ಖಾಸಗಿ, ಅನುದಾನಿತ ಕಾಲೇಜುಗಳಿಗೆ ಕಂಟಕ
ನಿಯಮದಷ್ಟು ಮೂಲಭೂತ ಸೌಕರ್ಯ ಹೊಂದದ ರಾಜ್ಯದ ಖಾಸಗಿ ಮತ್ತು ಅನುದಾನಿತ ಪಿಯು ಕಾಲೇಜುಗಳಿಗೆ ಕಂಟಕ ಎದುರಾಗಿದೆ...

ಬೆಂಗಳೂರು: ನಿಯಮದಷ್ಟು ಮೂಲಭೂತ ಸೌಕರ್ಯ ಹೊಂದದ ರಾಜ್ಯದ ಖಾಸಗಿ ಮತ್ತು ಅನುದಾನಿತ ಪಿಯು ಕಾಲೇಜುಗಳಿಗೆ ಕಂಟಕ ಎದುರಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಾಯಿಕೊಡೆಗಳಂತೆ ತಲೆಎತ್ತಿದ ಪದವಿಪೂರ್ವ ಕಾಲೇಜುಗಳು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಳ್ಳುವಲ್ಲಿ ಎಡವಿರುವ ನೂರಾರು ಪ್ರಕರಣಗಳಿವೆ. ಇದನ್ನು
ಮನಗಂಡ ಹೈಕೋರ್ಟ್ ಪೀಠವು ಜನವರಿಯಲ್ಲಿ ಪಿಯು ಕಾಲೇಜೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವಾಗ ಕಾಲೇಜುಗಳ ಸಮಗ್ರ ಮೂಲಭೂತ ಸೌಕರ್ಯ
ಕುರಿತಂತೆಯೂ ಆದೇಶವೊಂದನ್ನು ಹೊರಡಿಸಿತು. ಆ ನಿಯಮದಂತೆ ಮೂಲಭೂತ ಸೌಕರ್ಯ ಹೊಂದದ ಕಾಲೇಜುಗಳಿಗೆ ನೋಟಿಸ್ ನೀಡಿ, ಸರಿದ ವಿವರಣೆ ನೀಡದೇ ಇದ್ದರೆ ಅಂತಹಕಾಲೇಜುಗಳನ್ನು ಮುಚ್ಚಿ ಎಂದು ಆದೇಶ ಹೊರಡಿಸಿತ್ತು. ಅದೇ ರೀತಿ ಲೋಕಾಯುಕ್ತ ಸಹಇಲಾಖೆಗೆ ಸೂಚನೆ ನೀಡಿ ಕ್ರಮ ಕೈಗೊಳ್ಳುವಂತೆ ಆದೇಶಿಸಿತ್ತು. ಅದರಂತೆ, ಪದವಿಪೂರ್ವ ಶಿಕ್ಷಣ ಇಲಾಖೆ ಇದೀಗ ಕಾರ್ಯಾಚರಣೆಗಿಳಿದಿದೆ.
