ಜಿಲ್ಲಾ ಸುದ್ದಿ

ಕೆಲವರಿಗೆ ಕೊಕ್ಕೆ ಹಾಕುವುದೇ ಕೆಲಸ: ಅಧಿಕಾರಿಗಳ ವಿರುದ್ಧ ಕಿಮ್ಮನೆ ಕಿಡಿ

`ಸರ್ಕಾರಿ ಕಚೇರಿಗಳಲ್ಲಿನ ಸಿಬ್ಬಂದಿ-ಅಧಿಕಾರಿಗಳ ಪೈಕಿ ಕೆಲವರಿಗೆ ಓಡಾಡಿಸುವುದರಲ್ಲೇ ಸಂತೋಷ. ಎಂಎಸ್ ಬಿಲ್ಡಿಂಗ್‍ನಲ್ಲಿ ಕೆಲವರು ಕೊಕ್ಕೆ ಹಾಕಲೆಂದೇ ಕುಳಿತಿದ್ದಾರೆ' ಎಂದು ಶಿಕ್ಷಣ ಸಚಿವ...

ಕೆಲವರಿಗೆ ಕೊಕ್ಕೆ ಹಾಕುವುದೇ ಕೆಲಸ: ಅಧಿಕಾರಿಗಳ ವಿರುದ್ಧ ಕಿಮ್ಮನೆ ಕಿಡಿ
ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್
Published On :

ಬೆಂಗಳೂರು: `ಸರ್ಕಾರಿ ಕಚೇರಿಗಳಲ್ಲಿನ ಸಿಬ್ಬಂದಿ-ಅಧಿಕಾರಿಗಳ ಪೈಕಿ ಕೆಲವರಿಗೆ ಓಡಾಡಿಸುವುದರಲ್ಲೇ ಸಂತೋಷ. ಎಂಎಸ್ ಬಿಲ್ಡಿಂಗ್‍ನಲ್ಲಿ ಕೆಲವರು ಕೊಕ್ಕೆ ಹಾಕಲೆಂದೇ ಕುಳಿತಿದ್ದಾರೆ' ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸರ್ಕಾರಿ ಕಚೇರಿಗಳ ಆಡಳಿತ ವೈಖರಿಯನ್ನು ತಮ್ಮದೇ ಧಾಟಿಯಲ್ಲಿ ಹೊರಗೆಡಹಿದ್ದಾರೆ.

ರಾಜ್ಯ ಶಿಕ್ಷಣ ಇಲಾಖೆ ಲಿಪಿಕಾರ ನೌಕರರು, ವಾಹನ ಚಾಲಕರು, ಡಿ ಗ್ರೂಪ್ ನೌಕರರ ಸಂಘ ಬುಧವಾರ ಶಿಕ್ಷಕರ ಸದನದಲ್ಲಿ ಹಮ್ಮಿಕೊಂಡ ರಾಜ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲವು ಸಿಬ್ಬಂದಿಗೆ ತಮ್ಮ ಬಳಿ ಕೆಲಸ ಮಾಡಿಸಿಕೊಳ್ಳಲು ಬರುವವರನ್ನು ಅಲೆದಾಡಿಸುವ ಕಾಯಿಲೆ ಇದೆ. ಇನ್ನೊಂದು ಸಲ ಬಂದು ಹೋದರೆ ಏನಾಗುತ್ತದೆ, ನಾನು, ನನ್ನ ಖುರ್ಚಿಯ ಪ್ರಭಾವ ಎಷ್ಟಿದೆ ಎಂದು ಗೊತ್ತಾಗಬೇಕೆಂದು ಕೆಲವರು ಅಂದು ಕೊಂಡಿರುತ್ತಾರೆ. ಸರ್ಕಾರಿ ಅಧಿಕಾರಿ- ಸಿಬ್ಬಂದಿಗಳಲ್ಲಿರುವ ಇಂತಹ ಕೊಕ್ಕೆ ಹಾಕುವ ಮನೋಭಾವ ಬದಲಾಗಬೇಕು ಎಂದರು.

ಈ ಹಿಂದೆ ಸಹ ಎಂ.ಎಸ್.ಬಿಲ್ಡಿಂಗ್‍ಗೆ ಖುದ್ದು ಭೇಟಿ ನೀಡಿದ್ದ ಶಿಕ್ಷಣ ಸಚಿವರು ಅಲ್ಲಿನ ಕೆಲಸಕಾರ್ಯಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ನೇಮಕಾತಿಗೆ ಕ್ರಮ: ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣ ಇಲಾಖೆ ಲಿಪಿಕಾರ ನೌಕರರು, ವಾಹನ ಚಾಲಕರು, ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಶಿಕ್ಷಣ ಇಲಾಖೆ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವರು ಇನ್ನೆರಡು ದಿನಗಳೊಳಗೆ ಸಂಬಂಧಪಟ್ಟ ಅಧಿಕಾರಿಯೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಭರವಸೆ ನೀಡಿ ದರಲ್ಲದೆ ಶಿಕ್ಷಣ ಇಲಾಖೆ ಸಿಬ್ಬಂದಿಯ ಸಮಸ್ಯೆ ಕುರಿತು ಚರ್ಚಿಸಲು ಎರಡು ಗಂಟೆ ಸಮಯ ಮೀಸಲಿಡುತ್ತೇನೆ, ಸಂಘಟನೆ ಸದಸ್ಯರು ಆಗಮಿಸಬಹುದು ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸತ್ಯಮೂರ್ತಿ, ಪ್ರಾಥಮಿಕ ಶಿಕ್ಷಣ ನಿರ್ದೇಶಕ ಆನಂದ್, ಪ್ರೌಢ ಶಿಕ್ಷಣ ನಿರ್ದೇಶಕರಾದ ಫಿಲೋಮಿನಾ ಲೋಬೊ. ಸರ್ವ ಶಿಕ್ಷಣ ಅಭಿಯಾನದ ನಿರ್ದೇಶಕ ಮಲ್ಲಣ್ಣ, ಪ್ರೌಢಶಿಕ್ಷಣ ಪರೀಕ್ಷೆ ಮಂಡಳಿ ನಿರ್ದೇಶಕರಾದ ಯಶೋಧ ಬೋಪಣ್ಣ, ವಿಭಾಗೀಯ ಉಪ ನಿರ್ದೇಶಕ ಡಿ.ಕೆ.ಶಿವಕುಮಾರ್, ಜೈಕುಮಾರ್, ಯು.ಡಿ. ನರಸಿಂಹಯ್ಯ, ಮಂಜೇಗೌಡ, ಎಂ ಎಸ್. ಪಾರ್ಥಸಾರಥಿ ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.