ಜಿಲ್ಲಾ ಸುದ್ದಿ

ಡಾ.ಕಲಾಂ, ಕರೀಂಖಾನ್, ಕೈಲಾಸಂ ಖಾಸಗಿ ಜೀವನದಲ್ಲಿ ಇತರರಿಗೆ ಮಾದರಿ

ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಸಾಹಿತಿ ಡಾ.ಕರೀಂ ಖಾನ್ ಮತ್ತು ನಾಟಕಕಾರ ಕೈಲಾಸಂ ಈ ಮೂವರು ಮಹಾನ್ ವ್ಯಕ್ತಿಗಳಾಗಿದ್ದರೂ ತಮ್ಮ ಖಾಸಗಿ ಜೀವನಕ್ಕೆ ಹೆಚ್ಚಿನ ಮಹತ್ವ ನೀಡದೆ ಸಮಾಜಕ್ಕಾಗಿ ದುಡಿದ ಮಹನೀಯರು ಎಂದು ಸಾಹಿತಿ ಡಾ.ಕೆ. ಮರುಳಸಿದ್ದಪ್ಪ...

ಡಾ.ಕಲಾಂ, ಕರೀಂಖಾನ್, ಕೈಲಾಸಂ ಖಾಸಗಿ ಜೀವನದಲ್ಲಿ ಇತರರಿಗೆ ಮಾದರಿ
ಸಾಹಿತಿ ಡಾ.ಕೆ. ಮರುಳಸಿದ್ದಪ್ಪ
Published On :

ಬೆಂಗಳೂರು: ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಸಾಹಿತಿ ಡಾ.ಕರೀಂ ಖಾನ್ ಮತ್ತು ನಾಟಕಕಾರ ಕೈಲಾಸಂ ಈ ಮೂವರು ಮಹಾನ್ ವ್ಯಕ್ತಿಗಳಾಗಿದ್ದರೂ ತಮ್ಮ ಖಾಸಗಿ ಜೀವನಕ್ಕೆ ಹೆಚ್ಚಿನ ಮಹತ್ವ ನೀಡದೆ ಸಮಾಜಕ್ಕಾಗಿ ದುಡಿದ ಮಹನೀಯರು ಎಂದು ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಶ್ಲಾಘಿಸಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾರ ಕನ್ನಡ ಜನಶಕ್ತಿ ಕೇಂದ್ರ ಹಮ್ಮಿಕೊಂಡಿದ್ದ ನಾಯಕ ಕಾರಟಿ. ಪಿ.ಕೈಲಾಸಂ ಮತ್ತು ಜನಪದ ಸಾಹಿತಿ ಎಸ್.ಕೆ.ಕರೀಂಖಾನ್ ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಮೂವರು ವ್ಯಕ್ತಿಗಳು ಬಿsನ್ನ ಹಿನ್ನೆಲೆಯಿಂದ ಬಂದಿದ್ದರೂ ದೇಶಕ್ಕಾಗಿ ದುಡಿದವರು ಮತ್ತು ತಮ್ಮ ಖಾಸಗಿ ಜೀವನದಲ್ಲಿ ಇತರರಿಗೆ ಮಾದರಿಯಾಗಿ ಬದುಕಿದವರು ಎಂದು ತಿಳಿಸಿದರು. ಹಾಸ್ಯಕವಿ ಹಾಗೂ ಉತ್ತಮ ವಾಗ್ಮಿ ವೈ.ವಿ.ಗುಂಡೂರಾವ್ ಕೈಲಾಸಂ ಕುರಿತು ಮಾತನಾಡಿ ಸಮಾಜದ ಅಂಕುಡೊಂಕುಗಳನ್ನು ಹಾಸ್ಯದ ಮೂಲಕ ಪ್ರಸ್ತುತಪಡಿಸಿ ಸಮಾಜ ತಿದ್ದುವ ಕೆಲಸ ಮಾಡಿದರು.ಕೈಲಾಸಂ ನಾಟಕಗಳಲ್ಲಿ ಕಲ್ಪನೆಗಳಿರಲಿಲ್ಲ. ಬದಲಿಗೆ ಪ್ರಸ್ತುತ ಸಮಾಜದ ಸ್ಥಿತಿಗತಿಗಳನ್ನು ಹಾಸ್ಯದ ಮೂಲಕ ತಿಳಿಸಿದ್ದಾರೆ.

ನಾಟಕಗಳಲ್ಲಿ ಹಾಸ್ಯ ಪ್ರಧಾನವಾಗಿದ್ದರೂ ಶಿಕ್ಷಣಕ್ಕೆ ಒತ್ತುನೀಡಿರುವುದನ್ನು ಕಾಣಬಹುದು ಎಂದು ಹೇಳಿದರು.  ಜಾನಪದ ವಿದ್ವಾಂಸ ಡಾ.ಚಕ್ಕರೆ ಶ್ರೀನಿವಾಸ್ ಮಾತನಾಡಿ, ಮುಸ್ಲಿಮರ ದರ್ಗಾಗಳಲ್ಲಿ ಗಂಧ ಹಾಗೂ ಸಕ್ಕರೆ ಹಂಚುವಂತೆ ಡಾ.ಕರೀಂಖಾನ್ ಮತ್ತು ಡಾ.ಅಬ್ದುಲ್ ಕಲಾಂ ತಮ್ಮ ಜೀವನವನ್ನು ಗಂಧದ ರೀತಿ ತೇಯ್ದು ಸಮಾಜಕ್ಕೆ ಸಕ್ಕರೆಯಂತೆ ಸಿಹಿ ಹಂಚಿದರು ಎಂದು ಬಣ್ಣಿಸಿದರು.

ಕರೀಂಖಾನ್ ಶ್ರೇಷ್ಠ ಜನಪದ ಸಾಹಿತಿಯಾಗಿದ್ದರೂ ಅವರ ಜೀವನ ಮಾತ್ರ ಶೋಷಣೆ, ಸಂಕಟ, ಯಾತನೆಗಳಿಂದ ಕೂಡಿತ್ತು. ಜೀವನ ನಡೆಸಲು ಜನಪದ ಸಾಹಿತ್ಯ ಕುರಿತ ಪುಸ್ತಕಗಳನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ವಿಷಾದಿಸಿದರು. ಅವರು ಕೇವಲ ಜನಪದ ಸಾಹಿತಿಯಾಗಿರಲಿಲ್ಲ. ಹನ್ನೊಂದು ದೇವರ ಕುರಿತ ಭಕ್ತಿಗೀತೆ, ಕಾದಂಬರಿ ಹಾಗೂ ಸೃಜನಶೀಲ ಬರವಣಿಗೆ ಹೊಂದಿದ್ದರು. ಆದ್ದರಿಂದ ಅವರನ್ನು ಕೇವಲ ಜನಪದಕ್ಕೆತ ಸೀಮಿತಗೊಳಿಸುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.