ಸಿಹಿ ಮತ್ತು ಸುರಕ್ಷತೆ ರಂಜಾನ್ 24x7 ಡಯಾಬಿಟಿಸ್ ಕೇರ್ ಸೇವೆ ಪ್ರಾರಂಭ
ಪವಿತ್ರ ರಂಜಾನ್ ತಿಂಗಳಲ್ಲಿ ಮಧುಮೇಹಿಗಳು ಯಾವ ರೀತಿ ಉಪವಾಸ ಆಚರಿಸಬೇಕು. ಯಾವ ಆಹಾರ ಸೇವಿಸಬೇಕು ಎಂಬುದರ ಬಗ್ಗೆ ಮಾಹಿತಿ...

ಬೆಂಗಳೂರು: ಪವಿತ್ರ ರಂಜಾನ್ ತಿಂಗಳಲ್ಲಿ ಮಧುಮೇಹಿಗಳು ಯಾವ ರೀತಿ ಉಪವಾಸ ಆಚರಿಸಬೇಕು. ಯಾವ ಆಹಾರ ಸೇವಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲು ಸಿಹಿ ಮತ್ತು ಸುರಕ್ಷತೆ ರಂಜಾನ್ 24x7 ಡಯಾಬಿಟಿಸ್ ಕೇರ್ ಸೇವೆ ಪ್ರಾರಂಭಗೊಂಡಿದೆ.
ಡಯಾಬಿಟಾಕೇರ್ ಸಂಸ್ಥೆ ನಗರದಲ್ಲಿಂದು ಏರ್ಪಡಿಸಿದ್ದ ಸಿಹಿ ಮತ್ತು ಸುರಕ್ಷತೆ ರಂಜಾನ್ 24x7 ಡಯಾಬಿಟಿಸ್ ಕೇರ್ ಸೇವೆಗೆ ಚಾಲನೆ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ರಂಜಾನ್ ತಿಂಗಳಲ್ಲಿ ಮಧುಮೇಹಿಗಳು ಯಾವ ರೀತಿ ಉಪವಾಸ ಆಚರಿಸಬೇಕು. ಯಾವ ಆಹಾರ ಸೇವಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತಿರುವ ಡಯಾಬಿಟಾಕೇರ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಡೆಂಗ್ ರೋಗದ ಬಗ್ಗೆ ಹೆಚ್ಚಿನ ಜನಜಾಗೃತಿ ಅಗತ್ಯವಿದೆ. ಪರಿಸರ ಸ್ವಚ್ಛ ಮಾಡುವುದು, ಮಳೆ ನೀರು ನಿಲ್ಲದಂತೆ ನೋಡಿಕೊಳ್ಳುವುದರಿಂದ ಮಲೇರಿಯಾ, ಡೆಂಗ್ಯು ಹರಡದಂತೆ ಮಾಡಬಹುದು. ಈ ಬಗ್ಗೆ ಈಗಾಗಲೇ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ನಿದರ್ೇಶನ ನೀಡಲಾಗಿದೆ. ಮಾತ್ರವಲ್ಲ ರಾಜ್ಯದ 2353 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡೆಂಗ್ಯು ಪರೀಕ್ಷೆ ನಡೆಸುವ ಸೌಲಭ್ಯ ಕಲ್ಪಿಸಲಾಗಿದೆ. ಮಾತ್ರವಲ್ಲ ಉಚಿತವಾಗಿ ಔಷಧಿ, ಪ್ಲೇಟ್ಲೇಟ್ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಬೈಕ್ ಆಂಬುಲೆನ್ಸ್ ಸೇವೆ ಸ್ಥಗಿತಗೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯು.ಟಿ.ಖಾದರ್, 32 ಬೈಕ್ ಚಾಲಕರಿಗೆ ತರಬೇತಿ ನೀಡುವ ಕೆಲಸ ನಡೆಯುತ್ತಿದೆ. ಆದ್ದರಿಂದ ಸ್ವಲ್ಪ ವಿಳಂಬವಾಗಿದೆ ಎಂದು ಸ್ಪಷ್ಪಪಡಿಸಿದರು.
ಮ್ಯಾಗಿ ಸೇರಿದಂತೆ 7 ಆಹಾರ ಪದಾರ್ಥಗಳ ಸುರಕ್ಷತಾ ಪರೀಕ್ಷೆಯ ವರದಿ ಕೈಸೇರಿದ್ದು, ಅದರಲ್ಲಿ ಯಾವುದೇ ವಿಷಕಾರಕ ಅಂಶ ಇಲ್ಲ ಎಂದು ತಿಳಿಸಲಾಗಿದೆ. ಆದರೆ ಕೇಂದ್ರದ ಆಹಾರ ಸುರಕ್ಷತಾ ಕಾಯ್ದೆಯ ಕೆಲವೊಂದು ನಿಯಮಗಳಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಈ ವರದಿಯನ್ನು ಕೇಂದ್ರಕ್ಕೆ ಕಳುಹಿಸಿ ಸ್ಪಷ್ಟತೆ ಕೇಳಲಾಗಿದೆ. ಐದು ದಿನವಾದರೂ ಇನ್ನೂ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


