ಮನ ತಣಿಸುತ್ತಿವೆ ಕಬ್ಬನ್‍ಪಾರ್ಕ್, ಲಾಲ್‍ಬಾಗ್
ವಾಹನ ರಹಿತ ಕಬ್ಬನ್ ಪಾರ್ಕ್ ವಾರದಿಂದ ವಾರಕ್ಕೆ ರಂಗು ಪಡೆದುಕೊಳ್ಳುತ್ತಿದ್ದು, ನಿರೀಕ್ಷೆಗೂ ಮೀರಿ ಇಲ್ಲಿಗೆ ನ ಬರಲು ಆರಂಭಿಸಿದ್ದಾರೆ. ಭಾನುವಾರ ಕಬ್ಬನ್ ಪಾರ್ಕಿನಲ್ಲಿ ವಾಹನ ಸಂಚಾರ ನಿಷೇಧಿಸಿರುವ ಜತೆಗೆ...

ಬೆಂಗಳೂರು: ವಾಹನ ರಹಿತ ಕಬ್ಬನ್ ಪಾರ್ಕ್ ವಾರದಿಂದ ವಾರಕ್ಕೆ ರಂಗು ಪಡೆದುಕೊಳ್ಳುತ್ತಿದ್ದು, ನಿರೀಕ್ಷೆಗೂ ಮೀರಿ ಇಲ್ಲಿಗೆ ನ ಬರಲು ಆರಂಭಿಸಿದ್ದಾರೆ. ಭಾನುವಾರ ಕಬ್ಬನ್ ಪಾರ್ಕಿನಲ್ಲಿ ವಾಹನ ಸಂಚಾರ ನಿಷೇಧಿಸಿರುವ ಜತೆಗೆ ಹೂವಿನ ಕುಂಡಗಳ ಪ್ರದರ್ಶನ, ಸಾವಯವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಮಾರಾಟವು ಇನ್ನಷ್ಟು ಜನಪ್ರಿಯತೆಗೆ ಕಾರಣವಾಗಿದೆ.
ಕೇವಲ ಟಿವಿ, ಮೊಬೈಲು, ಕಂಪ್ಯೂಟರ್‍ನೊಳಗೆ ಮುಳುಗುತ್ತಿದ್ದ ಮಕ್ಕಳೆಲ್ಲರೂ ಜೋಕಾಲಿ, ಕಣ್ಣಾಮುಚ್ಚಾಲೆ, ಕ್ರಿಕೆಟ್ ಹೀಗೆ ಪಾರ್ಕ್‍ಗಿಳಿದು ಆಡುತ್ತಿದ್ದ ದೃಶ್ಯ ಗಳು ವಿಶೇಷವಾಗಿ ಕಂಡುಬಂದವು. ಕೇವಲ ವಾಯು ವಿಹಾರಕ್ಕೆಂದು ಬರುತ್ತಿದ್ದವರು ಇದೀಗ ಮನರಂಜನೆ ಕೂಡ ಪಡೆಯುವಂತಾಗಿದೆ. ವಾರದಿಂದ ವಾರಕ್ಕೆ ಹೊಸ ಹೊಸ ಪ್ರಯೋಗ ನಡೆಯುತ್ತಿದ್ದು, ಈ ವಾರ ಪರಿಸರದಲ್ಲಿ ಹಾವುಗಳ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವ ಚಾರ್ಕೋಲ್ ಆಟ್ರ್ಸ್, ವನ್ಯಜೀವಿ ಚಿತ್ರಕಲಾ ಪ್ರದರ್ಶನ ನಡೆಯಿತು.
