ವಿದೇಶೀಯರ ಗಡಿಪಾರು
ವ್ಯಾಸಂಗ, ಪ್ರವಾಸ, ವೈದ್ಯಕೀಯ ಉದ್ದೇಶ ಸೇರಿ ನಾನಾ ಕಾರಣಗಳಿಗೆ ಭಾರತಕ್ಕೆ ಬಂದು ವೀಸಾ ಅವಧಿ ಮುಗಿದರೂ ನಗರದಲ್ಲಿ ಉಳಿದುಕೊಂಡಿರುವ ಎಲ್ಲ ವಿದೇಶೀಯರನ್ನು ಗಡಿ ಪಾರು...

ಬೆಂಗಳೂರು: ವ್ಯಾಸಂಗ, ಪ್ರವಾಸ, ವೈದ್ಯಕೀಯ ಉದ್ದೇಶ ಸೇರಿ ನಾನಾ ಕಾರಣಗಳಿಗೆ ಭಾರತಕ್ಕೆ ಬಂದು ವೀಸಾ ಅವಧಿ ಮುಗಿದರೂ ನಗರದಲ್ಲಿ ಉಳಿದುಕೊಂಡಿರುವ ಎಲ್ಲ ವಿದೇಶೀಯರನ್ನು ಗಡಿಪಾರು ಮಾಡಲಾಗುವುದು ಎಂದು ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಉದ್ದೇಶಗಳಿಂದ ಆಫ್ರಿಕಾ ಸೇರಿ ನಾನಾ ರಾಷ್ಟ್ರಗಳಿಂದ ಬೆಂಗಳೂರಿಗೆ ಬಂದಿರುವ ವಿದೇಶೀಯರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅವಧಿ ಮುಗಿದರೂ ನಗರದಲ್ಲಿ ಉಳಿದುಕೊಂಡಿರುವವರನ್ನು ಪತ್ತೆ ಮಾಡಿ ಗಡಿಪಾರು ಮಾಡುತ್ತೇವೆ. ಪೂರ್ವ ಉಪವಿಭಾಗದಲ್ಲಿ 370, ಈಶಾನ್ಯ ಉಪವಿಭಾಗದಲ್ಲಿ 170 ಮಂದಿ ವೀಸಾ ಅವಧಿ ಉಳಿದುಕೊಂಡಿರುವ ಮಾಹಿತಿ ಇದೆ.
ಇಡೀ ಬೆಂಗಳೂರಿನಲ್ಲಿ ಎಷ್ಟು ವಿದೇಶೀಯರಿದ್ದಾರೆ. ವ್ಯಾಸಂಗ, ವೈದ್ಯಕೀಯ. ಪ್ರವಾಸ, ವ್ಯವಹಾರ ಸೇರಿ ನಾನಾ ಉದ್ದೇಶಗಳಿಂದ ಎಷ್ಟೆಷ್ಟು ಮಂದಿ ಬಂದಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


