ಮಧ್ಯಮ ಗಾತ್ರದ ಎಸಿ ವೋಲ್ವೋ ಗೆ ಚಾಲನೆ

ನವದೆಹಲಿ: ನಗರದಲ್ಲಿ ಹವಾನಿಯಂತ್ರಿತ ಯುಡಿ ವೋಲ್ವೋ ಬಸ್ ಗಳ ಪ್ರಾಯೋಗಿಕ ಸಂಚಾರ ಆರಂಭಿಸಲಾಗಿದ್ದು ಅವುಗಳ ಕ್ಷಮತೆ ಹಾಗು ಗುಣಮಟ್ಟ ಪರಿಶೀಲಿಸಿ ಇನ್ನಷ್ಟು ಬಸ್ ಗಳನ್ನು ಖರಿದೀಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬಿಎಂಟಿಸಿ ಕೇಂದ್ರ ಕಚೇರಿ ಶಾಂತಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ವಿನ್ಯಾಸದ ಯುಡಿ ವೋಲ್ವೋ ಬಸ್ ಗಳ ಪ್ರಾಯೋಗಿಕ ಸೇವೆಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ವೋಲ್ವೋ ಕಂಪನಿಯಿಂದಲೇ ಬಸ್ ಗಳನ್ನು ಉಚಿತವಾಗಿ ನೀಡಿದ್ದು ಅವುಗಳಿಗೆ ಚಾಲಕ- ನಿರ್ವಾಹಕರನ್ನು ನಿಯೋಜಿಸಲಾಗಿದೆ. ಈ ಬಸ್ ಗಳು ಎರಡು ತಿಂಗಳ ಕಾಲ ಮೆಜಸ್ಟಿಕ್ ನಿಂದ ಸರ್ಜಾಪುರ ಮಾರ್ಗವಾಗಿ ಸಂಚರಿಸಲಿವೆ.
ಇದು ಪ್ರಾಯೋಗಿಕವಾಗಿದ್ದು ಉತ್ತಮ ರೀತಿಯ ಪ್ರತಿಕ್ರಿಯೆ ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಆ ಬಸ್ ಗಳನ್ನು ಖರೀದಿಸಬೇಕೆ ಬೇಡವೇ ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಏಕ್ ರೂಪ್ ಕೌರ್ ಮಾತನಾಡಿ, ಸದ್ಯ ಎರಡು ಬಸ್ ಗಳು ಈಗ ಸೇವೆ ಆರಂಭಿಸಿವೆ. ಈಗಾಗಲೇ ಮಾರ್ಕೋ ಪೋಲೋ ಬಸ್ ಗಳಲ್ಲಿ ಅಧಿಕ ಇಂಧನ ಖರ್ಚಾಗುತ್ತಿರುವುದರಿಂದ ಸಂಪೂರ್ಣವಾಗಿ ಅದನ್ನು ನಿಲ್ಲಿಸಲಾಗಿದೆ. ಹಾಗಾಗಿ ಈ ಬಸ್ ಗಳ ಇಂಧನ ಕ್ಷಮತೆ ಮತ್ತು ಸಾಮರ್ಥ್ಯ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಈ ಹೊಸ ವೋಲ್ವೋ ಬಸ್ ಗಳು ಮಧ್ಯಮ ಗಾತ್ರದ ಸಹಜ ಬಸ್ ನಂತಿವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಮೊದಲ ಬಾರಿಗೆ ಪರಿಚಯಿಸಿರುವ ಈ ಬಸ್ ಗಳು ಹವಾನಿಯಂತ್ರಿತವಾಗಿದ್ದು ಮಧ್ಯಮ ಗಾತ್ರದಲ್ಲಿವೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಸನಗಳ ವಿನ್ಯಾಸ ಮಾಡಲಾಗಿದೆ. 12 ಮೀ ಉದ್ದವಿದ್ದು ಸಿಸಿಟಿವಿ ಹೊಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


