ಕೋರ್ಟ್ ಅವಕಾಶ ಕೊಟ್ಟರೆ ಬಿಬಿಎಂಪಿಗೆ ಚುನಾವಣೆಗೆ ಸಿದ್ಧ
ಕೋರ್ಟ್ ಅವಕಾಶ ನೀಡಿದರೆ ಸರ್ಕಾರ ಬಿಬಿಎಂಪಿ ವಾರ್ಡ್ ಗಳನ್ನು ವಿಂಗಡಣೆ ಮಾಡಿ, ಒಂದು ತಿಂಗಳು ತಡವಾಗಿ ಚುನಾವಣೆ ನಡೆಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ...

ಬೆಂಗಳೂರು: ಕೋರ್ಟ್ ಅವಕಾಶ ನೀಡಿದರೆ ಸರ್ಕಾರ ಬಿಬಿಎಂಪಿ ವಾರ್ಡ್ ಗಳನ್ನು ವಿಂಗಡಣೆ ಮಾಡಿ, ಒಂದು ತಿಂಗಳು ತಡವಾಗಿ ಚುನಾವಣೆ ನಡೆಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಬಿಬಿಎಂಪಿ ವಾರ್ಡ್‍ಗಳನ್ನು ಅವೈಜ್ಞಾನಿಕವಾಗಿ ರಚಿಸಿರುವುದರಿಂದ ಅವುಗಳ ಪುನಾರಚನೆ ಆಗಬೇಕಿದೆ. ಅದರಂತೆ ಮೀಸಲು ಸೌಲಭ್ಯ ಒದಗಿಸಬೇಕಿದೆ. ಹೀಗಾಗಿ ವಿಚಾರ ಈಗ ಕೋರ್ಟ್‍ನಲ್ಲಿದೆ. ಒಂದು ವೇಳೆ ಕೋರ್ಟ್ ಅನುಮತಿ ನೀಡಿದರೆ ಸರ್ಕಾರ ಬಿಬಿಎಂಪಿ ವಾರ್ಡ್ ಗಳನ್ನು ವೈಜ್ಞಾನಿಕವಾಗಿ ಪುನಾರಾಚನೆ ಮಾಡುತ್ತದೆ. ಹಾಗೆಯೇ ಮೀಸಲು ಪಟ್ಟಿಯನ್ನೂ ಪ್ರಕಟಿಸುತ್ತದೆ. ಇದಕ್ಕಾಗಿ ಒಂದು ತಿಂಗಳ ಅವಕಾಶ ಬೇಕಿದ್ದು, ಆಗಸ್ಟ್ ಮೊದಲ ವಾರದ ವೇಳೆ ಚುನಾವಣೆ ನಡೆಸಲಾಗುತ್ತದೆ. ಕೋರ್ಟ್ ಅವಕಾಶನೀಡಿದ್ದರೆ ಈ ಹಿಂದೆಯೇ ಹೇಳಿದಂತೆ ಸರ್ಕಾರ ಕೋರ್ಟ್ ಸೂಚನೆಯಂತೆ ಚುನಾವಣೆ ನಡೆಸುತ್ತದೆ ಎಂದು ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಮೀಸಲು ಪಟ್ಟಿ ಸಲ್ಲಿಸುವಂತೆ ಚುನಾವಣಾ ಆಯೋಗ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದೆ. ಅದನ್ನಾಧರಿಸಿ ಸರ್ಕಾರ ಕಾನೂನು ತಜ್ಞರ ಜತೆ ಚರ್ಚಿಸುತ್ತಿದ್ದು, ಸದ್ಯದಲ್ಲೇ ಮೀಸಲು ಪಟ್ಟಿಯನ್ನು ಸಲ್ಲಿಸಲಾಗುತ್ತದೆ. ಆದರೆ ಈ ಮಧ್ಯೆ, ಕೆಲವು ಪಾಲಿಕೆ ಮಾಜಿ ಸದಸ್ಯರು ವಾರ್ಡ್ ವಿಂಗಡಣೆ ಮತ್ತು ಮೀಸಲು ನಿಗದಿ ವಿರೋಧಿಸಿ ಕೋರ್ಟ್ ಮೊರೆ ಹೋಗಿದ್ದಾರೆ. ಆದ್ದರಿಂದ ಇದನ್ನು ಸರ್ಕಾರದ ಚುನಾವಣೆ ಮುಂದೂಡುವ ತಂತ್ರ ಎನ್ನಲಾಗದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


