ಮೋದಿ ಕನಸಿಗೆ ಸಿದ್ದು ಸ್ವಚ್ಛ ಸಾಕಾರ
ಎತ್ತಣ ನರೇಂದ್ರ ಮೋದಿ, ಎತ್ತಣ ಸಿದ್ದರಾಮಯ್ಯ? ಎತ್ತಣಿಂದೆತ್ತ ಸಂಬಂಧ ವಯ್ಯಾ..? ಜನ ಇನ್ನು ಮುಂದೆ ಹಾಗೆ ಹೇಳೋ ಹಾಗೆ ಇಲ್ಲ...

ಬೆಂಗಳೂರು: ಎತ್ತಣ ನರೇಂದ್ರ ಮೋದಿ, ಎತ್ತಣ ಸಿದ್ದರಾಮಯ್ಯ? ಎತ್ತಣಿಂದೆತ್ತ ಸಂಬಂಧ ವಯ್ಯಾ..? ಜನ ಇನ್ನು ಮುಂದೆ ಹಾಗೆ ಹೇಳೋ ಹಾಗೆ ಇಲ್ಲ. ಮೋದಿ ಚತುರ ನಡೆ ಅವರ ಪಕ್ಷದವರಿರಲಿ, ರಾಜಕೀಯ ವಿರೋಧಿಗಳು ಊಹಿಸಲು ಅಸಾಧ್ಯ.
ಮಹತ್ವಾಕಾಂಕ್ಷಿ ಯೋಜನೆಗಳ ಸಾಕಾರಕ್ಕೆ ವಿರೋಧ ಪಕ್ಷಗಳ ಸಿಎಂಗಳ ಹೆಗಲಿಗೆ ನೀಡಿದ್ದಾರೆ. ಅದಕ್ಕೆ ಪ್ರಮುಖ ಉದಾಹರಣೆ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಕಾರ್ಯಪಡೆಯ ರಾಷ್ಟ್ರೀಯ ಸಮನ್ವಯ ವ್ಯಕ್ತಿ ಸಿಎಂ ಸಿದ್ದರಾಮಯ್ಯ. ಈ ಆಫರ್‍ಗೆ ಸಿಎಂ ಒಪ್ಪಿಗೆ ನೀಡಿದ್ದಾರೆ. ಕೇಂದ್ರ ಸರ್ಕಾರದ ನೀತಿ ಆಯೋಗ ರಚನೆ ಮಾಡಿದ್ದ ಮೂರು ಕಾರ್ಯಪಡೆಗಳ ಪೈಕಿ ಇದು ಒಂದು. ಮೋದಿ ಬುದ್ದಿವಂತಿಕೆ ಇರುವುದು ಇಲ್ಲೇ. ನೀತಿ ಆಯೋಗ ರಚನೆ ಮಾಡಿದ್ದ ಈ ಮೂರು ಕಾರ್ಯಪಡೆಯ ಸಮನ್ವಯ ವ್ಯಕ್ತಿಯಾಗಿ ಬಿಜೆಪಿಯೇತರ ರಾಜ್ಯಗಳ ಮುಖ್ಯ ಮಂತ್ರಿಗಳೇ ನೇಮಕಗೊಂಡಿದ್ದಾರೆ. ಸ್ವಚ್ಛ ಭಾರತಕ್ಕೆ ಸಿದ್ದರಾಮಯ್ಯ, ಸ್ಕಿಲ್ ಇಂಡಿಯಾಕ್ಕೆ ತ್ರಿಪುರಾ ಸಿಎಂ ಮಣಿಕ್ ಸರ್ಕಾರ್ ಆಯ್ಕೆಯಾಗಿದ್ದಾರೆ. ಕೇಂದ್ರ ಪ್ರಾಯೋಜಿತ ಯೋಜನೆಗಳು ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಾತ್ರ ಬಿಜೆಪಿ ಆಡಳಿತದ ಮುಖ್ಯಮಂತ್ರಿ.
ಸ್ವಚ್ಛತೆಯೇ ಏಕೆ? ಮೂರರ ಪೈಕಿ ಯಾವುದಾದರೊಂದು ಕಾರ್ಯಪಡೆ ಸಮನ್ವಯಕ್ಕೆ ಈ ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೇಂದ್ರ ಸರ್ಕಾರ ಕೋರಿತ್ತು. ಆದರೆ ಸಿದ್ದರಾಮಯ್ಯ ಸ್ವಚ್ಛಭಾರತವನ್ನು ಆಯ್ದುಕೊಂಡಿದ್ದಾರೆ. ಬೆಂಗಳೂರನ್ನು ಕಸಮುಕ್ತ ಮಾಡುವುದಕ್ಕೆ ಇದು ನೆರವು ನೀಡಲಿದೆ ಎಂಬುದು ಸಿದ್ದರಾಮಯ್ಯನವರ ಭಾವನೆ. ಸ್ವಚ್ಛ ಭಾರತ ಯೋಜನೆ ಸ್ಪೂರ್ತಿಯಿಂದಲೇ ಗ್ರಾಮೀಣ ಗೌರವ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎನ್ನುತ್ತಿವೆ ಮೂಲಗಳು. ಪ್ರಧಾನಿ ನರೇಂದ್ರ ಮೋದಿ ರಾಜಕೀಯ ವಿರೋಧಿ ಸಿದ್ದರಾಮಯ್ಯ ಈಗ ಅವರದ್ದೇ ಯೋಜನೆ ಕಾರ್ಯಪಡೆಗೆ ಸಮನ್ವಯಕಾರರಾಗಿದ್ದು ಕುತೂಹಲಕಾರಿ ವಿಚಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


