ಜಿಲ್ಲಾ ಸುದ್ದಿ

ಖಾಸಗಿ ಬಸ್ ಡಿಕ್ಕಿ: ಕೆಎಸ್ ಆರ್‍ಟಿಸಿ ಚಾಲಕ ಸಾವು

ಮೈಸೂರು ರಸ್ತೆ, ಗೋಪಾಲನ್ ಮಾಲ್ ಬಳಿ ಖಾಸಗಿ ಬಸ್ ಡಿಕ್ಕಿ ಹೊಡೆದು ಕೆಎಸ್ಆರ್ ಟಿಸಿ ಚಾಲಕ ಮೃತಪಟ್ಟಿದ್ದಾರೆ. ಆದರೆ ಯುವಕನೊಬ್ಬ ಚಾಲಕನನ್ನು ತಳ್ಳಿದ್ದರಿಂದ ಬಸ್ ನ ಚಕ್ರಕ್ಕೆ ಸಿಲುಕಿ ಆತ ಮೃತಪಟ್ಟಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿರುವುದರಿಂದ ಇದು ಅಪಘಾತವೋ...

ಖಾಸಗಿ ಬಸ್ ಡಿಕ್ಕಿ: ಕೆಎಸ್ ಆರ್‍ಟಿಸಿ ಚಾಲಕ ಸಾವು
ಖಾಸಗಿ ಬಸ್ ಡಿಕ್ಕಿ: ಕೆಎಸ್ ಆರ್‍ಟಿಸಿ ಚಾಲಕ ಸಾವು (ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಮೈಸೂರು ರಸ್ತೆ, ಗೋಪಾಲನ್ ಮಾಲ್ ಬಳಿ ಖಾಸಗಿ ಬಸ್ ಡಿಕ್ಕಿ ಹೊಡೆದು ಕೆಎಸ್ಆರ್ ಟಿಸಿ ಚಾಲಕ ಮೃತಪಟ್ಟಿದ್ದಾರೆ. ಆದರೆ ಯುವಕನೊಬ್ಬ ಚಾಲಕನನ್ನು ತಳ್ಳಿದ್ದರಿಂದ ಬಸ್ ನ ಚಕ್ರಕ್ಕೆ ಸಿಲುಕಿ ಆತ ಮೃತಪಟ್ಟಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿರುವುದರಿಂದ ಇದು ಅಪಘಾತವೋ ಅಥವಾ ಕೊಲೆಯೋ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿ ಮೂಲದ ಮಹದೇವಪ್ಪ ಉಪ್ಪಾರ್ (46) ಮೃತರು. ಕೆಎಸ್ಆರ್ ಟಿಸಿ ಡಿಪೋ 1 ರ ಚಾಲಕರಾಗಿದ್ದ ಇವರು ಮಾಗಡಿ ರಸ್ತೆ ಗೊಲ್ಲರಹಟ್ಟಿಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಗೋಪಾಲನ್ ಮಾಲ್ ಸಮೀಪ ಬೆಳಿಗ್ಗೆ 9.45ರ ಸುಮಾರಿಗೆ ಪಾದಚಾರಿ ಮಾರ್ಗದಲ್ಲಿ ಮಹದೇವಪ್ಪ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಯುವಕ ಅವರ ಜತೆ ಜಗಳ ತೆಗೆದ. ಜಗಳ ವಿಕೋಪಕ್ಕೆ ತಿರುಗಿದಾಗ ಯುವಕ ಮಹದೇವಪ್ಪ ಅವರನ್ನು ತಳ್ಳಿದ. ರಸ್ತೆಗೆ ಬಿದ್ದ ಅವರ ತಲೆ ಮೇಲೆ ಬಸ್ ಹಿಂದಿನ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗೋಪಾಲನ್ ಮಾಲ್ ಬಳಿ ಮಹದೇವಪ್ಪ ಯಾವ ಕಾರಣಕ್ಕೆ ಬಂದಿದ್ದರು ಎಂಬ ಕಾರಣ ಗೊತ್ತಾಗಿಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಿನ್ನೆಲೆಯಲ್ಲಿ ಘಟನೆ ನಡೆದ ಸ್ಥಳದ ಅಕ್ಕಪಕ್ಕದಲ್ಲಿರುವ ಸಿಸಿ ಕ್ಯಾಮೆರಾ ವಿಡಿಯೋ ಪರಿಶೀಲಿಸಲಾಗುತ್ತಿದೆ. ಎಲ್ಲಾ ಕೋನಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡು ಬಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೆಂಟ್ರಲ್ ಸಂಚಾರ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.