ಎಸ್ಸೈ ಸೆರೆಗೆ ನಗರ ಪೊಲೀಸರು ಮಧುರೆಗೆ
ದೊಮ್ಮಲೂರಿನಲ್ಲಿ ನಡುರಸ್ತೆಯಲ್ಲೇ ಮಗಳ ಮೇಲೆ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ ತಮಿಳುನಾಡು ಎಸ್ಸೈ ರಾಜಾರಾಮ್ ಬಂಧನಕ್ಕೆ ಹಲಸೂರು ಪೊಲೀಸರ ತಂಡವೊಂದು ಶನಿವಾರ ಮಧುರೆಗೆ ತೆರಳಿದೆ...
ಬೆಂಗಳೂರು: ದೊಮ್ಮಲೂರಿನಲ್ಲಿ ನಡುರಸ್ತೆಯಲ್ಲೇ ಮಗಳ ಮೇಲೆ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ ತಮಿಳುನಾಡು ಎಸ್ಸೈ ರಾಜಾರಾಮ್ ಬಂಧನಕ್ಕೆ ಹಲಸೂರು ಪೊಲೀಸರ ತಂಡವೊಂದು ಶನಿವಾರ ಮಧುರೆಗೆ ತೆರಳಿದೆ.
ಎಸ್ಸೈ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಮಧುರೆ ಹಿರಿಯ ಅಧಿಕಾರಿಗಳಿಗೆ ಘಟನೆ ಬಗ್ಗೆ ವಿವರಿಸಿ ಬಂಧಿಸಲಾಗುವುದು ಎಂದು ಪೂಬಂರ್ವ ವಿಭಾಗ
ಡಿಸಿಪಿ ಸತೀಶ್‍ಕುಮಾರ್ ತಿಳಿಸಿದರು.ನಗರದಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಸೂರ್ಯ (25) ಯುವಕನೊಬ್ಬನ ಪ್ರೀತಿಸಿ ಆತನ ಜತೆ ಓಡಾಡುತಿದ್ದಾಳೆಂಬ ಅನುಮಾನ ಹಿನ್ನೆಲೆಯಲ್ಲಿ ಕುಪಿತಗೊಂಡು ತಂದೆ ರಾಜಾರಾಮ್ ದೊಮ್ಮಲೂರಿಗೆ ಬಂದು ಮಗಳು ವಾಸವಿದ್ದ ಹಾಸ್ಟೆಲ್ ಮುಂದೆ ನಡುರಸ್ತೆಯಲ್ಲಿ ಥಳಿಸಿದ್ದ. ಡುಟ್ಟು ಹಿಡಿದು ಎಳೆದಾಡಿದ್ದನ್ನು ಸಾರ್ವಜನಿಕರು ಮೂಕಪ್ರೇಕ್ಷಕರಾಗಿದ್ದು ನೋಡಿದ್ದರು. ಕೊನೆಗೆ ಇಬ್ಬರು ಯುವತಿಯರು ಸೂರ್ಯಳನ್ನು ರಕ್ಷಿಸಿ ಪೊಲೀಸ್ ವಶಕ್ಕೆ ನೀಡಿದ್ದರು.
ಹಲಸೂರು ಪೊಲೀಸರು ರಾಜಾ ರಾಮ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ, ತಂದೆ ವಿರುದ್ಧ ದೂರು ನೀಡಲು ಯುವತಿ ನಿರಾಕರಿಸಿದ ಕಾರಣಕ್ಕೆ ಬಿಟ್ಟು ಕಳುಹಿಸಿದ್ದರು. ಆದರೆ, ಘಟನೆ ಬಗ್ಗೆ ಟ್ವಿಟರ್ ಸೇರಿದಂತೆ ಸಾಮಾಡಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

