ಪ್ರಭಾ ಪಾರ್ಥಿವ ಶರೀರ ನಗರಕ್ಕೆ
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕೊಲೆಯಾದ ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಪ್ರಭಾ (41) ಅವರ ಪಾರ್ಥಿವ ಶರೀರವನ್ನು ಪತಿ ಅರುಣ್‍ಕುಮಾರ್ ಹಾಗೂ ಸೋದರ ಶಂಕರ್‍ಶೆಟ್ಟಿ ಅವರು ಶನಿವಾರ ರಾತ್ರಿ ನಗರಕ್ಕೆ ತಂದರು...
ಬೆಂಗಳೂರು: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕೊಲೆಯಾದ ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಪ್ರಭಾ (41) ಅವರ ಪಾರ್ಥಿವ ಶರೀರವನ್ನು ಪತಿ ಅರುಣ್‍ಕುಮಾರ್ ಹಾಗೂ ಸೋದರ ಶಂಕರ್‍ಶೆಟ್ಟಿ ಅವರು ಶನಿವಾರ ರಾತ್ರಿ ನಗರಕ್ಕೆ ತಂದರು.
ವಿಮಾನ ನಿಲ್ದಾಣದಿಂದ ಚಂದ್ರಾಲೇಔಟ್‍ನಲ್ಲಿರುವ ಪತಿಯ ನಿವಾಸಕ್ಕೆ ಪ್ರಭಾ ಅವರ ಮೃತದೇಹವನ್ನು ಶನಿವಾರ ರಾತ್ರಿ 10.30ಕ್ಕೆ ಕೊಂಡೊಯ್ಯಲಾಯಿತು. ಭಾನುವಾರ ಬೆಳಗ್ಗೆ ಎರಡ್ಮೂರು ತಾಸು ಸಂಬಂಧಿಕರ ದರ್ಶನಕ್ಕೆ ಶವ ಇರಿಸಿ ಬಳಿಕ ಮಂಗಳೂರಿಗೆ ಕೊಂಡೊಯ್ಯ ಲಾಗುತ್ತದೆ ಎಂದು ಸಂಬಂಧಿ ತ್ರಿಜೇಶ್ ಹೇಳಿದ್ದಾರೆ.
ಪ್ರಭಾ ಅವರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಸಂಸದೆ ಶೋಭಾ ಕರಂದ್ಲಾಜೆ, ಆಹಾರ ಖಾತೆ ಸಚಿವ ದಿನೇಶ್ ಗುಂಡುರಾವ್ ಹಾಗೂ ಗೃಹ ಸಚಿವ ಕೆ.ಜೆ.ಜಾರ್ಜ್ ಹಾಗೂ ಬಿಜೆಪಿ ಹಿರಿಯ ಮುಖಂಡ, ಸಂಸದ ಅನಂತ್ ಕುಮಾರ್ ಸೇರಿದಂತೆ ಮತ್ತಿತರ ಗಣ್ಯಾತಿಗಣ್ಯರು ಸ್ಥಳಕ್ಕೆ ತೆರಳಿ ಪ್ರಭಾ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಮೈಂಡ್‍ಟ್ರಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಪ್ರಭಾ ಅವರು ಮಾ.7ರಂದು ರಾತ್ರಿ 9.30ರ ಸುಮಾರಿಗೆ ಸಿಡ್ನಿಯಲ್ಲಿರುವ ತಮ್ಮ ಮನೆ ಸಮೀಪದ ಪಾರ್ಕ್‍ನಲ್ಲಿ ದುಷ್ಕರ್ಮಿಗಳಿಂದ ಕೊಲೆಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

