ಬಿಬಿಎಂಪಿಯಲ್ಲಿ ಬಿಡಿಬಿಡಿ ಗದ್ದಲ
ಬಿಬಿಎಂಪಿಯ ಬಿಜೆಪಿ ಆಡಳಿತದ ಕೊನೆಯ ಬಜೆಟ್ ಮೇಲಿನ ಚರ್ಚೆ ವಿ`ಭಜನೆ' ಗದ್ದಲದಲ್ಲೇ ಅಂತ್ಯವಾಯಿತು.ಬಿಬಿಎಂಪಿ ವಿಭಜನೆಗೆ ...

ಬೆಂಗಳೂರು: ಬಿಬಿಎಂಪಿಯ ಬಿಜೆಪಿ ಆಡಳಿತದ ಕೊನೆಯ ಬಜೆಟ್ ಮೇಲಿನ ಚರ್ಚೆ ವಿ`ಭಜನೆ' ಗದ್ದಲದಲ್ಲೇ ಅಂತ್ಯವಾಯಿತು.ಬಿಬಿಎಂಪಿ ವಿಭಜನೆಗೆ ರಾಜ್ಯ ಸಚಿವ ಸಂಪುಟ ಕೈಗೊಂಡ ತೀರ್ಮಾನವನ್ನು ಪ್ರತಿಭಟಿಸಿದ ಬಿಜೆಪಿ ಸದಸ್ಯರು ಇಡೀ ದಿನ ಕಪ್ಪು ಪಟ್ಟಿ ಧರಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಇದರ ನಡುವೆಯೇ ಬಜೆಟ್ ಮೇಲೆ ಚರ್ಚೆ ನಡೆಯಿತು. ಆದರೆ ಮಾತಿನ ನಡುನಡುವೆ ವಿಭಜನೆಯ ಮಾತುಗಳೇ ಪ್ರಮುಖವಾಗಿ ಕೇಳಿಬಂದವು.ಸರ್ಕಾರದ ವಿರುದ್ಧ ಆರೋಪ ಮಾಡಿದರು.
ಮೊದಲಿಗೆ ಮಾತನಾಡಿದ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್, ಜೂನ್‍ಗೆ ಅಂತಿಮ ವರದಿ ನೀಡಲಿರುವ ತಜ್ಞರ ಸಮಿತಿಯು ಭೌಗೋಳಿಕವಾಗಿ ವಿಭಜನೆ
ಮಾಡುವುದರಲ್ಲಿ ಪ್ರಯೋಜನವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. 4 ಜನರ ಸಮಿತಿ ಜನಾಭಿಪ್ರಾಯ ಪಡೆದು ನೀಡಿರುವ ವರದಿಯಲ್ಲಿ ಆಡಳಿತಾತ್ಮಕವಾಗಿ ವಿಭಜನೆ ಮಾಡಿದರೆ ನಗರಕ್ಕೆ ಒಳ್ಳೆಯದು ಎಂದು ತಿಳಿಸಿದ್ದರೂ ಸರ್ಕಾರ ಪರಿಗಣಿಸಿಲ್ಲ. ಅಧಿಕಾರಶಾಹಿಗಳು ಸೇರಿ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದು, ಸರ್ಕಾರ ಅಧಿಕಾರಿಗಳ ಪರವಾಗಿ ನಿಂತಿದೆ. ಜೂನ್ ವರೆಗೆ ಕಾಯಲು ಸಾಧ್ಯವಾಗದ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ತಾಳಿದ್ದಾರೆ. ಆರ್ಥಿಕವಾಗಿ ಸ್ವಲ್ಪವಾದರೂ ಸುಸ್ಥಿತಿಯಲ್ಲಿರುವ ಪಾಲಿಕೆಯನ್ನು ಬಡ ಪಾಲಿಕೆಯಾಗಿ ಮಾಡಲು ಸರ್ಕಾರ ಹೊರಟಿದೆ ಎಂದು ದೂರಿದರು. ಕೂಡಲೇ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಬಜೆಟ್ ಚರ್ಚೆ ನಡುವೆ ವಿಭಜನೆ ಬಗ್ಗೆ ಮಾತನಾಡಲು ಅವಕಾಶ ನೀಡಬಾರದು ಎಂದು ಬಾವಿಗಿಳಿದು ಪ್ರತಿಭಟಿಸಿದರು.
