ದಂಪತಿ ಹಂತಕನ ಬಂಧನ
ವಿವಾಹವಾದ ಕೆಲವೇ ತಿಂಗಳಲ್ಲಿ ಪತಿಯನ್ನು ತ್ಯಜಿಸಿ, ಪ್ರೀತಿಸಿದವನ ಜತೆ ಓಡಿ ಹೋಗಿ ವಿವಾಹವಾಗಿದ್ದ ಮಹಿಳೆ ಮತ್ತು ಆಕೆಯ ಪ್ರಿಯಕರನ ಹಂತಕ ಪೊಲೀಸರ ಬಲೆಗೆ ಬಿದ್ದಿದ್ದಾನೆ...

ಬೆಂಗಳೂರು: ವಿವಾಹವಾದ ಕೆಲವೇ ತಿಂಗಳಲ್ಲಿ ಪತಿಯನ್ನು ತ್ಯಜಿಸಿ, ಪ್ರೀತಿಸಿದವನ ಜತೆ ಓಡಿ ಹೋಗಿ ವಿವಾಹವಾಗಿದ್ದ ಮಹಿಳೆ ಮತ್ತು ಆಕೆಯ ಪ್ರಿಯಕರನ ಹಂತಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಸೋಲದೇವನಹಳ್ಳಿ ಪೊಲೀಸರು 24 ಗಂಟೆಯಲ್ಲಿ ಜೋಡಿ ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಎರೆಹಂಚಿನಾಳ ಗ್ರಾಮದ ಹನುಮಂತರಾಯಪ್ಪ ಬಂಧಿತ ಆರೋಪಿ. ಈತ ದೊಡ್ಡಬಳ್ಳಾಪುರದ ಬಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಸಹೋದರಿಯಿಂದ ತಮ್ಮ ಕುಟುಂಬದ ಮರ್ಯಾದೆ ಹಾಳಾಗಿತ್ತು ಎಂಬ ಕಾರಣಕ್ಕಾಗಿ ಈತ ಶನಿವಾರ ಮಧ್ಯರಾತ್ರಿ ಸೋದರಿ ಕಸ್ತೂರಿ (25) ಹಾಗೂ ಆಕೆ ಪ್ರಿಯಕರ ಬಸವರಾಜ (28)ರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ.
ವಿವಾಹವಾದ ನಂತರ ಪತಿಯನ್ನು ಬಿಟ್ಟು ಬಂದು ಬೇರೆ ಜಾತಿಯವನ ಜತೆ ಸಂಸಾರ ಮಾಡುತ್ತಿದ್ದಾಳೆ. ಇದು ಇಡೀ ಕುಟುಂಬ ಸದಸ್ಯರನ್ನು ಅವಮಾನಿಸಿದಂತೆ. ನಮ್ಮ ಕುಟುಂಬದ ಮರ್ಯಾದೆ ಹೋಗಿದೆ. ಇದರಿಂದ ಬೇಸರವಾಗಿ ಅವರಿರುವ ವಿಳಾಸ ಪತ್ತೆ ಮಾಡಲಾಯಿತು. ಹೆಸರಘಟ್ಟ ಬಳಿಯ ವಿನಾಯಕನಗರದಲ್ಲಿ ಆಕೆ ಬಸವರಾಜು ಜತೆ ವಾಸವಿರುವುದು ತಿಳಿದು ಶನಿವಾರ ಮನೆಗೆ ಬಂದು, ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ ನಂತರ ಇಬ್ಬರನ್ನೂ ಕೊಲೆ ಮಾಡಿದೆ. ಮೊದಲು ತಂಗಿಯ ಹೊಟ್ಟೆಗೆ ಇರಿದೆ. ಆಕೆ ಜೋರಾಗಿ ಕಿರುಚಿದ್ದರಿಂದ ಬಸವರಾಜು ಎಚ್ಚರಗೊಂಡ ನಂತರ ಆತನಿಗೂ ಇರಿದೆ ಎಂದು ಪೊಲೀಸರ ಬಳಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ ಆಧರಿಸಿ ಬಂಧನ:ಆರೋಪಿಯ ಮೊಬೈಲ್ ನೆಟ್ ವರ್ಕ್ ಆಧರಿಸಿ ಆತನನ್ನು ಹಿಂಬಾಲಿಸಿದ ಪೊಲೀಸರು ದೊಡ್ಡಬಳ್ಳಾಪುರ ಬಳಿ ಬಂಧಿಸಿದ್ದಾರೆ. ಆರೋಪಿಯಿಂದ ಹತ್ಯೆಗೆ ಬಳಸಿದ ಅಸ್ತ್ರವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅಗತ್ಯವಿದ್ದು, ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು. ತನಿಖೆ ಮುಕ್ತಾಯವಾದ ಬಳಿಕ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


