ನೆಕ್ಲೆಸ್ ಕದ್ದು ಸಿಕ್ಕಿಬಿದ್ದ ಕಳ್ಳರು
ಗ್ರಾಹಕರ ಸೋಗಿನಲ್ಲಿ ಆಭರಣ ಮಳಿಗೆಗೆ ನುಗ್ಗಿ ನೆಕ್ಲೆಸ್ ಕದ್ದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರನ್ನು ಟ್ರಾಫಿಕ್ ಪೊಲೀಸ್ ...

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಆಭರಣ ಮಳಿಗೆಗೆ ನುಗ್ಗಿ ನೆಕ್ಲೆಸ್ ಕದ್ದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರನ್ನು ಟ್ರಾಫಿಕ್ ಪೊಲೀಸ್ ಕಾನ್ಸ್ ಟೇಬಲ್ ಬೆನ್ನಟ್ಟಿ ಹಿಡಿದಿದ್ದಾರೆ. ರಾಜಸ್ಥಾನ ಮೂಲದ ಕೈಲಾಶ್ (29) ಮತ್ತು ಸಂತೋಷ್ (18) ಬಂ„ತರು. ಸೆಂಟ್ರಲ್ ಟ್ರಾಫಿಕ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜೀಪ್ ಚಾಲಕರಾಗಿರುವ ದೊರೆಸ್ವಾಮಿ ಕಳ್ಳರನ್ನು ಹಿಡಿದ ಕಾನ್ಸ್ ಟೇಬಲ್. ಆರೋಪಿಗಳನ್ನು ಕೋರ್ಟ್‍ಗೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೈಲಾಶ್ ಮತ್ತು ಸಂತೋಷ್ ಚಿಕ್ಕಪೇಟೆಯಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ಚಾಮರಾಜಪೇಟೆ 4ನೇ ಮುಖ್ಯರಸ್ತೆಯ ಬಜಾಜ್ ಸ್ಟ್ರೀಟ್‍ನಲ್ಲಿರುವ ನೀಲ್‍ಕಮಲ್ ಆಭರಣ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ 10 ಗಂಟೆಗೆ ಬಂದಿದ್ದರು ಒಬ್ಬ ಆರೋಪಿ ಹೊಂಡಾ ಆ್ಯಕ್ಟಿವಾ ನಿಲ್ಲಿಸಿಕೊಂಡು ಒಬ್ಬ ಹೊರಗೆ ನಿಂತಿದ್ದು, ಮತ್ತೊಬ್ಬ ಗ್ರಾಹಕನಂತೆ ಅಂಗಡಿ ಪ್ರವೇಶಿಸಿದ್ದ. ಮಾಲೀಕ ಜಯಂತಿಲಾಲ್ ಗೆ ಶುಭ ಸಮಾರಂಭಕ್ಕೆ ನೆಕ್ಲೆಸ್ ಖರೀದಿಸಲು ಬಂದಿರುವುದಾಗಿ ಹೇಳಿದ್ದ. ಒಂದು ನೆಕ್ಲೆಸ್ ತೋರಿಸಿದ ಬಳಿಕ, ಚೆನ್ನಾಗಿಲ್ಲ ಬೇರೆ ವಿನ್ಯಾಸವಿರುವ ನೆಕ್ಲೆಸ್ ನೀಡುವಂತೆ ಕೇಳಿದ್ದ. ಜಯಂತಿಲಾಲ್ ಬೇರೆ ನೆಕ್ಲೆಸ್ ತರಲು ಒಳಗಿನ ಕೊಠಡಿಗೆ ಹೋಗುತ್ತಿದ್ದಂತೆ, ಆರೋಪಿ ನೆಕ್ಲೆಸ್‍ನ ಎತ್ತಿಕೊಂಡು ಹೊರಗೆ ಓಡಿದ್ದ. ಆತನ ಹಿಂದೆಯೇ ಜಯಂತಿಲಾಲ್ ಕೂಗಿಕೊಂಡ ಹೊರ ಬಂದಿದ್ದರು.
ಸಾರ್ವಜನಿಕರು ಕೂಡ ಕೂಗಾಡಿ ಹಿಡಿಯಲು ಯತ್ನಿಸಿದರು ಸಾಧ್ಯವಾಗಿಲ್ಲ. ಆದರೆ, ಅದೇ ವೇಳೆ ಸುಲ್ತಾನ್ ರಸ್ತೆಯಲ್ಲಿ ಜೀಪ್‍ನಲ್ಲಿ ಬರುತ್ತಿದ್ದ ದೊರೆಸ್ವಾಮಿ, ಆರೋಪಿಗಳನ್ನು ಬೆನ್ನಟ್ಟಿ ದ್ವಿಚಕ್ರ ವಾಹನಕ್ಕೆ ಜೀಪ್ ಗುದ್ದಿಸಿ ಹಿಡಿದಿದ್ದಾಗಿ ಪೊಲೀಸರು ತಿಳಿಸಿದರು. ಬಂಧಿತ ಆರೋಪಿಗಳು ಕಳೆದ ಮೂರು ವರ್ಷಗಳಿಂದ ಕಳ್ಳತನ ಕೃತ್ಯದಲ್ಲಿ ತೊಡಗಿದ್ದು ಕಾಟನ್‍ಪೇಟೆ, ಚಿಕ್ಕಪೇಟೆ, ಚಾಮರಾಜಪೇಟೆ ಯಲ್ಲೂ ಇದೇ ರೀತಿ ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


