ಜಿಲ್ಲಾ ಸುದ್ದಿ

ಇಸ್ಪೀಟ್ ಆಟ: ಬಂಧಿಸಲು ಬೇಕು ಅನುಮತಿ

ಖಾಸಗಿ ಸ್ಥಳಗಳಲ್ಲಿ ಅಂದರ್-ಬಾಹರ್ ಇಸ್ಪೀಟ್ ಆಡಿದವರನ್ನು ಬಂಧಿಸುವ ಮುನ್ನ ಪೊಲೀಸರು ಸ್ಥಳೀಯ ಮ್ಯಾಜಿಸ್ಟ್ರೇಟ್ ಅವರ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ...

ಇಸ್ಪೀಟ್ ಆಟ: ಬಂಧಿಸಲು ಬೇಕು ಅನುಮತಿ
ಕರ್ನಾಟಕ ಹೈಕೋರ್ಟ್
Published On :

ಬೆಂಗಳೂರು: ಖಾಸಗಿ ಸ್ಥಳಗಳಲ್ಲಿ ಅಂದರ್-ಬಾಹರ್ ಇಸ್ಪೀಟ್ ಆಡಿದವರನ್ನು ಬಂಧಿಸುವ ಮುನ್ನ ಪೊಲೀಸರು ಸ್ಥಳೀಯ ಮ್ಯಾಜಿಸ್ಟ್ರೇಟ್ ಅವರ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಂದರ್-ಬಾಹರ್ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ಅಬ್ದುಲ್ ಲತೀಫ್ ಸೇರಿ 50ಕ್ಕೂ ಹೆಚ್ಚು ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಲತೀಫ್ ಸೇರಿ
ಹಲವಾರು ಜನ ಎಫ್ಐಆರ್ ರದ್ದುಪಡಿಸುವಂತೆ ಕೋರಿ 16 ಅರ್ಜಿಗಳನ್ನು ಹೈಕೋರ್ಟ್‍ನಲ್ಲಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ವೇಣುಗೊಪಾಲ ಗೌಡ ಅವರಿದ್ದ ಏಕದಸ್ಯ ಪೀಠ ಅರ್ಜಿದಾರರು ಸಲ್ಲಿಸಿದ ಅರ್ಜಿ ಪುರಸ್ಕರಿಸಿ ಎಫ್ಐಆರ್ ರದ್ದುಪಡಿಸಿದೆ.

ಅರ್ಜಿದಾರರ ಪರ ವಕೀಲರಾದ ಅರುಣ್ ಶ್ಯಾಮ್ ಮತ್ತು ಪಿ.ಎನ್. ಹೆಗಡೆ ವಾದ ಮಂಡಿಸಿ, ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 79 ಮತ್ತು 80ರ ಅನುಸಾರ, ಜೂಜು ಮತ್ತು ಹಣವನ್ನು ಪಣಕ್ಕೊಡ್ಡಿ ಆಡುವ ಆಟಗಳನ್ನು ನಿಯಂತ್ರಿಸಲು ಪೊಲೀಸರಿಗೆ ಕಾನೂನು ಪ್ರಕಾರ ಅಧಿಕಾರವಿದೆ. ಆದರೆ, ಸಿಆರ್‍ಪಿಸಿ ಕಲಂ 155ರ ಪ್ರಕಾರ ದಾಳಿ ಮಾಡಬೇಕಾದಲ್ಲಿ ಸ್ಥಳೀಯ
ಮ್ಯಾಜಿಸ್ಟ್ರೇಟ್ ಅವರ ಪೂರ್ವಾನುಮತಿ ಪಡೆಯಬೇಕು. ಆದರೆ, ಪೊಲೀಸರು ಯಾವುದೇ ಪೂರ್ವಾನುಮತಿ ಪಡೆಯದೇ ದಾಳಿ ನಡೆಸಿ ಎಫ್ಐಆರ್ ದಾಖಲಿಸುವುದು ಮತ್ತು ದೋಷಾರೋಪ ಪಟ್ಟಿ ಸಿದ್ಧಪಡಿಸುವುದು ಕಾನೂನು ಬಾಹಿರ. ಅಲ್ಲದೇ ಈ ಪ್ರಕರಣಗಳಲ್ಲಿನ ಎಲ್ಲ ಆರೋಪಿಗಳೂ ಖಾಸಗಿ ಸ್ಥಳವೆನಿಸಿದ ಫ್ಲ್ಯಾಟ್  ಒಂದರಲ್ಲಿ ಅಂದರ್ ಬಾಹರ್ ಆಡಿದ್ದಾರೆ. ಇವರ ಆಟದಿಂದ ತೊಂದರೆ ಆಗಿರುವುದಾಗಿ ಯಾವೊಬ್ಬ ಸಾರ್ವಜನಿಕರೂ ಪೊಲೀಸರಿಗೆ ದೂರು ನೀಡಿಲ್ಲ.

ಬದಲಿಗೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ಎಂಬ ನೆಪದಲ್ಲಿ ಕಾರ್ಯಾಚರಣೆ ನಡೆಸಿ ಆಟಗಾರರನ್ನು ಬಂಧಿಸಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ. ಪೊಲೀಸ್ ಕಾಯ್ದೆ 79 ಮತ್ತು 80ರ ಅಡಿ ಈ ರೀತಿ ದಾಳಿ ಮಾಡುವ ಅವಕಾಶವೇ ಇಲ್ಲ. ಆದ್ದರಿಂದ ಆರೋಪಿಗಳ ವಿರುದ್ಧ ದಾಖಲಾಗಿರುವ ಎಲ್ಲ ಎಫ್ಐಆರ್‍ಗಳನ್ನು ರದ್ದುಪಡಿಸಬೇಕು ಎಂದು ಕೋರಿದರು. ಅರ್ಜಿದಾರರ ಪರ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಪೀಠವು 16 ಪ್ರಕರಣಗಳ ಎಫ್ಐಆರ್ ರದ್ದುಗೊಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.