸುವ ಕೆಲಸ ಮಾಡುತ್ತಿವೆ. ಹಾಗೆಯೇ ಬ್ಯಾಂಕಿನಲ್ಲಿ ಪ್ರತ್ಯೇಕ ಘಟಕ ಆರಂಭಿಸಿ ಗ್ರಾಹಕರಿಂದ ಅಗತ್ಯ ಮಾಹಿತಿ-ಸಹಿ ಪಡೆದುಕೊಂಡು ಯೋಜನೆಗೆ ಸೇರ್ಪಡೆ ಕಾರ್ಯ ಆರಂಙಿಸಿವೆ. ಪ್ರತಿ ಬ್ಯಾಂಕಿನ ಶಾಖೆಯಲ್ಲಿ ಈ ಯೋಜನೆಗಳಿಗೆ ಪ್ರತ್ಯೇಕ ಅರ್ಜಿ ದೊರೆಯುತ್ತದೆ. ಅದರಲ್ಲಿ ಮಾಹಿತಿ ತುಂಬಿಸಿ, ನಾಮಿನಿಯನ್ನು ಸೂಚಿಸುವ ಜೊತೆಗೆ ಯೋಜನೆಗಳಿಗೆ ಉಳಿತಾಯ ಖಾತೆಯಿಂದ ನೇರವಾಗಿ ಪ್ರೀಮಿಯಂ ಹಣ ವರ್ಗವಾಗುವಂತೆ (ಆಟೋ ಡೆಬಿಟ್) ಒಪ್ಪಿಗೆ ಸೂಚಿಸಲು ಸಹಿ ಹಾಕಿದರೆ ಖಾತೆದಾರನ ಕೆಲಸ ಮುಗಿದಂತೆ. ಈ ಸಂದರ್ಭದಲ್ಲಿ ಬ್ಯಾಂಕಿನ ಕಡೆಯಿಂದ ಸ್ವೀಕೃತಿ ಪತ್ರ ನೀಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


