ಸಾಂಸ್ಕೃತಿಕ ತಾಣ ವಾದ ಕಬ್ಬನ್‍ಪಾರ್ಕ್
ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಎಂದಿನಂತೆ ಪ್ರತಿ ಭಾನುವಾರ ನಾನಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ವಾರ ಬೆಳಗ್ಗೆ 7ರಿಂದ ಪರಿಸರದಲ್ಲಿ ಹಾವುಗಳ...

ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಎಂದಿನಂತೆ ಪ್ರತಿ ಭಾನುವಾರ ನಾನಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ವಾರ ಬೆಳಗ್ಗೆ 7ರಿಂದ ಪರಿಸರದಲ್ಲಿ ಹಾವುಗಳ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸಲು ಚಾರ್ಕೋಲ್ ಆಟ್ರ್ಸ್, ವೈಲ್ಡ್ ಲೈಫ್ ಆರ್ಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 9ರಿಂದ 12ರವರೆಗೆ ಜೇನುಕೃಷಿ ಬಗ್ಗೆ ತೋಟಗಾರಿಕೆ ಉಪ ನಿರ್ದೇಶಕರು ತರಬೇತಿ ನೀಡಲಿದ್ದಾರೆ. ಇಷ್ಟೇ ಅಲ್ಲದೆ ಅಣಬೆ ಬೇಸಾಯದ ವಿವಿಧ ಹಂತಗಳ ಪ್ರಾತ್ಯಕ್ಷಿಕೆ ಮತ್ತು ಮಾರಾಟ ನಡೆಯಲಿದೆ. ಘನತ್ಯಾಜ್ಯ ನಿರ್ವಹಣೆ ಮತ್ತು ಅಡುಗೆ ಮನೆಯಲ್ಲಿನ ತ್ಯಾಜ್ಯ ಉಪಯೋಗಿಸಿ ಗೊಬ್ಬರ ಉತ್ಪತ್ತಿ ಮಾಡುವುದರ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿವಳಿಕೆ
ನೀಡಲಾಗುತ್ತದೆ.
ಬೆಳಗ್ಗೆ 7ರಿಂದ ಮಾ.ವಿಷ್ಣುವೆಂಕಟೇಶ್ ಅವರಿಂದ ಮ್ಯಾಂಡೊಲಿನ್ ವಾದನ, ಮಾ.ಸಾಯಿ ವಂಶಿಯವರಿಂದ ಮೃದಂಗ ವಾದನ ಕಾರ್ಯಕ್ರಮವನ್ನು ಯುನಿವರ್ಸ್ ಆಟ್ರ್ಸ್ ಫೌಂಡೇಶನ್ ಅವರ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಬೆಳಗ್ಗೆ 9ರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಾಟ್ಯಾಂತರಂಗ ಸಂಸ್ಥೆಯವರಿಂದ ನೃತ್ಯ ವೈಭವ, ಭರತನಾಟ್ಯಹಾಗೂ ಜಾನಪದ ನೃತ್ಯ ಕಾರ್ಯಕ್ರಮ ಜರುಗಲಿದೆ. ಸಂ.4ರಿಂದ 5ರವರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಅವರಿಂದ ಕನ್ನಡ ಚಿಂತನ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಉದಯರಾಗದಲ್ಲಿ 6ರಿಂದ ರಕ್ಷಾ ಹಾಗೂ ಕೃಪಾ ಅವರಿಂದ ಸಂಗೀತ ಕಾರ್ಯಕ್ರಮ, ಕರ್ನಾಟಕ ರಾಜ್ಯ ಮೀಸಲು ಪಡೆಯಿಂದ ಪೊಲೀಸ್ ಬ್ಯಾಂಡ್ ಹಾಗೂ ಸಂಧ್ಯಾರಾಗದಲ್ಲಿ ಅಪ್ಪಗೆರೆ ಸತೀಶ್ ಮತ್ತು ತಂಡದಿಂದ ಸಂಜೆ 5ಗಂಟೆಗೆ ಜಾನಪದ ಗೀತೆಗಳ ಗಾಯನ, ಸುಗಮ ಸಂಗೀತ ಕಾರ್ಯಕ್ರಮ ಮೂಡಿಬರಲಿದೆ.
ಇದರೊಂದಿಗೆ ಕುಂಡಗಳಲ್ಲಿ ಬೆಳೆಸಿರುವ ನಾನಾ ಬಗೆಯ ತರಕಾರಿ ಗಿಡಗಳ ಪ್ರದರ್ಶನ, ಕೈತೋಟಗಳಲ್ಲಿ ಬಳಸುವ ನಾನಾ ಬಗೆಯ ಸಲಕರಣೆಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯೂ ಇರುತ್ತದೆ. ಜತೆಗೆ ಔಷಧ ಗಿಡಗಳು ಹಾಗೂ ಅಂಗಾಂಶ ಕೃಷಿ ಬಾಳೆ ಗಿಡಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.. ಜೈವಿಕ್ ಕೃಷಿಕ್ ಸೊಸೈಟಿಯಿಂದ ಸಾವಯವ ಪದ್ಧತಿಯಲ್ಲಿ ಬೆಳೆದ ಮಾವು, ಪಪ್ಪಾಯ, ಏಲಕ್ಕಿ ಬಾಳೆ, ಸೀಬೆಹಣ್ಣಿನ ಜ್ಯೂಸ್, ಮಾವಿನ ಹಣ್ಣಿನ ಫ್ರೂಟ್ ಬಾರ್‍ಹಲಸಿನ ಚಿಪ್ಸ್ ಸಾವಯವ ಆಹಾರ ಪದಾರ್ಥಗಳ ಮಾರಾಟವನ್ನು ಕೈಗೊಳ್ಳಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


