ಬೈಕ್ ಗುದ್ದಿಸಿ ಏಳು ಲಕ್ಷ ದೋಚಿ ಪರಾರಿ
ಖಾಸಗಿ ಕಂಪನಿ ಉದ್ಯೋಗಿಯ ಬೈಕ್ ಗೆ ಮತ್ತೊಂದು ಬೈಕ್ ಗುದ್ದಿದ ದುಷ್ಕರ್ಮಿಗಳಿಬ್ಬರು 7 ಲಕ್ಷರೂಪಾಯಿಗಳನ್ನು ದೋಚಿದ್ದಾರೆ.

ಬೆಂಗಳೂರು: ವಿವಿಧ ಮಳಿಗೆ ಹಾಗೂ ಶೋರೂಂಗಳಿಂದ ಹಣ ಸಂಗ್ರಹಿಸುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿಯ ಬೈಕ್ ಗೆ ಮತ್ತೊಂದು ಬೈಕ್ ಗುದ್ದಿದ ದುಷ್ಕರ್ಮಿಗಳಿಬ್ಬರು 7 ಲಕ್ಷರೂಪಾಯಿಗಳನ್ನು ದೋಚಿರುವ ಘಟನೆ ಯಲಹಂಕದ ಸಮೀಪದ ಚಿಕ್ಕಬೊಮ್ಮಸಂದ್ರದಲ್ಲಿ ನಡೆದಿದೆ.
ದಾಸರಹಳ್ಳಿ ನಿವಾಸಿ ಶ್ರೀಕಾಂತ ಹಣ ಕಳೆದುಕೊಂಡವರು. ಮಳಿಗೆಗಳು ಹಾಗೂ ಶೋರೂಂಗಳಿಂದ ಹಣ ಸಂಗ್ರಹಿಸಿ ಅದನ್ನು ಬ್ಯಾಂಕ್ ಗೆ ಡೆಪಾಸಿಟ್ ಮಾಡುತ್ತಿದ್ದರು. 7 ಲಕ್ಷ ಹಣವನ್ನು ಬ್ಯಾಂಕ್ ಗೆ ಡೆಪಾಸಿಟ್ ಮಾಡಲು ಹೋಗುತ್ತಿರಬೇಕಾದರೆ ಹಿಂದಿನಿಂದ ಬಂದ ಬೈಕ್ ವೊಂದು ಶ್ರೀಕಾಂತ್ ಅವರ ಬೈಕ್ ಗೆ ಗುದ್ದಿದೆ. ಕೆಳಗೆ ಬಿದ್ದ ಶ್ರೀಕಾಂತ್ ಅವರಿಂದ ಬ್ಯಾಗ್ ಕಿತ್ತುಕೊಂಡ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬೈಕ್ ನ ನೋಂದಣಿ ಸಂಖ್ಯೆಯನ್ನು ಗಮನಿಸಲು ಸಾಧ್ಯವಾಗಲಿಲ್ಲ ಎಂದು ಶ್ರೀಕಾಂತ್ ಪೊಲೀಸರಿಗೆ ತಿಳಿಸಿದ್ದಾರೆ.
ಹಣ ಸಾಗಣೆ ವಿಷಯ ತಿಳಿದವರೇ ಕೃತ್ಯ ಎಸಗಿರುವ ಸಾಧ್ಯತೆ ಇದ್ದು ಸಂಸ್ಥೆಯಲ್ಲಿ ಈ ಹಿಂದೆ ಕೆಲಸ ಮಾಡಿದವರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಉಪನಗರ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


