ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ
ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವ ಮೊದಲು ಶಾಲೆಗಳು ಇಲಾಖಾ ಅನುಮತಿ ಪತ್ರಗಳನ್ನು ಪಡೆದಿರುವ ಬಗ್ಗೆ ದೃಢೀಕರಿಸಿಕೊಳ್ಳಬೇಕೆಂದು ಶಿಕ್ಷಣ ಇಲಾಖೆ ಸಲಹೆ ನೀಡಿದೆ...

ಬೆಂಗಳೂರು: ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವ ಮೊದಲು ಶಾಲೆಗಳು ಇಲಾಖಾ ಅನುಮತಿ ಪತ್ರಗಳನ್ನು ಪಡೆದಿರುವ ಬಗ್ಗೆ ದೃಢೀಕರಿಸಿಕೊಳ್ಳಬೇಕೆಂದು ಶಿಕ್ಷಣ ಇಲಾಖೆ ಸಲಹೆ ನೀಡಿದೆ.
ಕೆಲ ಖಾಸಗಿ ಶಾಲೆಗಳು 2015-16ನೇ ಸಾಲಿಗೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳನ್ನು ತೆರೆಯಲು ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಆ ಪ್ರಸ್ತಾವನೆಗಳನ್ನು ಈಗಾಗಲೇ ಇಲಾಖೆ ವತಿಯಿಂದ ಪರಿಶೀಲಿಸಿ ಆಯಾಯ ಹಂತದಲ್ಲಿ ಅನುಮತಿ ನೀಡಲಾಗಿದೆ. ಅದಲ್ಲದೆ ಕೆಲವು ಪ್ರಸ್ತಾವನೆಗಳನ್ನು ನಿಯಮಾನುಸಾರ ಮಾಹಿತಿಗಳು ಇಲ್ಲದೆ ಇರುವುದರಿಂದ ತಿರಸ್ಕರಿಸಲಾಗಿದೆ. ಅಂಥವರು ಶಾಲೆಗಳನ್ನು ತೆರೆಯಲು ಮಕ್ಕಳನ್ನು ದಾಖಲಿಸಿಕೊಳ್ಳಲು ಪ್ರಯತ್ನಿಸಿರುವುದು ಕಂಡುಬಂದಿದ್ದು, ಈಗಾಗಲೇ ಅಂಥ ಶಾಲೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ. ಅಲ್ಲದೇ ಅನಧಿಕೃತ ಶಾಲೆಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದೆ.
ಉತ್ತರ ವಲಯ-1
ವಿದ್ಯಾ ಪಬ್ಲಿಕ್ ಶಾಲೆ- ಕಮ್ಮಗೊಂಡನಹಳ್ಳಿ , ಮಾಗಡಿ ಕೆಂಪೇಗೌಡ ಶಾಲೆ- ಕಾಮಾಕ್ಷಿಪಾಳ್ಯ, ಶೀಬಾ ಶಾಲೆ- ಕಾಮಾಕ್ಷಿಪಾಳ್ಯ, ಎಸ್.ಬಿ.ಐ.ಓ.ಎ. ಶಾಲೆ- ಬಸವೇಶ್ವರನಗರ, ಶ್ರೀ ರಾಘವೇಂದ್ರ ಶಾಲೆ- ಕಾಮಾಕ್ಷಿಪಾಳ್ಯ, ಜಿ.ಕೆ.