ಅಂತಾರಾಷ್ಟ್ರೀಯ ನಾಣ್ಯ ವಿನ್ಯಾಸ ಕಲಾ ಸ್ಪರ್ಧೆಯಲ್ಲಿ ಬೆಂಗಳೂರು ವಿದ್ಯಾರ್ಥಿನಿಗೆ ಬಹುಮಾನ
ಜಪಾನ್‍ನಲ್ಲಿ ನಡೆದ ಅಂತಾ ರಾಷ್ಟ್ರೀಯ ನಾಣ್ಯ ವಿನ್ಯಾಸ ಸ್ಪರ್ಧೆಯಲ್ಲಿ ನಗರದ ಮೌಂಟ್ ಕಾರ್ಮಲ್ ಕಾಲೇಜಿ..

ಬೆಂಗಳೂರು: ಜಪಾನ್‍ನಲ್ಲಿ ನಡೆದ ಅಂತಾ ರಾಷ್ಟ್ರೀಯ ನಾಣ್ಯ ವಿನ್ಯಾಸ ಸ್ಪರ್ಧೆಯಲ್ಲಿ ನಗರದ ಮೌಂಟ್ ಕಾರ್ಮಲ್ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಬಿ.ಟಿ.ಹರಿಣಿಶ್ರೀ ಅವರು ನಾಲ್ಕನೇ ಬಹುಮಾನ ಹಾಗೂ ಸ್ಪೆಷಲ್ ಜ್ಯೂರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಐದು ದೇಶಗಳ ಒಟ್ಟು 187 ಕಲಾಕೃತಿಗಳ ಪೈಕಿ ಸಂಸ್ಥೆಯ 14 ವಿದ್ಯಾರ್ಥಿಗಳು ಕಳುಹಿಸಿದ್ದ 33 ಕಲಾಕೃತಿಗಳಲ್ಲಿ ಹರಿಣಿ ಅವರ `ಕಾಸ್ಮಿಕ್ ಡ್ಯಾನ್ಸರ್' ಎಂಬ ಶಿವನ ಕಲಾಕೃತಿ ವಿಶೇಷ ಮನ್ನಣೆಗೆ ಪಾತ್ರ ವಾಗಿದೆ ಎಂದು ಲಲಿತಕಲಾ ಸೆಂಟರ್ ಫಾರ್ ವಿಶುಯಲ್ ಆರ್ಟ್ಸ್ ಸಂಸ್ಥೆ ಅಧ್ಯಕ್ಷ ಎಸ್.ಜಯವಿನು ಕುಮಾರ್ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಸ್ಪರ್ಧೆಯಲ್ಲಿ ಒಟ್ಟು 4 ಉತ್ತಮ ಕಲಾಕೃತಿಯನ್ನು ಗುರುತಿಸಲಾಗಿದ್ದು, ಹರಿಣಿ ಅವರ ಕಲಾಕೃತಿಗೆ 418 ಡಾಲರ್ (ಸುಮಾರು 25 ಸಾವಿರ ರುಪಾಯಿ) ನಗದು ಬಹುಮಾನ ಸಿಕ್ಕಿದೆ. `ಜಗದ ನರ್ತಕ ನಟರಾಜ' ಎಂಬ ಶೀರ್ಷಿಕೆಯಡಿ ನಾಣ್ಯದ ಎರಡು ಮುಖಗಳನ್ನು ವಿನ್ಯಾಸಗೊಳಿಸಿ ಕಲಾಕೃತಿ ರಚಿಸಿದ್ದ ಹರಿಣಿ, ಭರತನಾಟ್ಯ, ಕಥಕ್ ನೃತ್ಯಗಾರ್ತಿಯೂ ಆಗಿದ್ದು, ಈ ಪ್ರಶಸ್ತಿ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ಶ್ಲಾಘಿಸಿದರು. ಸುದ್ದಿಗೋಷ್ಠಿಯಲ್ಲಿ ಕಲಾವಿದೆ ಬಿ.ಟಿ.ಹರಿಣಿಶ್ರೀ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