ಕಳೆದ ಬಾರಿ ಅಣಬೆ ಬೇಸಾಯದ ಕುರಿತು ಪ್ರಾತ್ಯಕ್ಷಿಕೆ ನೀಡಿದರೆ ಈ ಬಾರಿ ಜೇನು ಕೃಷಿ ಕುರಿತು ಪ್ರಾತ್ಯಕ್ಷಿಕೆ ಮತ್ತು ತರಬೇತಿ ತೋಟಗಾರಿಕೆ ಇಲಾಖೆಯಿಂದ ನಡೆಯಿತು. ಘನತ್ಯಾಜ್ಯ ನಿರ್ವಹಣೆ ಮತ್ತು ಅಡುಗೆ ಮನೆಯಲ್ಲಿನ ತ್ಯಾಜ್ಯ ಉಪಯೋಗಿಸಿ ಗೊಬ್ಬರ ಉತ್ಪತ್ತಿ ಮಾಡುವುದರ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅಲ್ಲಿಗೆ ಬಂದಿದ್ದ ಜನರ ಅರಿವಿಗೆ ತಂದರು. ಉದಯರಾಗದಲ್ಲಿ ರಕ್ಷಾ ಹಾಗೂ ಶ್ರೀಕೃಪಾ ಅವರಿಂದ ಮೂಡಿಬಂದ ಸಂಗೀತ ಕಾರ್ಯಕ್ರಮ ಇಡೀ ವಾತಾವರಣವನ್ನು ಮುದಗೊಳಿಸಿದರೆ, ನಂತರ ಕರ್ನಾಟಕ ರಾಜ್ಯ ಮೀಸಲು ಪಡೆಯಿಂದ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ನಡೆಯಿತು. ಜತೆಗೆ ಬೆಳಗ್ಗೆ 7ಕ್ಕೆ ಯುನಿವರ್ಸ್ ಆಟ್ರ್ಸ್ ಫೌಂಡೇಷನ್ ಸಹಯೋಗದಲ್ಲಿ ಮಾ.ಸಾಯಿ ವಂಶಿಯವರಿಂದ ಮೃದಂಗ ವಾದನ ಮೂಡಿಬಂತು. ಬೆಳಗ್ಗೆ 9ರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಾಟ್ಯಾಂತರಂಗ ಸಂಸ್ಥೆಯವರಿಂದ ನೃತ್ಯ ವೈಭವ, ಭರತನಾಟ್ಯ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ ಜರುಗಿತು. ಜತೆಗೆ ಸಂ.4ರಿಂದ 5ರವರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಜಾಣಗೆರೆ ವೆಂಕಟರಾಮಯ್ಯ ಅವರಿಂದ ಕನ್ನಡ ಚಿಂತನ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಜೈವಿಕ್ ಕೃಷಿಕ್ ಸೊಸೈಟಿಯಿಂದ ಸಾವಯವ ಪದಟಛಿತಿಯಲ್ಲಿ ಬೆಳೆದ ಮಾವು, ಪಪ್ಪಾಯ, ಏಲಕ್ಕಿ ಬಾಳೆ, ಸೀಬೆಹಣ್ಣಿನ ಜ್ಯೂಸ್, ಮಾವಿನ ಹಣ್ಣಿನ ಫೇವರೆಟ್ ಬಾರ್‍ಹಲಸಿನ ಚಿಪ್ಸ್ ಸಾವಯವ ಆಹಾರ ಪದಾರ್ಥಗಳ ಮಾರಾಟವೂ ಇತ್ತು. ಲಾಲ್‍ಬಾಗ್‍ದಲ್ಲಿ ಸಂಧ್ಯಾರಾಗ, ಉದಯರಾಗ: ಲಾಲ್‍ಬಾಗ್‍ನಲ್ಲಿ ಕೂಡ ಕಬ್ಬನ್ ಉದ್ಯಾನದ ರೀತಿಯಲ್ಲೇ ಈ ವಾರದಿಂದ ಉದಯರಾಗ ಹಾಗೂ ಸಂಧ್ಯಾರಾಗಗಳು ಪ್ರಾರಂಭವಾಗಿದೆ. ಬೆಳಗ್ಗೆ 7ರಿಂದ 8.30ರವರೆಗೆ ಕೆಎಸ್‍ಆರ್‍ಪಿಯವರಿಂದ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ನಡೆಯಿತು.
ವಿಘ್ನೇಶ್ವರ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಗಂಧದಗುಡಿ, ಆಕಸ್ಮಿಕ ಚಿತ್ರಗಳ ಹಾಡು ಸೇರಿದಂತೆ ಕನ್ನಡ ಮತ್ತು ಹಿಂದಿ ಚಲನಚಿತ್ರ ಗೀತೆಗಳು ಸೇರಿ ಸುಮಾರು 15ರಿಂದ 20 ಹಾಡುನುಡಿಸಿ ಗಮನ ಸೆಳೆದರು. ಸುಮಾರು 700ರಿಂದ 800ಮಂದಿ ಈ ವೇಳೆ ಪಾಲ್ಗೊಂಡಿದ್ದರು. ಬೆಳಗ್ಗೆ 8.30ರಿಂದ 9.30ರವರೆಗೆ ರಾಯಚೂರಿನ ಅಂಬಯ್ಯ ನುಲಿಯವರಿಂದ ವಚನ ಗಾಯನ, ಜಾನಪದಗೀತೆ, ದಾಸರಪದಗಳು ಮೂಡಿಬಂದವು. ಸಂಧ್ಯಾರಾಗದಲ್ಲಿ 5ರಿಂದ 6ರವರೆಗೆ ಲಕ್ಷ್ಮಣ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