ಕಾನ್ವೆಂಟ್- ಬಸವೇಶ್ವರನಗರ, ಕಿಡ್ಸ್ ಕ್ಯಾಂಪಸ್ ಇಂಟರ್‍ನ್ಯಾಷನಲ್ ಶಾಲೆ- ನಂದಿನಿ ಲೇಔಟ್, ನ್ಯೂ ಕೇಂಬ್ರಿಡ್ಜ್ ಶಾಲೆ-ನೆಲದರನಹಳ್ಳಿ, ಹೊಯ್ಸಳ ವಿದ್ಯಾಸಂಸ್ಥೆ- ಶ್ರೀಗಂಧ ಕಾವಲು, ಸ್ಮಾರ್ಟ್ ಕಿಡ್ಸ್ ಶಾಲೆ- ಮಾಚಿಹಳ್ಳಿ, ನ್ಯೂ ಕಾರ್ಮೆಲ್ ಶಾಲೆ- ನಂದಿನಿ ಲೇಔಟ್, ಪರಿಕ್ರಮ ಶಾಲೆ- ನಂದಿನಿ ಲೇಔಟ್, ಎಸ್‍ಟಿ. ಸೋಫಿಯಾ ಶಾಲೆ-ಜೆ.ಸಿ.ನಗರ, ನ್ಯೂ ಶಾಂತಿನಿಕೇತನ ಶಾಲೆ- ಕಮಲಾನಗರ, ನ್ಯೂ ಆಕ್ಸ್ ಫರ್ಡ್ ಶಾಲೆ-ರಾಜಾಜಿನಗರ, ಗೋಕುಲ ಕಾನ್ವೆಂಟ್-ರಾಜಾಜಿನಗರ, ಖೋಡೆ ಶಾಲೆ- ರಾಜಾಜಿನಗರ, ಬ್ರೈಟ್ ಶಾಲೆ- ಶಿವನಗರ, ಅರುಣೋದಯ ಶಾಲೆ- ವಿಘ್ನೇಶ ನಗರ, ಸೆಂಟ್ ಜಾನ್ಸ್ ಶಾಲೆ- ಹೇರೋಹಳ್ಳಿ, ಚೇತನ್ ಕಾನ್ವೆಂಟ್- ಬ್ಯಾಡರಹಳ್ಳಿ, ಇಂಡೋ ಅಮೆರಿಕನ್ ಶಾಲೆ- ರಾಜಗೋಪಾಲನಗರ, ಸನ್ಮತಿ ಶಾಲೆ- ಹೆಗ್ಗನಹಳ್ಳಿ, ಬಿಷಪ್ ಕಾರ್ಮೆಲ್ ಶಾಲೆ- ಹೆಗ್ಗನಹಳ್ಳಿ, ವಿಶ್ವಭಾರತಿ ಶಾಲೆ- ಉಳ್ಳಾಲ ಉಪನಗರ, ಲಯನ್ ಸೇವಾ ಭಾರತಿ- ಉಳ್ಳಾಲ ಉಪನಗರ, ಐಎಸ್‍ಎನ್‍ಆರ್ ಕಾನ್ವೆಂಟ್- ಕೊಡಿಗೆಹಳ್ಳಿ, ವಿದ್ಯಾಪ್ರಿಯ ಶಾಲೆ- ಲಗ್ಗೆರೆ, ಬಿಟಿಜಿ ಶಾಲೆ-ಲಗ್ಗೆರೆ, ಅನಸ ಶಾಲೆ- ಲಕ್ಷ್ಮಿದೇವಿನಗರ, ಸ್ಮಾರ್ಟ್‍ಪರ್ಲ್ ಶಾಲೆ- ಮಾಚೋಹಳ್ಳಿ, ನಾಡಿಗಿರ್ ಶಾಲೆ- ಮಾದವಾರ, ಪತ್ರಶಾಲೆ- ಉಳ್ಳಲು, ನಳಂದ ಕ್ರೆಂಟ್ ಸಹಕಾರ ಸಂಘ-ಬಸವೇಶ್ವರ ನಗರ, ವಾಣಿ ವಿದ್ಯಾಮಂದಿರ- ಲಗ್ಗೆರೆ, ವೆಂಕಟ್ ಶಾಲೆ- ಮಾಚೋಹಳ್ಳಿ,ಲಂಡನ್ ನೊಬೆಲ್ ಶಾಲೆ- ಅಂದ್ರಹಳ್ಳಿ, ಮಿತ್ರವೃಂದ ವಿದ್ಯಾಲಯ, ಜೆ.ಸಿ.ನಗರ. ವಿದ್ಯಾಸದನ್ ಶಾಲೆ- ಕಮಲನಗರ, ಕೆ.ಎಸ್.ಆರ್.ಎಸ್. ಪಬ್ಲಿಕ್ ಶಾಲೆ-ರಾಜಾಜಿನಗರ, ಅರೈಸ್ ಅವೇಕ್ ಶಾಲೆ, ಸುಂಕದಕಟ್ಟೆ, ಮದರ್ ಪಬ್ಲಿಕ್ ಶಾಲೆ- ಜೆ.ಸಿ.ನಗರ, ಐ.ಆರ್.ಪಬ್ಲಿಕ್ ಶಾಲೆ-ಲಗ್ಗೆರೆ, ಪಿ.ಎಸ್.ಎಂ. ಶಾಲೆ- ಮಾದನಾಯಕನಹಳ್ಳಿ, ಎಸ್.ಎಸ್.ಐ.ಪಿ.ಶಾಲೆ- ಮಾದನಾಯಕನಹಳ್ಳಿ, ಶ್ರೀಗಂಧ
ವಿದ್ಯೋದಯ ಶಾಲೆ- ಶ್ರೀಗಂಧ ಕಾವಲು, ಬ್ರಿಲಿಯಂಟ್ ಪಬ್ಲಿಕ್ ಶಾಲೆ- ಶ್ರೀಗಂಧ ಕಾವಲು, ಹೋಲಿ ಏಂಜೆಲ್ ಬಾಲಾಜಿ ನಗರ, ಇಂಡಿಯನ್ ನ್ಯಾಷನಲ್ ಶಾಲೆ- ಮಾದನಾಯಕನಹಳ್ಳಿ, ವಿದ್ಯಾ ಸಾಮ್ರಾಟ್ ಶಾಲೆ- ಬ್ಯಾಡರಹಳ್ಳಿ.
