ಜಿಲ್ಲಾ ಸುದ್ದಿ

ಜಾಹೀರಾತು ಅಕ್ರಮ: ಬಿಬಿಎಂಪಿಗೆ ರೂ. 2 ಸಾವಿರ ಕೋಟಿ ನಷ್ಟ

ಜಾಹಿರಾತು ಫಲಕ ತೆರಿಗೆ ವಸೂಲಿಯಲ್ಲಿನ ವೈಫಲ್ಯದಿಂದ ಅಂದಾಜು ರೂ.2 ಸಾವಿರ ಕೋಟಿ ನಷ್ಟವಾಗಿದೆ

ಜಾಹೀರಾತು ಅಕ್ರಮ: ಬಿಬಿಎಂಪಿಗೆ ರೂ. 2 ಸಾವಿರ ಕೋಟಿ ನಷ್ಟ
ಜಾಹಿರಾತು ಫಲಕ ( ಸಂಗ್ರಹ ಚಿತ್ರ)
Published On :

ಬೆಂಗಳೂರು: ಜಾಹಿರಾತು ವಿಭಾಗದ ಅಕ್ರಮದ ಬಗ್ಗೆ ಸಹಾಯಕ ಆಯುಕ್ತ ಕೆ.ಮಥಾಯ್ ಸಲ್ಲಿಸಿರುವ ವರದಿಯನ್ನು ದಾಖಲೆಗಳ ಸಹಿತ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ ವಿಜಯಭಾಸ್ಕರ್ ತಿಳಿಸಿದ್ದಾರೆ.

ಜಾಹಿರಾತು ಫಲಕ ತೆರಿಗೆ ವಸೂಲಿಯಲ್ಲಿನ ವೈಫಲ್ಯದಿಂದ ಅಂದಾಜು ರೂ.2 ಸಾವಿರ ಕೋಟಿ ನಷ್ಟವಾಗಿದೆ ಎಂದು ಸಹಾಯಕ ಆಯುಕ್ತ ಕೆ.ಮಥಾಯ್ ನೀಡಿದ ವರದಿಯ ಬಗ್ಗೆ ಬಿಬಿಎಂಪಿ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆ ನಂತರ ಮಾತನಾಡಿದ ಆಡಳಿತಾಧಿಕಾರಿ ಟಿ.ಎಂ ವಿಜಯಭಾಸ್ಕರ್, ನಗರದಲ್ಲಿ 23 ಸಾವಿರ ಅನಧಿಕೃತ ಫಲಕಗಳಿವೆ ಇದರಿಂದಾಗಿ ರೂ.2 ಸಾವಿರ ಕೋಟಿ ನಷ್ಟವಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಇದಕ್ಕೆ ಇನ್ನೂ ಸೂಕ್ತ ದಾಖಲೆಗಳು ಲಭ್ಯವಾಗಿಲ್ಲ. ವರದಿ ಪರಿಶೀಲಿಸಿ ಪೂರಕವಾದ ದಾಖಲೆ ಕ್ರೋಡೀಕರಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಮುಂಬೈ ಮಹಾನಗರ ಪಾಲಿಕೆಯಲ್ಲಿ ಜಾಹಿರಾತಿನಿಂದ ಪ್ರತಿ ವರ್ಷ ರೂ.150 ಕೋಟಿ ಸಂಗ್ರಹವಾಗುತ್ತಿತ್ತು. ಬಿಬಿಎಂಪಿಯಲ್ಲಿ ರೂ.30 -35 ಕೋಟಿ ಆದಾಯ ಕ್ರೋಡೀಕರಣವಾಗುತ್ತಿದೆ. ವಿಭಾಗದಲ್ಲಿ ಕಠಿಣ ನಿಯಮ ತಂದರೆ ಆದಾಯ ದುಪ್ಪಟ್ಟು ಮಾಡಬಹುದು. ಜಾಹಿರಾತುಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳಿದ್ದು ಕಾನೂನು ಕೋಶದಲ್ಲಿ ಸೂಕ್ತ ಮಾಹಿತಿ ಇಲ್ಲ ಹಳೆಯ ಪ್ರಕರಣ ಸಮೀಕ್ಷೆ ಮಾಡಿ ಪಟ್ಟಿ ಸಿದ್ಧಪಡಿಸಬೇಕು ಎಂದು ಕೋಶದ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಕೆಲವು ಪ್ರಕರಣಗಳಲ್ಲಿ ಕಾನೂನು ಕೋಶದ ವಕೀಲರು ನ್ಯಾಯಾಲಯದಲ್ಲಿ ನಿರಂತರ ಗೈರಾಗಿದ್ದರು ಎಂದು ವರದಿ ಹೇಳಿದೆ. ಜಾಹಿರಾತುದಾರರು  ಹಾಗೂ ಅಧಿಕಾರಿಗಳ ಅಪವಿತ್ರ ಮೈತ್ರಿಯಿಂದ ಪಾಲಿಕೆ ಬೊಕ್ಕಸಕ್ಕೆ ಕಳೆದ 8 ವರ್ಷಗಳಲ್ಲಿ ಅಂದಾಜು ರೂ.2 ಸಾವಿರ ಕೋಟಿ ನಷ್ಟವಾಗಿದೆ.

2007 ರಲ್ಲಿ ಜಾಹೀರಾತು ಉಪವಿಧಿ ಜಾರಿಗೆ ಬಂದ ನಂತರ ಅನಧಿಕೃತ ಫಲಕಗಳಿಗೆ ದಂಡ ವಿಧಿಸದೇ ಅಳತೆಗೆ ಅನ್ನುಸಾರ ತೆರಿಗೆ ವಸೂಲಿ ಮ್ಮಾಡದಿರುವುದರಿಂದ ನಷ್ಟವಾಗಿದೆ. ಜಾಹಿರಾತು ವಿಭಾಗದಲ್ಲಿ ವರ್ಷಕ್ಕೆ ಸುಮಾರು 30 ಕೋಟಿ ತೆರಿಗೆ ಸಂಗ್ರವಾಗುತ್ತಿದ್ದು ಅಕ್ರಮ ತಡೆಗಟ್ಟಿದರೆ 300 -500 ಕೋಟಿ ಆದಾಯ ಬರಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.