ವಿಜಯ ಬ್ಯಾಂಕ್‍ನಿಂದ ನೂತನ ಡೆಬಿಟ್ ಕಾರ್ಡ್
ವಿಜಯ ಬ್ಯಾಂಕ್ ಗ್ರಾಹಕರಿಗಾಗಿ ಎರಡು ನೂತನ ಡೆಬಿಟ್ ಕಾರ್ಡ್ ಬಿಡುಗಡೆಗೊಳಿಸಿದ್ದು,

ಬೆಂಗಳೂರು: ವಿಜಯ ಬ್ಯಾಂಕ್ ಗ್ರಾಹಕರಿಗಾಗಿ ಎರಡು ನೂತನ ಡೆಬಿಟ್ ಕಾರ್ಡ್ ಬಿಡುಗಡೆಗೊಳಿಸಿದ್ದು, ನಗರವಾಸಿಗಳನ್ನು ಗುರಿಯಾಗಿರಿಸಿಕೊಂಡು ವಿಸಾ ಮತ್ತು ರುಪಾಯ್ ಎಂಬ ಕಾರ್ಡ್‍ಗಳನ್ನು ಸಿದ್ಧಪಡಿಸಲಾಗಿದೆ. ವಿಸಾ ಪ್ಲಾಟಿನಮ್ ಕಾರ್ಡ್‍ನಲ್ಲಿ ವಿದೇಶಗಳಲ್ಲೂ ವಹಿವಾಟು ನಡೆಸುವ ಸೌಲಭ್ಯ ನೀಡಲಾಗಿದೆ.
ರಕ್ಷಣೆ ದೃಷ್ಟಿಯಿಂದ ಇಎಂವಿ ಚಿಪ್ ಅನ್ನು ಅಳವಡಿಸಲಾಗಿದೆ. ಇದರಿಂದ ದಿನವೊಂದಕ್ಕೆ ರು. 50,000 ವರೆಗೆ ನಗದನ್ನು ಪಡೆಯಬಹುದಾಗಿದ್ದು, ರು. 1 ಲಕ್ಷವರೆಗೆ ಖರೀದಿ ಮಾಡಬಹುದಾಗಿದೆ. ಇದಲ್ಲದೆ, ಆನ್‍ಲೈನ್ ಖರೀದಿ, ಹೋಟೆಲ್, ರೆಸ್ಟೋರೆಂಟ್, ಮಾಲ್‍ಗಳಲ್ಲೂ ಬಳಸಬಹುದಾಗಿದೆ.
ರುಪಾಯ್ ಪ್ಲಾಟಿನಮ್ ಕಾರ್ಡ್ ಅನ್ನು ಭಾರತದಲ್ಲಿ ಮಾತ್ರ ಬಳಸಲು ಅವಕಾಶ ವಿದ್ದು, ರು. 50,000 ವರೆಗೆ ನಗದನ್ನು ಪಡೆಯಬಹು ದಾಗಿದೆ. ರು. 1 ಲಕ್ಷವರೆಗೆ ಖರೀದಿ ಮಾಡುವ ಸೌಲಭ್ಯ ನೀಡಲಾಗಿದೆ. ಹಣ ಹಿಂಪಾವತಿ (ಕ್ಯಾಶ್‍ಬ್ಯಾಕ್), ಇಂಧನ ಮೇಲಿನ ಮೇಲ್ತೆರಿಗೆಯಲ್ಲಿ ಕಡಿತ ಸೇರಿ ಹಲವಾರು ಸೌಕರ್ಯಗಳನ್ನು ಒದಗಿಸಲಾಗಿದೆ.
ವಿಜಯ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕಿಶೋರ್ ಸ್ಯಾನ್ಸಿ ಅವರು ಬೆಂಗಳೂರಿನಲ್ಲಿರುವ ಬ್ಯಾಂಕ್‍ನ ಪ್ರಧಾನ ಕಚೇರಿಯಲ್ಲಿ ಈ ಎರಡು ಕಾರ್ಡ್‍ಗಳನ್ನು ಬಿಡುಗಡೆಗೊಳಿಸಿದರು. ಬ್ಯಾಂಕ್‍ನ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಎಸ್. ರಾಮ ರಾವ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


