ಜಾಹೀರಾತುಗಳ ದರ ಪರಿಷ್ಕರಣೆ ಪ್ರಸ್ತಾವ
ಬಿಬಿಎಂಪಿ ಅನುಮತಿ ಪಡೆದು ಹಾಕಲಾದ ಜಾಹೀರಾತು ಫಲಕಗಳ ದರ ಪರಿಷ್ಕರಿಸಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದು...

ಬೆಂಗಳೂರು: ಬಿಬಿಎಂಪಿ ಅನುಮತಿ ಪಡೆದು ಹಾಕಲಾದ ಜಾಹೀರಾತು ಫಲಕಗಳ ದರ ಪರಿಷ್ಕರಿಸಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದು, ಅನುಮೋದನೆ ದೊರೆಯುವವರೆಗೂ ಹಳೆಯ ದರವನ್ನೇ ವಿಧಿ ಸಲಾಗುವುದು ಎಂದು ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್ ತಿಳಿಸಿದ್ದಾರೆ. ಬಿಬಿಎಂಪಿಯಲ್ಲಿ ಮಂಗಳವಾರ ಜಾಹೀರಾತು ವಿಭಾಗದ ಅಧಿಕಾರಿಗಳೊಂ ದಿಗೆ ಪರಿಶೀಲನಾ ಸಭೆ ನಡೆಯಿತು.ಸಭೆಯಲ್ಲಿ ಮಾತನಾಡಿದ ಅವರು, ಜಾಹೀರಾತು ನೀತಿ(ಬೈಲಾ)ಯಲ್ಲಿ ತಿದ್ದು ಪಡಿ ಮಾಡುವುದಕ್ಕೆ ಸಂಬಂಧಸಿದಂತೆ ಪ್ರಸ್ತಾವವೊಂದನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಈಗ ಇರುವ ಜಾಹೀರಾತು ಫಲಕಗಳಿಗೆ ದರ ಕಡಿಮೆಯಿದ್ದು, ಇದನ್ನು ಪರಿಷ್ಕರಿಸುವ ಪ್ರಸ್ತಾವ ಇನ್ನೂ ಸರ್ಕಾರದ ಹಂತದಲ್ಲಿದೆ. ಅನುಮೋದನೆ ದೊರೆತ ನಂತರ ಹೊಸ ದರ ಜಾರಿ ಮಾಡಲಾಗುವುದು ಎಂದು ತಿಳಿಸಿದರು. ಜಾಹೀರಾತು ಫಲಕಗಳ ಅನುಮತಿ ನವೀಕರಿಸಿ ದಂಡ ಸಮೇತ ವಸೂಲಿ ಮಾಡಬೇಕು. 1,700 ಅಧಿಕೃತ ಹಾಗೂ 1,100 ಅನಧಿಕೃತ ಫಲಕಗಳಿವೆ ಎಂದು ಜಾಹೀರಾತು ವಿಭಾಗದ ಅಧಿಕಾರಿಗಳು
ಮಾಹಿತಿ ನೀಡಿದ್ದಾರೆ. ಅನಧಿಕೃತ ಫಲಕ ಹಾಗೂ ಫ್ಲೆಕ್ಸ್ ತೆರವುಗೊಳಿಸಲು ಸೂಚಿಸಲಾಗಿದೆ. ಫಲಕಗಳಿಗೆ ಅನುಮತಿ ನೀಡುವುದನ್ನು ಕೈ ಬಿಟ್ಟರೆ ಪಾಲಿಕೆಗೆ ಆರ್ಥಿಕ ನಷ್ಟ ವಾಗುತ್ತದೆ. ಹೀಗಾಗಿ ಜಾಹೀರಾತು ನೀತಿ ಅನುಮೋದನೆಗೊಂಡ ನಂತರ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಜಾಹೀರಾತು ಫಲಕ ಅನುಮತಿ ನವೀಕರಣ ವೇಳೆ ಫಲಕಗಳ ಅಳತೆ ಮತ್ತು ಅಂದಿನ ನವೀಕರಣ ಪತ್ರ ಸೇರಿದಂತೆ ಪ್ರಮುಖ ದಾಖಲೆ ಪರಿಶೀಲಿಸಿ ನವೀಕರಣಗೊಳಿಸ ಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಆಯುಕ್ತ ಜಿ.ಕುಮಾರ್ ನಾಯಕ್ ಮಾತನಾಡಿ, 2014-15 ನೇ ಸಾಲಿನಲ್ಲಿ ಅ„ಕೃತವಾಗಿ ಹಾಕಲಾದ ಜಾಹೀರಾತು ಫಲಕಗಳ ದರ ನವೀಕರಿಸದಿರುವುದರಿಂದ ಬಿಬಿಎಂಪಿಗೆ ಸುಮಾರು ರು. 25 ಕೋಟಿ ನಷ್ಟ ಉಂಟಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