ದಕ್ಷಿಣವಲಯ-3
ಸೇಂಟ್ ಜಾನ್ ಆಫ್ ಆರ್ಚ್ ಫೌಂಡೇಷನ್ ಶಾಲೆ- ಎಚ್.ಎಸ್.ಆರ್. ಲೇಔಟ್, ಲಾರೆನ್ಸ್ ಪ್ರಾಥಮಿಕ ಶಾಲೆ- ತಿಲಕ್‍ನಗರ, ದಿಅಲೈಯನ್ಸ್ ಶಾಲೆ- ಆಸ್ಟಿನ್ ಟೌನ್, ಸನ್ ರೈಸ್ ಶಾಲೆ- ನೀಲಸಂದ್ರ, ರಾಜೀವ್‍ಗಾಂಧಿ ಮೆಮೋರಿಯಲ್ ಸ್ಕೂಲ್- ಅಂಬೇಡ್ಕರ್ ನಗರ, ಎಸ್.ಕೆ.ಆಂಗ್ಲ ಶಾಲೆ- ಮಂಗಮ್ಮನ ಪಾಳ್ಯ, ಆಲ್ ನೂರ್ ಶಾಲೆ- ಮಂಗಮ್ಮನ ಪಾಳ್ಯ, ಡ್ಯಾನಿಯಲ್ ಶಾಲೆ- ಮಂಗಮ್ಮನ ಪಾಳ್ಯ, ಸೆಂಟ್ ಸಾರಾಸ್ ಇಂಗ್ಲಿಷ್ ಸ್ಕೂಲ್- ವಿನಾಯಕನಗರ, ಎಂ.ಇ.ಎಸ್, ಆಂಗ್ಲ ಶಾಲೆ- ಜಯನಗರ 4ನೇ ಬ್ಲಾಕ್, ಮದರ್ ಮೇರಿ ಆಂಗ್ಲ ಶಾಲೆ- ಹೊಸಗುರಪ್ಪನಪಾಳ್ಯ, ಮದರ್‍ಥೆರೆಸಾ ಶಾಲೆ- ಹುಳಿಮಾವು, ಹೊಂಗಸಂದ್ರ, ಆ್ಯಕ್ಟಿವ್ ಪಬ್ಲಿಕ್ ಸ್ಕೂಲ್, ಹೊಮ್ಮದೇವನಹಳ್ಳಿ, ಸಹನಾ ವಿದ್ಯಾಮಂದಿರ- ನಾಗನಾಥಪುರ, ಜ್ಞಾನಭಾರತಿ ಶಾಲೆ- ಕೋಣನಕುಂಟೆ, ವಿದ್ಯಾನಿಕೇತನ್ ಶಾಲೆ- ಜರಗನಹಳ್ಳಿ, ಸಿಲ್ವರ್ ಸ್ಟ್ರಿಂಗ್ ಶಾಲೆ- ಪುಟ್ಟೇನಹಳ್ಳಿ, ವಾತ್ಸಲ್ಯ ಶಾಲೆ- ಕೊತ್ತನೂರು, ಅಂಕಿತ ಶಾಲೆ- ಹುಳಿಮಾವು, ಸೇಂಟ್ ಪೀಟರ್ ಶಾಲೆ- ಹುಳಿಮಾವು, ಮದರ್ ಥೆರೆಸಾ ಶಾಲೆ-ಹುಳಿಮಾವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