ವರದಿಗೆ ಸೂಚನೆ: ಲೋಕಾಯುಕ್ತರ ಸೂಚನೆ ಹಾಗೂ 6 ತಿಂಗಳೊಳಗೆ ಕ್ರಮ ಕೈಗೊಳ್ಳಬೇಕೆಂಬ ಹೈಕೋರ್ಟ್ ಆದೇಶವನ್ನು ಕೂಡಲೇ ಅನುಷ್ಠಾನಗೊಳಿಸಬೇಕಿದೆ. ಅದರಂತೆ ಪದವಿಪೂರ್ವ ಶಿಕ್ಷಣ ನಿಯಮಗಳು 2006ರ ನಿಯಮ 4ಕ್ಕೆ ಅನುಗುಣವಾಗಿ ನಿಗದಿತ ಅಳತೆಯ ನಿವೇಶನ ಹೊಂದದೇ ಇರುವ ಹಾಗೂ ಇನ್ನಿತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದದಿರುವ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಶೈಕ್ಷಣಿಕ ಮಾನ್ಯತೆ ಮುಂದುವರಿಸುವ ಮತ್ತು ಹಿಂಪಡೆಯುವ ಬಗ್ಗೆ ತ್ವರಿತ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಇಲಾಖೆಯು ಜಿಲ್ಲಾ ಹಂತದ ಅ„ಕಾರಿಗಳಿಗೆ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ. ಈ ನಿಟ್ಟಿನಲ್ಲಿ ಪಪೂ ಶಿಕ್ಷಣ ನಿಯಮಗಳು 2006ರ ನಿಯಮ 5 ಅನ್ವಯ ಆಯಾ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ತಪಾಸಣೆ, ಪರಿಶೀಲನೆ ಮಾಡುವ ಅಧಿಕಾರ ಹೊಂದಿರುವ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಸ್ಥಳ ತಪಾಸಣೆ,
ಪರಿಶೀಲನೆ ನಡೆಸಿ ನಿಯಮ ನಾಲ್ಕರ ಅನ್ವಯ ನಿಗದಿತ ಅಳತೆಯ ನಿವೇಶನ ಮತ್ತು ಇನ್ನಿತರೆ ಎಲ್ಲ ಅಗತ್ಯ ಮೂಲಭೂತ ಸೌಕರ್ಯ, ಸೌಲಭ್ಯಗಳನ್ನು ಹೊಂದಿವೆಯೇ ಇಲ್ಲವೇ ಎಂಬ ಬಗ್ಗೆ ಸ್ಪಷ್ಟ ಹಾಗೂ ನಿಖರ ಮಾಹಿತಿ ವರದಿಯನ್ನು ನೀಡಲು ಸೂಚಿಸಲಾಗಿದೆ. ಇನ್ನು ಮುಖ್ಯವಾಗಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಜುಲೈ 25ರೊಳಗೆ ಅಗತ್ಯ ಪೂರಕ ದಾಖಲೆಗಳೊಂದಿಗೆಮುದ್ದಾಮಾ ಇಲಾಖೆಗೆ ಸಲ್ಲಿಸುವಂತೆ ಕಟ್ಟಾಜ್ಞೆ ಹೊರಡಿಸಲಾಗಿದೆ. ಜೊತೆಗೆ ಈ ಕಾರ್ಯಕ್ಕೆ ತಮ್ಮಜಿಲ್ಲೆಯಲ್ಲಿನ ಅನುಭವಿ, ನಿಷ್ಠಾವಂತ, ನಿಷ್ಪಕ್ಷಪಾತ ಹಾಗೂ ನಂಬಿಕೆಗೆ ಅರ್ಹರಾದ ಪ್ರಾಚಾರ್ಯರು ಉಪನ್ಯಾಸಕರ ಸೇವೆಯನ್ನು ಬಳಸಿಕೊಳ್ಳುವಂತೆ ಇಲಾಖೆ ತಿಳಿಸಿದೆ. ಒಂದು ವೇಳೆ ಈ ಕಾರ್ಯವನ್ನು ನಿಗದಿತ ಅವಧಿಯೊಳಗೆ ವರದಿ ಸಲ್ಲಿಸಲು ವಿಳಂಬವಾಗಿ ಹೈಕೋರ್ಟ್ ತೀರ್ಪನ್ನು ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗದೇ ಇದ್ದಲ್ಲಿ ಇದರ ಸಂಪೂರ್ಣ ಜವಾಬ್ದಾರಿ ಜಿಲ್ಲಾ ಉಪನಿರ್ದೇಶಕರ ಮೇಲೆ ಹೊರಿಸಲಾಗುತ್ತದೆ ಎಂದು ಇಲಾಖೆಯ ಜಂಟಿ ನಿರ್ದೇಶಕರು (ಮಾನ್ಯತೆ ಮತ್ತು ಅನುದಾನ) ಆದೇಶದಲ್ಲಿ ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


