ಜಿಲ್ಲಾ ಸುದ್ದಿ

ಇನ್ನುಂದೆ 10 ರು. ನೋಟಿನಲ್ಲಿ ಹಂಪಿಯ ಕಲ್ಲಿನ ರಥ!

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ 8 ಸ್ಮಾರಕಗಳ ಚಿತ್ರಗಳನ್ನು ನೋಟುಗಳಲ್ಲಿ ಮುದ್ರಿಸಲು ಆರ್‌ಬಿಐ ನಿರ್ಧರಿಸಿದ್ದು, ವಿಜಯನಗರ ಸಾಮ್ರಾಜ್ಯದ...

ಇನ್ನುಂದೆ 10 ರು. ನೋಟಿನಲ್ಲಿ ಹಂಪಿಯ ಕಲ್ಲಿನ ರಥ!
ಹಂಪಿ ಕಲ್ಲಿನ ರಥ
Published On :

ಬಳ್ಳಾರಿ: ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ 8 ಸ್ಮಾರಕಗಳ ಚಿತ್ರಗಳನ್ನು ನೋಟುಗಳಲ್ಲಿ ಮುದ್ರಿಸಲು ಆರ್‌ಬಿಐ ನಿರ್ಧರಿಸಿದ್ದು, ವಿಜಯನಗರ ಸಾಮ್ರಾಜ್ಯದ ಅಪರೂಪದ ಸ್ಮಾರಕ ಹಂಪಿಯ ಕಲ್ಲಿನ ರಥ ಇನ್ಮುಂದೆ 10 ರೂಪಾಯಿ ನೋಟಿನಲ್ಲಿ ಕಂಗೊಳಿಸಲಿದೆ.

ಭಾರತೀಯ ನೋಟುಗಳ ವಿನ್ಯಾಸ ಬದಲಿಸಲು ಆರ್‌ಬಿಐ ತೀರ್ಮಾನವಾಗಿದೆ. ದೇಶದ ಇತಿಹಾಸ, ಸಂಸ್ಕೃತಿ ಹಾಗೂ ಪುರಾತನ ಸ್ಮಾರಕಗಳನ್ನು ಪರಿಚಯಿಸುವ ಸಲುವಾಗಿ ಆರ್‌ಬಿಐ ವಿವಿಧ ರಾಜ್ಯಗಳ ಸ್ಮಾರಕಗಳನ್ನು ಆಯ್ದುಕೊಂಡಿದೆ. ಇದರಲ್ಲಿ ಐತಿಹಾಸಿಕ ಹಂಪಿಯ ಕಲ್ಲಿನ ತೇರು ಇರುವುದು ವಿಶೇಷವಾಗಿದೆ.

ಹಂಪಿಯ ಕಲ್ಲಿನ ರಥದ ಜೊತೆ ದೆಹಲಿಯ ಕೆಂಪುಕೋಟೆ, ಕೊನಾರ್ಕ್ ನ ಸೂರ್ಯ ದೇವಾಲಯ, ಆಗ್ರಾದ ತಾಜ್ ಮಹಲ್ , ಗೋವಾದ ಪುರಾತನ ಚರ್ಚ್ ಹಾಗೂ ಕನ್ವೆಂಟ್ಸ್ , ಅಜಂತಾ ಗುಹಾಲಯ ಹಾಗೂ ಗುಹಾಲಯದ ಪದ್ಮಪಾಣಿ ಚಿತ್ರವೂ ನೋಟುಗಳಲ್ಲಿ ರಾರಾಜಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.