ಜಿಲ್ಲಾ ಸುದ್ದಿ

ಜುಲೈ 12ರಂದು ನಗರದಲ್ಲಿ 'ಮಳೆ ನಿಲ್ಲುವವರೆಗೆ' ನಾಟಕ ಪ್ರದರ್ಶನ

ಸರ್ಕಾರಿ ಶಾಲೆಯ ಅಭಿವೃದ್ಧಿ ಕಾರ್ಯಕ್ಕಾಗಿ ಹಣದ ಕೊರತೆಯನ್ನು ನೀಗಿಸುವ ಸಲುವಾಗಿ ಕಲಾ ರಂಗ ಲೋಕ ಮತ್ತು ರೋಟರಿ ಬೆಂಗಳೂರು ನ್ಯಾಷನಲ್ ಪಾರ್ಕ್...

ಜುಲೈ 12ರಂದು ನಗರದಲ್ಲಿ 'ಮಳೆ ನಿಲ್ಲುವವರೆಗೆ' ನಾಟಕ ಪ್ರದರ್ಶನ
ಪತ್ರಿಕಾಗೋಷ್ಠಿ ನಡೆಸಿದ ಕಲಾ ರಂಗ ಲೋಕ ಮತ್ತು ರೋಟರಿ ನ್ಯಾಷನಲ್ ಪಾರ್ಕ್ ನ ಸದಸ್ಯರು
Published On :

ಬೆಂಗಳೂರು: ಸರ್ಕಾರಿ ಶಾಲೆಯ ಅಭಿವೃದ್ಧಿ ಕಾರ್ಯಕ್ಕಾಗಿ ಹಣದ ಕೊರತೆಯನ್ನು ನೀಗಿಸುವ ಸಲುವಾಗಿ ಕಲಾ ರಂಗ ಲೋಕ ಮತ್ತು ರೋಟರಿ ಬೆಂಗಳೂರು ನ್ಯಾಷನಲ್ ಪಾರ್ಕ್ ಸಹಯೋಗದಲ್ಲಿ ಜುಲೈ 12ರಂದು 'ಮಳೆ ನಿಲ್ಲುವವರೆಗೆ' ಎಂಬ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಭಾನುವಾರ ಸಂಜೆ 7 ಗಂಟೆಗೆ ಎಡಿಎ ರಂಗ ಮಂದಿರಲ್ಲಿ ಮಳೆ ನಿಲ್ಲುವವರೆಗೆ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಹವ್ಯಾಸಿ ಕಲಾವಿದರಾದ ಗೋಪಾಲಕೃಷ್ಣ, ಸತೀಶ್ ಐತಾಳ್, ವಿಕಾಸ್, ಸುಬ್ಬು, ಆದರ್ಶ್, ವಿಜು ನಡೆಸಿಕೊಡಲಿದ್ದಾರೆ ಎಂದು ಹವ್ಯಾಸಿ ಕಲಾವಿದರಾದ ಕೆಎಸ್ ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನ ಬಿಳೇಕಳ್ಳಿಯಲ್ಲಿ ಸರ್ಕಾರ ಶಾಲೆಯ ಅಭಿವೃದ್ಧಿ ಕಾರ್ಯಕ್ಕಾಗಿ ರೋಟರಿ ನ್ಯಾಷನಲ್ ಪಾರ್ಕ್ ಮುಂದಾಗಿದ್ದು, ಇದಕ್ಕೆ ತಗಲುವ ವೆಚ್ಚವನ್ನು ಭರಿಸಲು ಕಲಾ ರಂಗ ಲೋಕ ಸಾಥ್ ನೀಡಿದೆ. ನಾಟಕ ಪ್ರದರ್ಶನಕ್ಕೆ bookmyshow.comನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ 9740251718 ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.