ಜಿಲ್ಲಾ ಸುದ್ದಿ

ಬಂಧಿತ ಉಗ್ರರಿಗೆ ಬೆಂಗಳೂರು ನಂಟು: ಪೊಲೀಸ್

ನಗರದಲ್ಲಿ ಶುಕ್ರವಾರ ಬಂಧಿಸಿದ ನಾಲ್ವರು ಉಗ್ರರಿಗೆ ಬೆಂಗಳೂರಿನ ಹಳೇ ನಂಟಿರುವುದು ಪತ್ತೆಯಾಗಿದೆ. ಕಳೆದ ಜನವರಿಯಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಬೋಡೋ ಉಗ್ರರು ನೀಡಿದ ಮಾಹಿತಿ...

ಬಂಧಿತ ಉಗ್ರರಿಗೆ ಬೆಂಗಳೂರು ನಂಟು: ಪೊಲೀಸ್
ಬಂಧಿತ ಉಗ್ರರು
Published On :

ಬೆಂಗಳೂರು: ನಗರದಲ್ಲಿ ಶುಕ್ರವಾರ ಬಂಧಿಸಿದ ನಾಲ್ವರು ಉಗ್ರರಿಗೆ ಬೆಂಗಳೂರಿನ ಹಳೇ ನಂಟಿರುವುದು ಪತ್ತೆಯಾಗಿದೆ. ಕಳೆದ ಜನವರಿಯಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಬೋಡೋ ಉಗ್ರರು ನೀಡಿದ ಮಾಹಿತಿ ಆಧಾರದ ಮೇಲೆ ಕಳೆದ ಶುಕ್ರವಾರ ರಾತ್ರಿ ನಾಲ್ವರು ಉಗ್ರರನ್ನು ಬಂಧಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಬಂಧಿತರಾಗಿದ್ದ ಇಬ್ಬರು ಉಗ್ರರಾದ ಎನ್‍ಡಿಎಫ್ ಬಿ ಕಮಾಂಡರ್ ಬಿರ್ಕಾಂಗ್ ನರ್ಜಾರಿ ಅಲಿಯಾಸ್ ಬುರ್ಲಾಂಗ್ ಬುತ್ತೂರ್ ಹಾಗೂ ಈಗ ಬಂಧಿತರಾಗಿರುವ ನಾಲ್ಕು ಉಗ್ರರಿಗೂ ನಂಟಿತ್ತು. ಹಾಗಾಗಿ ನಾಲ್ಕು ಉಗ್ರರು ನಗರದಲ್ಲಿ ನೆಲೆಸಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಆ ಇಬ್ಬರು ಉಗ್ರರು ನೀಡಿದ ಮಾಹಿತಿ ಆಧರಿಸಿ ನಗರದಲ್ಲಿ ನೆಲೆಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಅವರು ರಾಜ್ಯದಲ್ಲಿ ಯಾವುದೇ ವಿದ್ವಂಸಕ ಕೃತ್ಯ ನಡೆಸಿರುವ ಬಗ್ಗೆ ಸುಳಿವು ಲಭ್ಯವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಉಗ್ರರ ಬಂಧನದಿಂದ ಸ್ಥಳೀಯರಲ್ಲಿ ಮನೆ ಮಾಡಿರುವ ನೆ ಬಾಡಿಗೆಗೆ ನೀಡುವ ಮುನ್ನ ಅವರ ಪೂರ್ವಾಪರ ವಿಚಾರಿಸಿ ಬಾಡಿಗೆ ನೀಡುವಂತೆ ಸ್ಥಳೀಯರಿಗೆ ಸೂಚನೆ ನೀಡಲಾಗಿದೆ. ಯಾರೇ ಶಂಕಿತರು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದಿದ್ದಾರೆ. ಏಳು ವರ್ಷಗಳಿಂದ ನಗರದಲ್ಲಿ ಒಟ್ಟು 23 ಮಂದಿ ಬೋಡೊ ಕಮಾಂಡರ್ ಗಳು ಸೆರೆಯಾಗಿದ್ದಾರೆ. 2008ರ ಜೂನ್ ನಲ್ಲಿ ಅಸ್ಸಾಂ ವಿಮೋಚನಾ ಸಂಯುಕ್ತ ರಂಗದ (ಉಲ್ಫಾ) ನಾಯಕರನ್ನು ಹೆಣ್ಣೂರಿನಲ್ಲಿ, ನಂತರ ಮಣಿಪುರದ ಜನ ವಿಮೋಚನಾ ಸೇನೆಯ ಇಬ್ಬರು ಬೆಂಬಲಿಗರು ಪೊಲೀಸರಿಗೆ ಸಿಕ್ಕಿಬಿದ್ದರು. 2009ರಲ್ಲಿ ಮಣಿಪುರದ ಪಿಯುಎಲ್ಎಫ್ ಮುಖಂಡರ ಬಂಧನ, 2010ರ ಅ.8ರಂದು ಜೆ.ಪಿ.ನಗರ ಪೊಲೀಸರು ಎನ್ ಡಿಎಫ್ ಬಿ ಸಂಘಟನೆಯ ಕಮಾಂಡರ್ ಗಳ ಸೆರೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.