ಜಿಲ್ಲಾ ಸುದ್ದಿ

ಯೋಗ ಧರ್ಮ ಅಥವಾ ಜಾತಿಗೆ ಸೀಮಿತವಾಗಿಲ್ಲ: ಯುಟಿ ಖಾದರ್

ಯೋಗ ಒಂದು ದೈಹಿಕ ವ್ಯಾಯಾಮದ ಪ್ರಕ್ರಿಯೆಯಾಗಿದ್ದು, ಅದು ಧರ್ಮ ಅಥವಾ ಜಾತಿಗೆ ಸೀಮಿತವಾಗಿಲ್ಲ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದ್ದಾರೆ.

ಯೋಗ ಧರ್ಮ ಅಥವಾ ಜಾತಿಗೆ ಸೀಮಿತವಾಗಿಲ್ಲ: ಯುಟಿ ಖಾದರ್
ಆರೋಗ್ಯ ಸಚಿವ ಯುಟಿ ಖಾದರ್
Published On :

ಬೆಂಗಳೂರು: ಯೋಗ ಒಂದು ದೈಹಿಕ ವ್ಯಾಯಾಮದ ಪ್ರಕ್ರಿಯೆಯಾಗಿದ್ದು, ಅದು ಧರ್ಮ ಅಥವಾ ಜಾತಿಗೆ ಸೀಮಿತವಾಗಿಲ್ಲ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ನಡೆದ  ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಪ್ರಾದೇಶಿಕ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಆಹಾರ, ಶಿಕ್ಷಣ, ಆರೋಗ್ಯ ಯಾವುದೇ ಒಂದು ಧರ್ಮಕ್ಕೆ ಸೀಮಿತವಲ್ಲ. ಹಾಗೆಯೇ ಯೋಗವೂ ಕೂಡಾ ಒಂದು ಧರ್ಮ ಅಥವಾ ಜಾತಿಗೆ ಸೀಮಿತವಾದದಲ್ಲ. ಇಷ್ಟಪಟ್ಟವರು ಯೋಗ ಮಾಡಬಹುದು. ಯೋಗದಲ್ಲಿ ನೀವು ಹೀಗೇ ಮಾಡಿ, ಒಂದೇ ಆಸನ ಮಾಡಿ, ಇದೇ ದಿಕ್ಕಿನಲ್ಲಿ ಮಲಗಿ, ಇದೇ ದಿಕ್ಕನಲ್ಲಿ ಏಳಿ ಎಂದು ಯಾರೂ ಹೇಳುವುದಿಲ್ಲ. ಯೋಗವನ್ನು ಒಂದು ವ್ಯಾಯಾಮದ ದೃಷ್ಟಿಯಲ್ಲಿ ನೋಡುವುದು ಒಳ್ಳೆಯದು ಎಂದು ಅವರು ಅಭಿಪ್ರಾಯ ಪಟ್ಟರು.

ಅಲ್ಲದೆ, "ದೇಶಾದ್ಯಂತ ಯೋಗ ದಿನ ಆಚರಿಸುವ ಕುರಿತು ಕೆಲ ಧಾರ್ಮಿಕ ಮುಖಂಡರುಗಳಲ್ಲಿಯೇ ಸಂಶಯಗಳಿದ್ದು, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮುಂದಾಗಬೇಕು. ಯೋಗದಿಂದ ಉತ್ತಮ ಆರೋಗ್ಯ ಪಡೆಯಬಹುದು ಎನ್ನುವುದು ರುಜುವಾತಾಗಿದೆ. ಹೀಗಾಗಿ ಯೋಗವನ್ನು ಒಂದು ನಿರ್ಧಿಷ್ಟ ಧರ್ಮಕ್ಕೆ ಮೀಸಲಿಡುವುದು ಅಥವಾ ಯೋಗವನ್ನು ಮಾಡುವುದರಿಂದ ಒಂದು ಧರ್ಮದ ಭಾಗವಾಗುತ್ತೇವೆ ಎಂದು ನಂಬುವುದು ಸರಿಯಲ್ಲ ಎಂದು ಅವರು ಹೇಳಿದರು.

ಇಡೀ ವಿಶ್ವವೇ ಜೂನ್ 21 ರಂದು ಯೋಗಾ ದಿನಾಚರಣೆ ಆಚರಿಸಲು ಮುಂದಾಗಿದೆ. ಆದರೆ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಯೋಗ ದಿನಾಚರಣೆ ಆಚರಿಸುತ್ತಿದೆ. ಯೋಗ ದಿನಾಚರಣೆ ಮಾಡುವ ಖಾಸಗಿಯವರಿಗೂ ರಾಜ್ಯ ಸರ್ಕಾರ ಸಹಕಾರ ನೀಡಲಿದೆ ಎಂದು ಯುಟಿ ಖಾದರ್ ಇದೇ ವೇಳೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.