ಮಂಜುನಾಥ ರೆಡ್ಡಿ ಮಾತನಾಡಿ, 198 ವಾರ್ಡ್‍ಗಳಾಗಿ ಬಿಬಿಎಂಪಿ ವಿಭಜನೆ ಯಾದಾಗ ಯಾವ ಬಂಡವಾಳಶಾಹಿಗಳಿ ದ್ದರು ಎಂದು ತಿಳಿಸಬೇಕು. ಸರ್ಕಾರ
ಸೂಕ್ತ ತೀರ್ಮಾನ ಕೈಗೊಂಡಿದೆ. ಬಜೆಟ್ ಚರ್ಚೆಗಾಗಿ ಕರೆದ ಸಭೆಯಲ್ಲಿ ವಿಭಜನೆ ಬಗ್ಗೆ ಮಾತನಾಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ರಾಜಧಾನಿಯನ್ನು ಸರ್ಕಾರ ಒಡೆದು ಹಾಳುಮಾಡುತ್ತಿದೆ. ಈ ಬಗ್ಗೆ ದೀರ್ಘ ಚರ್ಚೆ ನಡೆಯಬೇಕು ಎಂದು ಜೆಡಿಎಸ್‍ನ ಆರ್. ಪ್ರಕಾಶ್ ಆಗ್ರಹಿಸಿದರು. ವಾಗ್ವಾದ ಹೆಚ್ಚಾಗಿ
ದ್ದರಿಂದ, ಮೇಯರ್ ಶಾಂತಕುಮಾರಿ 10 ನಿಮಿಷ ಸಭೆಯನ್ನು ಮುಂದೂಡಿದರು.
ಹೊರಗೆಯೂ ಪ್ರತಿಭಟನೆ: ಸಭೆ ಆರಂಭವಾಗುವ ಮುನ್ನ ಬಿಜೆಪಿ ಸದಸ್ಯರು ಕೌನ್ಸಿಲ್ ಸಭಾಂಗಣದ ಮುಂಭಾಗ ಪ್ರತಿಭಟಿಸಿದರು.ಸರ್ಕಾರಕ್ಕೆ ಧಿಕ್ಕಾರ ಕೂಗುವುದರೊಂದಿಗೆ ವಿಭಜನೆ ನಿರ್ಣಯವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಲಾಯಿತು. ಒಡೆದಾಳುವ ನೀತಿಯನ್ನು ಸರ್ಕಾರ ಕೈ ಬಿಡಬೇಕು. ಮುಖ್ಯಮಂತ್ರಿ ತಮ್ಮ ಹಠಮಾರಿತನದ ಧೋರಣೆ ಕೈಬಿಡಬೇಕು. ಮೂವರು ಮೇಯರ್ ಆಯ್ಕೆಯಾಗುವು ದಾದರೆ ರಾಜ್ಯದ 6 ಕೋಟಿ ಜನರಿಗೂ ಮೂವರು ಮುಖ್ಯಮಂತ್ರಿಗಳನ್ನು
ಆರಿಸಬೇಕು ಎಂದು ಗಂಗಭೈರಯ್ಯ, ಎಸ್. ಕೆ.ನಟರಾಜ್, ಜೆಡಿಎಸ್‍ನ ಆರ್.ಪ್ರಕಾಶ್ ಒತ್ತಾಯಿಸಿದರು.
ತೀರ್ಮಾನ ಪುನರ್ ಪರಿಶೀಲಿಸಿ
ಬಿಬಿಎಂಪಿ ವಿಭಜನೆ ನಿರ್ಧಾರವನ್ನು ಖಂಡಿಸಿ ಹಾಗೂ ಸಚಿವ ಸಂಪುಟದ ತೀರ್ಮಾನವನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿ ಸಭೆಯಲ್ಲಿ ನಿರ್ಣಯ
ಕೈಗೊಳ್ಳಲಾಯಿತು. ಬಜೆಟ್‍ಗೆ ಅನುಮೋದನೆ ನೀಡಿದ ನಂತರ ಈ ನಿರ್ಣಯಕ್ಕೂ ಅನುಮೋದನೆ ದೊರೆಯಿತು. ಎಲ್ಲ ಸದಸ್ಯರು ಸರ್ಕಾರದ ನಿರ್ಧಾರವನ್ನು
ಖಂಡಿಸುತ್ತಿದ್ದು, ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು. ತಜ್ಞರ ಸಮಿತಿ ನೀಡಿರುವ ವರದಿ ಇನ್ನೂ ಪರಿಪೂರ್ಣವಾಗಿಲ್ಲ. ವರದಿ ನೀಡಿದ ನಂತರವೇ
ತೀರ್ಮಾನ ಕೈಗೊಳ್ಳಬೇಕು ಎಂಬ ನಿರ್ಣಯವನ್ನು ಎನ್.ಆರ್.ರಮೇಶ್ ಓದಿದರು. ಕಾಂಗ್ರೆಸ್ ಸದಸ್ಯರ ವಿರೋಧದ ನಡುವೆಯೇ ಮೇಯರ್ ಶಾಂತಕುಮಾರಿ
ನಿರ್ಣಯಕ್ಕೆ ಅನುಮೋದನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


