ಜಿಲ್ಲಾ ಸುದ್ದಿ

ಹೆದ್ದಾರಿಯಲ್ಲಿ ದರೋಡೆ ನಡೆಸುತ್ತಿದ್ದ ಮೊದಲ ಖತರ್ನಾಕ್ ಮಹಿಳಾ ಗ್ಯಾಂಗ್ ಬಂಧನ

ಹೆದ್ದಾರಿಯ ಟೋಲ್ ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಲಾರಿಗಳನ್ನು ಹತ್ತಿ ನಂತರ ಚಾಲಕ ಮತ್ತು ಆತನ ಸಹಾಯಕನನ್ನು ಬೆದರಿಸಿ ದೋಚುತ್ತಿದ್ದ...

ಹೆದ್ದಾರಿಯಲ್ಲಿ ದರೋಡೆ ನಡೆಸುತ್ತಿದ್ದ ಮೊದಲ ಖತರ್ನಾಕ್ ಮಹಿಳಾ ಗ್ಯಾಂಗ್ ಬಂಧನ
ದರೋಡೆ ಮಾಡುತ್ತಿದ್ದ ಮಹಿಳ ತಂಡ
Published On :

ಹೆದ್ದಾರಿಯ ಟೋಲ್ ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಲಾರಿಗಳನ್ನು ಹತ್ತಿ ನಂತರ ಚಾಲಕ ಮತ್ತು ಆತನ ಸಹಾಯಕನನ್ನು ಬೆದರಿಸಿ ದೋಚುತ್ತಿದ್ದ ಮಹಿಳಾ ಡಕಾಯಿತರ ತಂಡವನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.

ತಂಡದ ಮುಖ್ಯಸ್ಥೆ ರಾಜಬಾಯಿ, ನೀಲಬಾಯಿ, ಪಲ್ಲವಿ, ರಾಧಿಕಾ, ಗಂಗಾ, ಮತ್ತು ಸರಿತಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಮಧ್ಯ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಸುಮಾರು ಆರು ದರೋಡೆಗಳನ್ನು ಈ ತಂಡ ನಡೆಸಿತ್ತು.

ರಾಷ್ಟ್ರೀಯ ಹೆದ್ದಾರಿ 4ರ ಚೆನ್ನೈ- ಮುಂಬಯಿ, ಅಂಕೋಲಾ-ಊಟಿ ರಸ್ತೆಯಲ್ಲಿ ಸಂಚರಿಸುವ ಲಾರಿಗಳೇ ಇವರ ಮೈನ್ ಟಾರ್ಗೆಟ್. ಈ ರಸ್ತೆಯಲ್ಲಿ ಬರುವ ಪಂಜಾಬ್, ಗುಜರಾತ್ ಮತ್ತು ಹರ್ಯಾಣ ರಾಜ್ಯಗಳಿಂದ ಬರುವ ಲಾರಿಗಳನ್ನು ತಡೆದು ಲಿಫ್ಟ್ ಕೇಳುತ್ತಿದ್ದರು.

ಮೊದಲೇ ಪ್ಲಾನ್ ಮಾಡಿದ ಹಾಗೇ ತಂಡದ ಹಿರಿಯ ಸದಸ್ಯೆ ಲಾರಿಯಲ್ಲಿ ಹತ್ತಿ ಚಾಲಕ ಮತ್ತು ಆತನ ಸಹಾಯಕನ ಪೂರ್ವಾಪರಗಳನ್ನು ವಿಚಾರಿಸಿಕೊಳ್ಳುತ್ತಿದ್ದಳು. ಮೊದಲೆ ನಿರ್ಧರಿಸಿದ್ದ ಸ್ಥಳದಲ್ಲಿ ಲಾರಿ ನಿಲ್ಲಿಸುವಂತೆ ಮನವಿ ಮಾಡಿದ ರಾಜಬಾಯಿ ತನ್ನ ತಂಡದ ಇನ್ನಿಬ್ಬರು ಸದಸ್ಯೆಯರನ್ನು ಮುಂದಿನ ಯಾವುದೋ ಒಂದು ಸ್ಥಳದಲ್ಲಿ ಲಾರಿಗೆ ಹತ್ತಿಸಿಕೊಳ್ಳುತ್ತಿದ್ದಳು.

ಅನಂತರ ಸರಿತ ಮತ್ತು ಗಂಗಾ ಇಬ್ಬರ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ತಿಳಿಸಿ, ಪಿಂಪ್ ಕೆಲಸ ಮಾಡುತ್ತಿದ್ದಳು. ಸಂಜೆಯಾಗುತ್ತಿದ್ದಂತೆ ಲಾರಿಯನ್ನು ಜನ ಸಂಚಾರವಿಲ್ಲದ ಪ್ರದೇಶದಲ್ಲಿ ನಿಲ್ಲಿಸುವಂತೆ ತಿಳಿಸುತ್ತಿದ್ದಳು. ಅಲ್ಲಿಗೆ ಕರೆದುಕೊಂಡು ಹೋಗಿ ಚಾಲಕ ಮತ್ತು ಕ್ಲೀನರ್ ಮೇಲೆ ಎರಗಿ, ಚಾಕು ಮತ್ತು ಕತ್ತಿಗಳನ್ನು ತೋರಿಸಿ ಅವರಿಂದ ಹಣ ಹಾಗೂ ಅವರ ಬಳಿಯಿರುವ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು ಎಂದು ಕೊಪ್ಪಳ ಪಿಎಸ್ಐ ಚಿತ್ತರಂಜನ್ ತಿಳಿಸಿದ್ದಾರೆ.

ಈ ಸಂಬಂಧ ಸ್ಥಳೀಯ ಠಾಣೆಗಳಲ್ಲಿ ಲಾರಿ ಚಾಲಕರು ದೂರು ದಾಖಲಿಸಿದ್ದರು. ಗುರುವಾರ ರಾಜಬಾಯಿ ಮತ್ತೆ ದರೋಡೆ ನಡೆಸಲು ಲಾರಿಯಲ್ಲಿ ಲಿಫ್ಟ್ ಕೇಳಿದ್ದಾಳೆ. ಈ ವೇಳೆ ಮಾಹಿತಿ ಪಡೆದ ಪೊಲೀಸರು ರಾಜಬಾಯಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾವು ನಡೆಸಿದ ಕೃತ್ಯಗಳಬಗ್ಗೆ ವಿವರಣೆ ನೀಡಿದ್ದಾಳೆ. ಈ ಸಂಬಂಧ ತಂಡದ ಉಳಿದ ಮಹಿಳಾ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.